ಗುರುಪುರ: ಸಂವಿಧಾನ ಸಂರಕ್ಷಣಾ ವೇದಿಕೆ ಗುರುಪುರ ಕೈಕಂಬ ಇದರ ಆಶ್ರಯದಲ್ಲಿ ಇಂದು ಜುಮಾ ನಮಾಝಿನ ಬಳಿಕ 2.30 ಕ್ಕೆ ಸರಿಯಾಗಿ NRC CAA NPR ವಿರುದ್ಧ ಬ್ರಹತ್ ಪ್ರತಿಭಟನೆ ನಡೆಯಲಿದೆ.

ಸಮಿತಿಯ ಅಧ್ಯಕ್ಷರಾದ ಹಾಜಿ ಇಸ್ಮಾಯಿಲ್ ಇಂಜಿನಿಯರ್ ಬಜ್ಪೆಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯನ್ನು ಖ್ಯಾತ ಚಿಂತಕ ಶಶಿಧರ್ ಭಟ್ ಬೆಂಗಳೂರು ಉದ್ಘಾಟನೆಗಯ್ಯಲಿದ್ದಾರೆ.
ಮುಖ್ಯ ಪ್ರಭಾಷಣಗಾರರಾಗಿ ಸನ್ಮಾನ್ಯ ಶ್ರೀ ಮಹೇಂದ್ರ ಕುಮಾರ್ (ಮಾಜಿ ಸಂಚಾಲಕರು ಭಜರಂಗದಳ) ಇವರು ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. M.S.M ಅಬ್ದುಲ್ ರಶೀದ್ ಝೈನಿ, ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ, ರಾ ಚಿಂತನ್, ಏವನ್ ಡಿಸೋಝಾ, ಎ. ಕೆ. ಅಶ್ರಫ್ ಜೋಕಟ್ಟೆ ಹಾಗೂ ಅಲ್ವೊನ್ಸ್ ಫ್ರಾಂಕ್ ಬೆಳ್ತಂಗಡಿ ಭಾಗವಹಿಸಲಿದ್ದಾರೆ.

ಸರ್ವ ಜಾತ್ಯಾತೀತ ಸಂಘಟನೆಗಳು ಸೇರಿ ನಡೆಸುವ ಈ ಒಂದು ಪ್ರತಿಭಟನಾ ಸಮಾವೇಶದಲ್ಲಿ ಹಲವಾರು ಉಲಮಾ ಉಮರಾ ಹಾಗೂ ಶೈಕ್ಷಣಿಕ, ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಕರಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್