ಕೆ ಸಿ ಎಫ್ ಸೌತ್ ಸೆಕ್ಟರ್ ದಮಾಮ್ ವತಿಯಿಂದ ಪ್ರತಿಭೋತ್ಸವ ಹಾಗೂ ಸ್ನೇಹ ಸಂಗಮ

ದಮಾಮ್ :ಕೆ ಸಿ ಎಫ್ ಸೌತ್ ಸೆಕ್ಟರ್ ದಮಾಮ್ ವತಿಯಿಂದ ಪ್ರತಿಭೋತ್ಸವ ಹಾಗೂ ಸ್ನೇಹ ಸಂಗಮ ಅಲ್ ಕುರೈದ ಇಸ್ತಿರಾ ಸೈಹಾತ್ ನಲ್ಲಿ ಬಹಳ ವಿಜೃಂಭಣೆಯಿಂದ ದಿನಾಂಕ 28-11-2019 ರಂದು ನಡೆಯಿತು.

ಇದರ ಅಂಗವಾಗಿ ಉಚಿತ ಅರೋಗ್ಯ ತಪಾಸಣೆ ಶಿಬಿರ ಅಲ್ ಮದ್ಲೂಹ್ ಕ್ಲಿನಿಕ್ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು.ಬಹಳಷ್ಟು ಜನರು ಇದರ ಉಪಯೋಗವನ್ನು ಪಡೆದರು.ಡಾಕ್ಟರ್ ಅಬುಲೇಸ್ ಖಾನ್ ಎಲ್ಲರಿಗು ಉತ್ತಮವಾದ ಅರೋಗ್ಯ ಕುರಿತಾದ ಸಲಹೆ ಸೂಚನೆಗಳನ್ನು ನೀಡಿದರು.

ಪ್ರತಿಭೋತ್ಸವದಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದವು.ಟೊಯೋಟಾ ಯೂನಿಟ್ ,ಅನಕ್ ಯುನಿಟ್ ,ಮುಬಾರಕಿಯ ಹಾಗೂ ಫೈಸಲಿಯ ಯುನಿಟ್.ಚಾಂಪಿಯನ್ ಆಗಿ ಅನಕ್ ಯೂನಿಟ್ ತಂಡ ಹಾಗು ರನ್ನರ್ಸ್ ಆಗಿ ಟೊಯೋಟಾ ಯುನಿಟ್ ತಂಡ ಹೊರಹೊಮ್ಮಿತು.

ಕಾರ್ಯಕ್ರಮದ ಕೊನೆಯಲ್ಲಿ ಸಮಾರೋಪ ಸಮಾರಂಭವು ಕೆ ಸಿ ಎಫ್ ಸೌತ್ ಸೆಕ್ಟರ್ ಅಧ್ಯಕ್ಷರಾದ ಮುಹಮ್ಮದ್ ಸಖಾಫಿ ತಲಕ್ಕಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.ನಾಯಕರಾದ ಅಶ್ರಫ್ ನಾವುಂದ ಎಲ್ಲರನ್ನು ಸ್ವಾಗತಿಸಿದರು.

ಪಿ ಸಿ ಅಬೂಬಕರ್ ಸಅದಿ ಉಸ್ತಾದರು ಸಭೆಯನ್ನು ಉದ್ಘಾಟನೆ ಮಾಡುತ್ತಾ ,ಕೆ ಸಿ ಎಫ್ ನ ಕಾರ್ಯಾಚರಣೆ ಹಾಗೂ ಕೆ ಸಿ ಎಫ್ ಮಾಡುವ ಹಲವು ಕಾರ್ಯಕ್ರಮಗಳನ್ನು ಎಲ್ಲರೂ ಕೂಡಾ ಪ್ರಯೋಜನ ಪಡೆಯಬೇಕು ಮತ್ತು ನಮ್ಮ ಸಂದೇಶವನ್ನು ಎಲ್ಲರಿಗೂ ತಲುಪಿಸಬೇಕೆಂದು ತಿಳಿಯಪಡಿಸಿದರು.ಕೆ ಸಿ ಎಫ್ ರಾಷ್ಟ್ರೀಯ ಅಧ್ಯಕ್ಷರಾದ ಡಿ ಪಿ ಯೂಸುಫ್ ಸಖಾಫಿ ಬೈತಾರ್ ಮುಖ್ಯ ಸಂದೇಶ ಭಾಷಣ ಮಾಡುತ್ತಾ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ಜೀವನ ಹಾಗೂ ಸ್ವಹಾಬತ್ ಕಿರಾಂ ರಳಿಯಲಿಯಲ್ಲಾಹು ಅನ್ಹುಂ ಪ್ರವಾದಿವರ್ಯನ್ನು ಪ್ರೀತಿಸಿದ ಉದಾತ್ತ ಮಾದರಿಯನ್ನು ಸಭೆಯ ಮುಂದಿಟ್ಟರು.

ಮುಖ್ಯ ಅತಿಥಿಗಳಾಗಿ ಕೆಸಿಎಫ್ INC ಸಾಂತ್ವನ ವಿಭಾಗ ಚೇರ್ಮ್ಯಾನ್ ಅಬೂಬಕರ್ ರೈಸ್ಕೋ ಪಡುಬಿದ್ರೆ ,ICF ದಮ್ಮಾಮ್ ಸೆಂಟ್ರಲ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ತನ್ನಲೆ,ICF ಸೈಹಾತ್ ದಾಯಿ ಝಯಿನುದ್ದೀನ್ ಅಹ್ಸನಿ ,ICF ಈಸ್ಟರ್ನ್ ಪ್ರಾವಿನ್ಸ್ ಮದ್ರಸ ರೇಂಜ್ ಕಾರ್ಯದರ್ಶಿ ಹಸೈನಾರ್ ಮೌಲವಿ , ಕೆಸಿಎಫ್ ಝೋನ್ ನಾಯಕರಾದ ಫೈಝಲ್ ಕೃಷ್ಣಾಪುರ ,ನೌಶಾದ್ ತಲಪಾಡಿ ,ಇಕ್ಬಾಲ್ ಮಲ್ಲೂರ್ ,ಬಾಷಾ ಗಂಗಾವಳಿ ,ತಮೀಮ್ ಕೂಳೂರ್,ಕೆಸಿಎಫ್ ದಮ್ಮಾಮ್ ನಾರ್ತ್ ಸೆಕ್ಟರ್ ಅಧ್ಯಕ್ಷರಾದ ಶಿಹಾಬ್ ಹಿಮಿಮಿ ಸಖಾಫಿ ಭಾಗವಹಿಸಿದ್ದರು. ನಂತರ ವಿಜಯಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಅನಕ್ ಯುನಿಟ್ ಕಾರ್ಯಕರ್ತರಾದ ಶಾಫಿ ಕೈಕಂಬ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕೊನೆಯಲ್ಲಿ ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ ಧನ್ಯವಾದ ಮಾಡಿದರು.

Leave a Reply

Your email address will not be published. Required fields are marked *

error: Content is protected !!