janadhvani

Kannada Online News Paper

ಫೆ.20ರಂದು ‘ಪ್ರಜಾಭಾರತ’ಕ್ಕೆ ಚಾಲನೆ;ಪದ್ಮಶ್ರೀ ಹರೇಕಳ ಹಾಜಬ್ಬರಿಂದ ಉದ್ಘಾಟನೆ

ಕರ್ನಾಟಕ ಮುಸ್ಲಿಂ ಜಮಾಅತ್ ಹಮ್ಮಿಕೊಂಡಿರುವ ‘ಪ್ರಜಾ ಭಾರತ’ ಜನಜಾಗೃತಿ ಅಭಿಯಾನಕ್ಕೆ ವಿಶ್ವ ಸಾಮಾಜಿಕ ನ್ಯಾಯ ದಿನವಾದ ಫೆಬ್ರವರಿ 20ರಂದು ಉಡುಪಿಯಲ್ಲಿ ಚಾಲನೆ ನೀಡಲಾಗುತ್ತಿದ್ದು, ಇತ್ತೀಚೆಗೆ ಪದ್ಮಶ್ರೀ ಪುರಸ್ಕೃತರಾಗಿರುವ ಅಕ್ಷರ ಸಂತ ಹರೇಕಳ ಹಾಜಬ್ಬ ಉದ್ಘಾಟಿಸುವರು.

ಎನ್ಸಿಆರ್ ನಂತಹ ವಿವಾದಾತ್ಮಕ ಪೌರತ್ವ ಸಂಬಂಧಿತ ಕಾಯ್ದೆಗಳಿಂದ ಬಹುಜನ ಭಾರತೀಯರು ಆತಂಕಿತರಾಗಿರುವ ಹಿನ್ನೆಲೆಯಲ್ಲಿ ವಸ್ತುಸ್ಥಿತಿಯನ್ನು ಪರಾಮರ್ಶಿಸುವುದು, ಸಂವಿಧಾನವೇ ಪ್ರಶ್ನಿಸುತ್ತಿರುವ ಸಂದರ್ಭದಲ್ಲಿ ಅದರ ಸಂರಕ್ಷಣೆಗೆ ಅಗತ್ಯವಾದ ಮಾರ್ಗದರ್ಶನ ನೀಡುವುದು, ಜಾತಿ-ಮತ ಬೇಧವಿಲ್ಲದೆ ಭಾರತೀಯರೆಲ್ಲರೂ ಒಂದಾಗಬೇಕೆಂಬ ಸಂದೇಶವನ್ನು ಹರಡುವುದು ‘ಪ್ರಜಾ ಭಾರತ’ದ ಉದ್ದೇಶ. “ದ್ವೇಷ ಬಿಟ್ಟು ದೇಶ ಕಟ್ಟು” ಎನ್ನುವ ಧ್ಯೇಯವಾಕ್ಯದಡಿ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಜಯಂತಿ ದಿನವಾದ ಏಪ್ರಿಲ್ 14ರಂದು ಸಮಾರೋಪಗೊಳ್ಳಲಿದೆ.

ಉಡುಪಿಯ ಲಿಗಾಡೋ ಹೋಟೆಲಿನಲ್ಲಿ ಫೆ. 20 ಗುರುವಾರ 10.30ಕ್ಕೆ ನಡೆಯುವ ‘ಪ್ರಜಾಭಾರತ’ ಚಾಲನಾ ಸಮಾವೇಶದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಮುಫ್ತಿ ಅನ್ವರ್ ಅಲೀ ಖಾದಿರಿ ರಾಮನಗರ ಅಧ್ಯಕ್ಷತೆ ವಹಿಸಲಿದ್ದು, ಪದ್ಮಶ್ರೀ ಹರೇಕಳ ಹಾಜಬ್ಬ ಉದ್ಘಾಟಿಸುವರು.

ರಾಜ್ಯ ವಕ್ಫ್ ಬೋರ್ಡ್ ಸದಸ್ಯರು, ರಾಜ್ಯ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಎನ್ ಕೆಮ್ ಶಾಫಿ ಸಅದಿ ಬೆಂಗಳೂರು ಪ್ರಸ್ತಾವನೆ ಮಾಡಲಿದ್ದು, ನಿವೃತ್ತ ಕೆಎಎಸ್ ಅಧಿಕಾರಿ ಇಜಾಝ್ ಅಹ್ಮದ್ ಬಳ್ಳಾ
ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ,
ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಮೌಲಾನಾ ನಝೀರ್ ಅಝ್ಹರಿ, ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ನೇಜಾರು ಮುಂತಾದ ಪ್ರಮುಖರು ಗಣ್ಯಾತಿ ಗಣ್ಯರು ಹಾಗೂ ಚಿಂತಕರು ಭಾಗವಹಿಸಲಿರುವರು.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು

ಅಬೂ ಸುಫಿಯಾನ್ ಇಬ್ರಾಹಿಂ ಮದನಿ
ಉಪಾಧ್ಯಕ್ಷರು ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ
ಹಾಜಿ ಪಿ ಅಬೂಬಕ್ಕರ್ ನೇಜಾರು
ಅಧ್ಯಕ್ಷರು ಕಾರ್ಯಕ್ರಮ ನಿರ್ವಣಾ ಸಮಿತಿ
ಸಯ್ಯಿದ್ ಫರೀದ್ ಸಾಬ್
ಕೋಶಾಧಿಕಾರಿ ಕಾರ್ಯಕ್ರಮ ನಿರ್ವಣಾ ಸಮಿತಿ
ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ
ಉಪಾಧ್ಯಕ್ಷರು ಜಿಲ್ಲಾ ಮುಸ್ಲಿಂ ಜಮಾಅತ್
ಮುಹಮ್ಮದ್ ರಫೀಕ್ ಬಿ ಎಸ್ ಎಫ್
ಉಪಾಧ್ಯಕ್ಷರು ಜಿಲ್ಲಾ ಮುಸ್ಲಿಂ ಜಮಾಅತ್
ಸುಬ್ಹಾನ್ ಅಹ್ಮದ್ ಹೊನ್ನಾಳ
ಕಾರ್ಯದರ್ಶಿ ಜಿಲ್ಲಾ ಮುಸ್ಲಿಂ ಜಮಾಅತ್
ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ
ಕಾರ್ಯದರ್ಶಿ ಜಿಲ್ಲಾ ಮುಸ್ಲಿಂ ಜಮಾಅತ್

error: Content is protected !! Not allowed copy content from janadhvani.com