janadhvani

Kannada Online News Paper

ಯುಎಇ: ಕರ್ನಾಟಕ ಕಲ್ಚರಲ್ ಫೌಂಡೇಷನ್ ಯುಎಇ ವತಿಯಿಂದ ಜನವರಿ 31 ಶುಕ್ರವಾರ ಶಾರ್ಜಾ ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿರುವ ಎರಡನೇ ಸುತ್ತಿನ ನ್ಯಾಷನಲ್ ಪ್ರತಿಭೋತ್ಸವ-2020 ಇದರ ಪೋಸ್ಟರನ್ನು ಕೆಸಿಎಫ್ ನ್ಯಾಷನಲ್ ಸಮಿತಿಯು ಅಧಿಕೃತವಾಗಿ ಬಿಡುಗಡೆ ಮಾಡಿತು.

ಪ್ರವಾಸಿ ಕನ್ನಡಿಗರ ಇತಿಹಾಸದಲ್ಲೇ ಸ್ವಾಭಿಮಾನದ ಸಂಘಶಕ್ತಿಯಾಗಿ ಬೆಳೆದು ಬರುತ್ತಿರುವ ಕೆಸಿಎಫ್ ಹಲವಾರು ಸಾಮಾಜಿಕ ಶೈಕ್ಷಣಿಕ ಸಾಮುದಾಯಿಕ ಸೇವೆಗಳ ಮೂಲಕ ಗುರುತಿಸಿಕೊಂಡು ಹೃಸ್ವ ಅವಧಿಯಲ್ಲಿ ಅರಬ್ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಅತ್ಯಂತ ವೇಗವಾಗಿ ಸಂಚರಿಸಿ ಹದಿನೈದು ಸಾವಿರಕ್ಕೂ ಮಿಕ್ಕ ಸದಸ್ಯರನ್ನೊಳಗೊಂಡು ಕಾರ್ಯಾಚರಿಸುತ್ತಿದೆ. ಅನಿವಾಸಿ ಕನ್ನಡಿಗರ ಪಾಲಿಗೆ ತನ್ನ ಸುಖದುಖಗಳನ್ನು ಹಂಚಿಕೊಳ್ಳಲು ಮತ್ತು ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಕೆಸಿಎಫ್ ಒಂದು ವೇದಿಕೆಯಾಗಿ ಮಾರ್ಪಾಡಾಗಿದೆ. ಊರಿನ ಎಲ್ಲಾ ರೀತಿಯ ಬಡವರಿಗೂ, ನಿರಾಶ್ರಿತರಿಗೂ, ಅಸಹಾಯಕರಿಗೂ ಭರವಸೆಯ ಬೆಳಕಾಗಿ ಕೆಸಿಎಫ್ ಗುರುತಿಸಿಕೊಂಡಿದೆ.

ಅನಿವಾಸಿ ಕನ್ನಡಿಗರ ಮನಸೊರೆಗೊಳ್ಳುವ ಕೆಸಿಎಫ್ ನ ಹಲವಾರು ಯೋಜನೆಗಳಲ್ಲೊಂದಾದ ಪ್ರತಿಭೋತ್ಸವ-2020 ಎಡಿಷನ್ 2 ಜನವರಿ 31ರಂದು ಶಾರ್ಜಾ ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಬೆಳಗ್ಗೆ ಎಂಟರಿಂದ ರಾತ್ರಿ ಎಂಟರ ತನಕ ವಿಜೃಂಭಣೆಯಿಂದ ನಡೆಯಲಿದೆ. ಯುಎಇಯ ಏಳು ಎಮಿರೇಟ್ಸ್ ಗಳಿಂದ 250 ಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು ಮೂವತ್ತಮೂರು ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಮಹಿಯರಿಗೆ ಪುಡ್ಡಿಂಗ್ ಮತ್ತು ಬೆಸ್ಟ್ ಔಟ್ ಆಫ್ ವೇಸ್ಟ್ ವಿಭಾಗಗಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ. ಪ್ರವಾಸಿ ಕನ್ನಡ ಕುಟುಂಬಗಳ ಐತಿಹಾಸಿಕ ಸಂಗಮ ಇದಾಗಿದೆ ಎಂದು ಸಂಘಟಕರು ಅಭಿಪ್ರಾಯಪಡುತ್ತಾರೆ.

ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ। ಶೈಖ್ ಬಾವಾ, ಕೊಶಾಧಿಕಾರಿ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ, ಕೆಸಿಎಫ್ ಯುಎಇ ರಾಷ್ಟ್ರೀಯಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಕಾರ್ಯದರ್ಶಿ ಮೂಸಾ ಹಾಜಿ ಬಸರ, ಪ್ರತಿಭೋತ್ಸವ ಸಮಿತಿ ಚಯರ್ಮೇನ್ ಇಬ್ರಾಹೀಂ ಹಾಜಿ ಬ್ರೈಟ್ ಮಾರ್ಬಲ್, ಹಾಗೂ ರಾಷ್ಟ್ರೀಯ ಕ್ಯಾಬಿನೆಟ್ ಸಮಿತಿ ಸದಸ್ಯರಾದ ಇಕ್ಬಾಲ್ ಕಾಜೂರು, ಇಬ್ರಾಹೀಂ ಸಖಾಫಿ ಕೆದುಂಬಾಡಿ, ಶಾಹುಲ್ ಹಮೀದ್ ಸಖಾಫಿ, ಅಬ್ದುಲ್ ಕರೀಂ ಮುಸ್ಲಿಯಾರ್, ರಫೀಕ್ ಕಲ್ಲಡ್ಕ, ಶರೀಫ್ ಸಾಲೆತ್ತೂರು ಉಪಸ್ಥಿತರಿದ್ದರು.

error: Content is protected !!
%d bloggers like this: