ಚಿಕ್ಕಮಗಳೂರು: ಮಧುಗಿರಿಯ ಅತುಲ್ ಕುಮಾರ್ ಎಂಬಾತ ಮಧುಗಿರಿ ಮೋದಿ ಎಂಬ ಹೆಸರಿನಲ್ಲಿ, ಮುಸ್ಲಿಮ್ ಧರ್ಮದ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ರವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಡಿವಿಷನ್ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ನಾಯಕರು, ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರನ್ನು, ಅವರ ಕಛೇರಿಯಲ್ಲಿ ಭೇಟಿಯಾಗಿ ದೂರು ದಾಖಲು ಮಾಡಲು ಮನವಿಯನ್ನು ಸಲ್ಲಿಸಿತು.
ವಿಶ್ವದ ಮುಸ್ಲಿಮ್ ಧರ್ಮವನ್ನು ಕೆರಳಿಸುವ ಕೆಲಸ ಮಾಡಿರುವ ಇವನನ್ನು ಶಾಶ್ವತವಾಗಿ ಬಂಧಿಸಬೇಕೆಂದು ಆಗ್ರಹಿಸಿತು. ದೂರು ಸ್ವೀಕರಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರು ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಅಧ್ಯಕ್ಷರಾದ ಮುನೀರ್ ಶಾಂತಿನಗರ, ಡಿವಿಷನ್ ಅಧ್ಯಕ್ಷರಾದ ಮುಸ್ತಫ ಝುಹ್ರಿ, ಡಿವಿಷನ್ ಕಾರ್ಯದರ್ಶಿ ಮುಹಮ್ಮದ್ ಸಫ್ವಾನ್, ಸದಸ್ಯರಾದ ಶಾಹೀನ್ ಅಲೀ ಎಸ್.ಬಿ, ಮೀರಾನ್ ಉಪಸ್ಥಿತರಿದ್ದರು















ಇನ್ನಷ್ಟು ಸುದ್ದಿಗಳು
ಚಿಕ್ಕಮಗಳೂರು ಸಲಾಂ ಮಸೀದಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ
ಚಿಕ್ಕಮಗಳೂರು: ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಿಗೆ ಸನ್ಮಾನ
ಚಿಕ್ಕಮಗಳೂರು: ಜಾಮಿಯಾ ಕಂಝುಲ್ ಈಮಾನ್ ನಲ್ಲಿ ಅದ್ದೂರಿ ಸ್ವಾತಂತ್ರ್ಯೋತ್ಸವ ಸಮಾರಂಭ
ಚಿಕ್ಕಮಗಳೂರು ಜಿಲ್ಲಾ ವಕ್ಫ್ ಮಂಡಳಿ- ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ
ಪ್ರವಾದಿ ನಿಂದನೆ- ತಪ್ಪಿತಸ್ಥರ ಶೀಘ್ರ ಬಂಧನಕ್ಕೆ ಚಿಕ್ಕಮಗಳೂರು ಮುಸ್ಲಿಂ ಜಮಾಅತ್ ಒತ್ತಾಯ
ಬಜರಂಗದಳ ಪುಂಡಾಟಿಕೆ : ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೇಟಿ
ಜಾಮಿಯಾ ಕಂಝುಲ್ ಈಮಾನ್ ನಲ್ಲಿ ಗಣರಾಜ್ಯೋತ್ಸವ
ಚಿಕ್ಕಮಗಳೂರು ನಗರ ಸಭೆ ಚುನಾವಣೆ: ಮೊದಲ ಹಂತದ SDPI ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಚಿಕ್ಕಮಗಳೂರು: ಜಾಮಿಯಾ ಕಂಜುಲ್ ಇಮಾನ್ ನಿಂದ ಸ್ವಾತಂತ್ರ್ಯ ದಿನಾಚರಣೆ
ಜಾಮಿಯಾ ಕಂಝುಲ್ ಇಮಾನ್ ಚಿಕ್ಕಮಗಳೂರು: ಗಣರಾಜ್ಯೋತ್ಸವ ಆಚರಣೆ