ಗುರುಪುರ ಕೈಕಂಬ :ಡಾ!ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಸಂರಕ್ಷಿಸುವ ಮೂಲಕ ನಾವೆಲ್ಲರೂ ನೈಜ ಭಾರತೀಯರಾಗೋಣ ಎಂದು ಖ್ಯಾತ ಚಿಂತಕರೂ ಸಾಮಾಜಿಕ ಚಳುವಳಿಗಾರರೂ ಆದ ಸನ್ಮಾನ್ಯ ಶ್ರೀ ಮಹೇಂದ್ರ ಕುಮಾರ್ ಬೆಂಗಳೂರು ಹೇಳಿದರು.
ಅವರು ಸಂವಿಧಾನ ಸಂರಕ್ಷಣಾ ವೇದಿಕೆ ಗುರುಪುರ ಕೈಕಂಬ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದರು.

ಹಾಜಿ ಇಸ್ಮಾಯಿಲ್ ಇಂಜಿನಿಯರ್ ಬಜಪೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಖ್ಯಾತ ಪತ್ರಕರ್ತ ಶಶಿಧರ್ ಭಟ್ ಬೆಂಗಳೂರು ಉದ್ಘಾಟಿಸಿದರು. ಆಲ್ಫೋನ್ಸ್ ಫ್ರಾಂಕೋ ಫ್ರಾಂಕ್, ಮೌಲಾನಾ ಡಾ!ಅಬ್ದುಲ್ ರಶೀದ್ ಝೈನಿ ಕಾಮಿಲ್, ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ತಾರೀಕ್ ಅನ್ವರ್ ಸಲಫೀ, ಎ. ಕೆ ಅಶ್ರಫ್ ಜೋಕಟ್ಟೆ
ಸನ್ಮಾನ್ಯ ಶ್ರೀ ರಾ ಚಿಂತನ್, ಸನ್ಮಾನ್ಯ ಶ್ರೀ ರಮನಾಥ ರೈ, ಸನ್ಮಾನ್ಯ ಶ್ರೀ ವಸಂತ ಆಚಾರಿ ಮುಂತಾದವರು
ಮಾತನಾಡಿದರು.

10 ಸಾವಿರಕ್ಕಿಂತಲೂ ಮಿಕ್ಕ ಜನರು ಸೇರಿದ ಬೃಹತ್ ಸಭೆಯಲ್ಲಿ ಆಝಾದೀ ಘೋಷಣೆಗಳು ಮುಗಿಲುಮುಟ್ಟುತ್ತಿತ್ತು. ಎಲ್ಲೆಂದರಲ್ಲಿ ಭಾರತದ ತಿರಂಗ ಬಾವುಟಗಳು ಹಾರಾಡುತ್ತಿದ್ದವು. ಸಭೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಚಿಂತಕರೂ, ಕ್ರೈಸ್ತ ಭಗಿನಿಯರು, ಹಿಂದೂ ಸಹೋದರರು ಹಾಗೂ ಹಲವಾರು ಉಲಮಾ – ಉಮರಾ ನಾಯಕರು ಭಾಗವಹಿಸಿದ್ದರು. ಕಾರ್ಯಕ್ರಮ ಪ್ರಾರಂಭದಲ್ಲಿ ಕೆ.ಹೆಚ್ ಯು ಶಾಫಿ ಮದನಿ ಕರಾಯ ಸ್ವಾಗತಿಸಿ ಕೊನೆಯಲ್ಲಿ ಆರಿಫ್ ಕಮ್ಮಾಜೆ ಧನ್ಯವಾದಗೈದರು.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್