ಕುವೈಟ್:ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಮೀಲಾದ್ ಸಮಾವೇಶ

ಕುವೈಟ್: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕುವೈಟ್ ಸಮಿತಿ ಆಶ್ರಯದಲ್ಲಿ “ಸಂದೇಶ ವಾಹಕರೇ ತಮಗೆ ಸಮರ್ಪಣೆ” ಎಂಬ ಶೀರ್ಷಿಕೆಯಲ್ಲಿ ಬೃಹತ್ ಮೀಲಾದ್ ಸಮಾವೇಶ
ನವೆಂಬರ್ 15 ರಂದು ಶುಕ್ರವಾರ ಅಬೂ ಅಲೀಫದಲ್ಲಿರುವ 7 ಸ್ಟಾರ್ ಅಡಿಟೋರಿಯಂನಲ್ಲಿ ನಡೆಯಿತು.

KSWA ಸಮಿತಿಯ ಪ್ರ. ಕಾರ್ಯದರ್ಶಿ ಇಸ್ಮಾಯಿಲ್ ಅಯ್ಯಂಗೇರಿ ಸ್ವಾಗತಿಸಿದರು. ಸಭೆಯಲ್ಲಿ ಅಶ್ರಫ್ ಫಾಲಿಲಿ ಅಯ್ಯಂಗೇರಿ ಕಿರಾಆತ್ ಪಾರಾಯನಗೈದರು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಾಹಿನ್ ಸಕಾಫಿ ವಹಿಸಿದರು. ಸಮಿತಿಯ ಸದಸ್ಯರಾದ ಬಹುಮಾನ್ಯ ಬಶೀರ್ ಸಖಾಫಿ ಉದ್ಘಾಟಿಸಿದರು. KSWA ಅಧ್ಯಕ್ಷರಾದ ಮಾಹಿನ್ ಸಖಾಫಿ ಉಸ್ತಾದ್ ಮಾತನಾಡಿ ಈದ್ ಮೀಲಾದ್ ಆಚರಣೆ ಬಗ್ಗೆ ವಿವರಿಸಿದರು.

ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿದಂತ ಡಾ ಮುಹಮ್ಮದ್ ಕುಞ ಸಖಾಫಿ ಕೊಲ್ಲಂ ಮಾತಾನಾಡಿ ಪ್ರವಾದಿ (ಸ.ಅ)ರವರ ಜೀವನದಲ್ಲಿ ಪ್ರಾಯೋಗಿಕವಾಗಿ ಕಾಣಿಸಿ ತೋರಿಸಿದಂತಹ ಶೈಲಿಯನ್ನು ನಮ್ಮ ಜೀವನದಲ್ಲಿ ಅಳವವಡಿಸಬೇಕು, ಮಾತಾಪಿತರನ್ನು ಗೌರವದಿಂದ ಕಾಣಲು ಆಹ್ವಾನಿಸುತ್ತಾ ಅವರ ಕಾಲಡಿಯಲ್ಲಿಯಾಗಿದೆ ಸ್ವರ್ಗ ಎಂಬ ನಬಿ ವಚನ ವಾಚಿಸಿ ಇಸ್ಲಾಮಿನ ಚೌಕಟ್ಟಿನ ಒಳಗೆ ಇರುವಂತಹ ಆಶಯಗಳನ್ನು ವಿವರಿಸಿದರು.

ಸಭೆಯಲ್ಲಿ KCF ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹುಮಾನ್ಯ ಅಬ್ದುಲ್ ರಹಮಾನ್ ಸಖಾಫಿ ಅಶಂಸ ಭಾಷಣ ಗೈದರು ಕೆಸಿಎಫ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಝಕಾರಿಯ ಆನೆಕ್ಕಲ್ ರವರು ಮಾತನಾಡಿ ಕಾರ್ಯಕ್ರಮ ಕ್ಕೆ ಸುಭಕೋರಿದರು.ಹಾಗೂ ಸಮಿತಿಯ ಟ್ರಸರರು ಹಾಗೂ KCF ಸಂಘಟನೆ ವಿಬಾಗ ಅಧ್ಯಕ್ಷರಾದ ಬಹುಮಾನ್ಯ ಉಸೈನ್ ಉಸ್ತಾದ್ ಎಮ್ಮಮಾಡು ಮುಸ್ತಫ ಉಳ್ಳಾಲ kcf ರವರು ಮಾತನಾಡಿ ಈದ್ ಮೀಲಾದ್ ಗೆ ಸಹಕರಿಸಿದಂತಹ ಎಲ್ಲರಿಗೂ ಅಲ್ಲಾಹು ತಕ್ಕದಾದ ಪ್ರತಿಫಲ ನೀಡಲಿ ಎಂದು ದುವಾ ಮಾಡಿ ಇಂತಹ ಕಾರ್ಯಕ್ರಮ ಗಳು ಇನ್ನು ಕೂಡ ನಡೆಯಲಿ ಎಂದು ಹಾರೈಯಿಸಿದರು.

ವೇದಿಕೆ ಯಲ್ಲಿ ಸಯ್ಯದ್ ಕೋಯಮ್ಮ ಕೊಂಡಂಗೇರಿ ಸಯ್ಯದ್ ಸಿಹಾಬ್ ಗೋಣಿಕೊಪ್ಪ ಹಾಗೂ KCF ನಾರ್ತ್ ಝೋನಿನ ಅಧ್ಯಕ್ಷ ಜನಾಬ್ ಅಬ್ಬಾಸ್ ಬಳಂಜ ಅಝೀಝ್ ತಿಂಗಳಾಡಿ kcf ಬಶೀರ್ ಬಲಮುರಿ ರಫೀಕ್ ಮುಸ್ಲಿಯಾರ್ ಕೊಟ್ಟಮುಡಿ ಮುಹಮ್ಮದ್ ಕುಂಜಿ ಮೂರ್ನಾಡು ಅಬ್ದುಲ್ ಖಾದರ್ ಮಡಿಕೇರಿ ಇಬ್ರಾಹಿಂ ವೇಣೂರು kcf ಇಬ್ರಾಹಿಂ ಕೊಂಡಂಗೇರಿ ಆಸನಾರಾಗಿದ್ದರು ಪ್ರಸ್ತುತ ಕಾರ್ಯಕ್ರಮದಲ್ಲಿ ಮುಹಮ್ಮದ್ ಹಾಗೂ ಹನೀಫ ಚೇರಿಯಪರಂಬ ಮಧ್ಹ್ ಗೀತೆಯನ್ನು ಆಲಪಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸಂಘಟನೆಯ ಚೆರ್ಮಾನ್ ಬಹುಮಾನ್ಯ ಬಾದುಶ ಸಖಾಫಿ ರವರು ನಿರ್ವಹಿಸಿದರು. ಕೊನೆಯಲ್ಲಿ ಸಾಂತ್ವನ ವಿಂಗ್ ಕನ್ವೀನರ್ ಹನೀಫ ಚೇರಿಯಪರಂಬ್ ರವರು ಧನ್ಯವಾದಗೈದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!