ನವದೆಹಲಿ: ಈರುಳ್ಳಿ ದರ ಏರಿಕೆಯಿಂದ ಬೇಸತ್ತಿರುವ ಗ್ರಾಹಕರಿಗೆ ಮತ್ತೆ ಎಲ್ ಪಿಜಿ ದರ ಏರಿಕೆ ಮೂಲಕ ಬರೆ ಎಳೆದಂತಾಗಿದೆ.ಎಲ್ ಪಿಜಿ ಸಿಲಿಂಡರ್ ಗಳ ಮೇಲಿನ ದರ ಕೂಡ ಏರಿಕೆಯಾಗಿದ್ದು. ಡಿಸೆಂಬರ್ 1ರಿಂದಲೇ ನೂತನ ದರಗಳು ಜಾರಿಯಾಗಿವೆ. ದೇಶದ ವಿವಿಧ ರಾಜ್ಯಗಳಲ್ಲಿ ಎಲ್ ಪಿಜಿ ದರಗಳಲ್ಲಿ ಸರಾಸರಿ 13.20 ರಿಂದ 13.45 ರೂವರೆಗೆ ದರ ಏರಿಕೆಯಾಗಿದೆ.
ಉತ್ತರ ಪ್ರದೇಶದಲ್ಲಿ ಎಲ್ಪಿಜಿಯ ಬೆಲೆ 13.20 ರೂ. ಏರಿಕೆಯಾಗಿದ್ದು, ಇದರೊಂದಿಗೆ ಎಲ್ಪಿಜಿ(LPG)ಯ 14.2 ಕೆಜಿ ಸಿಲಿಂಡರ್ ಬೆಲೆ ಈಗ 730 ರೂ.ಗೆ ಏರಿದೆ. ಅದೇ ಸಮಯದಲ್ಲಿ, ವಾಣಿಜ್ಯ ಸಿಲಿಂಡರ್ನ ಬೆಲೆಯೂ 7.30 ರೂ. ಈಗ 19 ಕೆಜಿ ಸಿಲಿಂಡರ್ 1295.50 ರೂ. ಆಗಿದೆ. ಅಷ್ಟೇ ಅಲ್ಲ ಇದರೊಂದಿಗೆ 5 ಕೆಜಿ ಸಣ್ಣ ಸಿಲಿಂಡರ್ ಬೆಲೆ ಕೂಡ 5.41 ರೂ. ದುಬಾರಿಯಾಗಿದೆ. ಸಣ್ಣ ಸಿಲಿಂಡರ್ ಬೆಲೆಯನ್ನು 269 ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ದರ 695 ರೂಗೆ ಏರಕೆಯಾಗಿದ್ದು, ಮುಂಬೈನಲ್ಲಿ 665 ರೂಗಳಾಗಿವೆ. ಚೆನ್ನೈನಲ್ಲಿ 714 ರೂ ಗಳಾಗಿದ್ದು, ಕೋಲ್ಕತಾದಲ್ಲಿ 725 ರೂಗಳಿಗೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 697.50 ರೂಗೆ ಏರಿಕೆಯಾಗಿದೆ. ವಿಶೇಷವೆಂದರೆ, ಕಳೆದ 4 ತಿಂಗಳಲ್ಲಿ ಎಲ್ಪಿಜಿಯ ಬೆಲೆ 118 ರೂ. ದುಬಾರಿಯಾಗಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ