ಹಜ್ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣ – ನಖ್ವಿ

ಜಿದ್ದಾ: ಭಾರತ ಮತ್ತು ಸೌದಿ ನಡುವೆ 2020 ಹಜ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಸೌದಿ ಹಜ್ ವ್ಯವಹಾರಗಳ ಸಚಿವ ಮುಹಮ್ಮದ್ ಸಾಲಿಹ್ ಬಂದರ್ ಈ ಒಪ್ಪಂದಕ್ಕೆ ಸಹಿ ಹಾಕಿದರು.

ಕಳೆದ ವರ್ಷದಂತೆಯೇ 2 ಲಕ್ಷದ ಹಜ್ ಕೋಟಾ ಈ ವರ್ಷ ಕೂಡ ಮುಂದುವರಿಯಲಿದೆ. ಭಾರತೀಯ ಹಜ್ಜಾಜ್‌ಗಳ ಸೇವೆ ಮತ್ತು ಕಾರ್ಯ ವಿಧಾನಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಗೊಳಿಸಲಾಗುವುದು ಎಂದು ಸಚಿವರು ಈ ವೇಳೆ ಸ್ಪಷ್ಟಪಡಿಸಿದರು.

ಹಜ್ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

2020 ರ ವೇಳೆಗೆ ಹಜ್ ಯಾತ್ರೆ ಕೈಗೊಳ್ಳುವ ಭಾರತೀಯ ಮುಸ್ಲಿಮರಿಗೆ ಆನ್ ಲೈನ್ ಅರ್ಜಿ, ಇ-ವಿಸಾ, ಹಜ್ ಮೊಬೈಲ್ ಆಪ್, ಇ-ಮಸಿಹಾ ಆರೋಗ್ಯ ಸೇವೆ, ಇ-ಲಗೇಜ್ ಪ್ರೀ ಟ್ಯಾಗಿಂಗ್ ಹಾಗೂ ಮೆಕ್ಕಾ ಮದೀನಾದಲ್ಲಿನ ಸಾರಿಗೆ, ವಸತಿ ವ್ಯವಸ್ಥೆಗಳ ಬಗ್ಗೆ ಭಾರತದಲ್ಲೇ ಮಾಹಿತಿ ಲಭ್ಯವಾಗಲಿದೆ ಎಂದು ನಖ್ವಿ ಹೇಳಿದ್ದಾರೆ.

ಕಣ್ಣೂರಿನಲ್ಲಿ ಹೊಸ ಹಜ್ ಎಂಬಾರ್ಕೇಶನ್ ಪಾಯಿಂಟ್ ಬಗ್ಗೆ ಪ್ರಸ್ತುತ ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಸಚಿವರು ಜಿದ್ದಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!