janadhvani

Kannada Online News Paper

ಆರಂಭದಲ್ಲೇ ಗುಜರಿ ಎಟಿಎಂ ತಂದು ಅಳವಡಿಸಿ ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದ್ದ ಮಾಣಿಯ ಎಟಿಎಂ ಎರಡು ದಿನ ಸರಿ ಇದ್ದರೆ ಹದಿನೈದು ದಿನ ಕೆಟ್ಟಿರುತ್ತದೆ,ಮಾಣಿಯ ಬ್ಯಾಂಕ್ ನಲ್ಲಿ ಹಣ ಇದ್ದವರು ಹಣ ಬ್ಯಾಂಕ್ ಗೆ ಹಾಕಬಹುದು.

ಅಗತ್ಯ ಕ್ಕೆ ಬ್ಯಾಂಕ್ ನ ಗ್ರಾಹಕರು ಎ.ಟಿ.ಎಂ ಮೂಲಕ ಹಣವನ್ನು ತೆಗೆಯುವ ಹಾಗಿಲ್ಲ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಮಾಣಿಯ ವಿಜಯ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡ)ದ ಎ.ಟಿ.ಎಂ. ಹಾಳಾಗಿದೆ.ಈ ಅವ್ಯವಸ್ಥೆ ಬಗ್ಗೆ ಮಾಣಿ ಊರಿನಲ್ಲಿ ಯಾರೂ ಮಾತಾಡುತ್ತಿಲ್ಲ.

ಎ.ಟಿ.ಎಂ. ಯಂತ್ರ ವನ್ನು ದುರಸ್ತಿ ಗೆ ಮತ್ತು ತಾಂತ್ರಿಕ ಮಾರ್ಪಾಡಿಗೆ ಕೊಂಡೊಯ್ಯಲಾಗಿದೆ ಎಂದು ಹೇಳಲಾಗುತ್ತದೆ. ಒಂದು ಎ.ಟಿ.ಎಂ. ಯಂತ್ರ ದ ದುರಸ್ತಿ ಗೆ ಇಷ್ಟು ದಿವಸದ ಕಾಲಾವಕಾಶ ಬೇಕೇ ?ಎಂದು ಸಾರ್ವಜನಿಕರು ದೂರುತ್ತಾರೆ.

ಇನ್ನೂ ಕೆಲವು ಮಂದಿ
ಮಾಣಿಯಲ್ಲಿ ಎ.ಟಿ.ಎಂ ರದ್ದಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಅದು ಹೌದೇ ? ಅಥವಾ ಅಲ್ಲವೇ ಎಂಬ ಸ್ಪಷ್ಟನೆ ಮತ್ತು ಮಾಹಿತಿ ಸಂಬಂಧಪಟ್ಟವರು ನೀಡಿದರೆ ಸಾರ್ವಜನಿಕರಿಗೆ ಉಪಕಾರ ಆದೀತು. ಈಗಾಗಲೇ ಏ.ಟಿ.ಎಂ.ಕಾರ್ಡ್ ನ್ನು ಪಡೆದ ಮಾಣಿ ಶಾಖೆಯ ಬ್ಯಾಂಕ್ ಗ್ರಾಹಕರು ಹಣದ ಅಗತ್ಯ ಕ್ಕೆ ಏನು ಮಾಡಬೇಕೇಂದು ತೋಚುವುದಿಲ್ಲ ಎಂದು ಈ ಅವ್ಯವಸ್ಥೆ ಬಗ್ಗೆ ದೂರಿಕೊಂಡಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶೀಘ್ರ ಕಾರ್ಯಪ್ರವೃತ್ತರಾಗಲಿ.

error: Content is protected !! Not allowed copy content from janadhvani.com