janadhvani

Kannada Online News Paper

ಮರ್ಕಝುಲ್ ಹಿದಾಯ ಪಬ್ಲಿಕ್ ಸ್ಕೂಲ್: ಇಂಡಿಯನ್ ಗ್ರ್ಯಾಂಡ್ ಮುಫ್ತಿಯಿಂದ ಲೋಕಾರ್ಪಣೆ

ಮಡಿಕೇರಿ : ಕರ್ನಾಟಕದ ಕಾಶ್ಮೀರ ಕೊಡಗಿನ ಕೊಟ್ಟಮುಡಿಯಲ್ಲಿ ಕಾರ್ಯಾಚರಿಸುತ್ತಿರುವ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಸಂಸ್ಥೆ ಮರ್ಕಝುಲ್ ಹಿದಾಯ ಸಂಸ್ಥೆಯ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡದ ಉದ್ಘಾಟನೆಯನ್ನು ಭಾರತದ ಗ್ರಾಂಡ್ ಮುಫ್ತಿ, ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿದರು.

ಮರ್ಕಝ್ ದಅವಾ ಕಾಲೇಜು ವಿದ್ಯಾರ್ಥಿಗಳ ಆಕರ್ಷಕ ಸ್ವಾಗತ ಹಾಡು ಹಾಗೂ ಪವಿತ್ರ ಕುರಾನ್ ಪಾರಾಯಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಮರ್ಕಝ್ ಹಿದಾಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಸ್ವಾಗತ ಭಾಷಣ ನಿರ್ವಹಿಸಿದರು.
ಪ್ರಮುಖ ಅತಿಥಿ ಮರ್ಕಝ್ ನ ಸಹಾಯ ಹಸ್ತವೂ ಆದ ಶೇಖ್ ನಾಸರ್ ಅಲ್ ಖಮ್ಮಾಸ್, ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ , ಮರ್ಕಝ್ ಹಿದಾಯ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಅವರನ್ನು ಮರ್ಕಝ್ ಹಿದಾಯ ವತಿಯಿಂದ ಸನ್ಮಾನಿಸಲಾಯಿತು.
ಪ್ರಳಯ ಭಾಧಿತ ಪ್ರದೇಶವಾದ ಕೊಂಡಂಗೇರೀ ಸಂತ್ರಸ್ತ್ರರಿಗೆ ಮನೆ ನಿರ್ಮಾಣಕ್ಕೆ ಸ್ಥಳಕ್ಕೆ ಸ್ವಿಸ್ ಗೋಲ್ಡ್ ವತಿಯಿಂದ ನೀಡುವ ಸಹಾಯದ ಮೊದಲ ಕಂತನ್ನು ಎ ಪಿ ಉಸ್ತಾದರಿಗೆ ಹಸ್ತಾಂತರಿಸಲಾಯಿತು.

ಉಸ್ತಾದರ ಹುಬ್ಬುರ್ರಸೂಲ್ ಪ್ರಭಾಷಣದಲ್ಲಿ ಪ್ರವಾದಿ ಪೈಗಂಬರ್ ( ಸ್ವ ಅ) ರವರ ಸಂದೇಶಗಳನ್ನು ಪಾಲಿಸುವ ಒಬ್ಬ ವ್ಯಕ್ತಿಯು ಭಯೋತ್ಪಾದಕನಾಗಲು ಸಾಧ್ಯವಿಲ್ಲ, ಪ್ರವಾದಿಯವರ ಮಾನವೀಯ ಸಂದೇಶಗಳನ್ನು , ಅವರ ಜೀವನ ಚರಿತ್ರೆಯನ್ನು ವಿವರಿಸಿದರು.ಪ್ರಳಯ ಭಾಧಿತ ಪ್ರದೇಶಗಳ ಸಂತ್ರಸ್ತರಿಗೆ ಮನೆನಿರ್ಮಾಣಕ್ಕೆ ಸಂಭಂದಿಸಿದಂತೆ ಚರ್ಚಿಸಿ ಕ್ರಮಕೈಗೊಳ್ಳವುದಾಗಿ ತಿಳಿಸಿದರು.

ಕೊಡಗು ಜಿಲ್ಲಾ ನಾಯಿಬ್ ಖಾಝಿ ಮಹ್ಮೂದ್ ಮುಸ್ಲಿಯಾರ್, ಶಾಲಾ ಕಟ್ಟಡದ ಇಂಜಿನಿಯರ್ ಅವರನ್ನು ಸನ್ಮಾನಿಸಲಾಯಿತು. ಮರ್ಕಝ್ ಹಿದಾಯದಲ್ಲಿ ವಿಧ್ಯಾಭ್ಯಸಿಸಿ ದೇಶದ ವಿವಿಧ ಭಾಗಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ತೆರಳಿರುವ 9 ವಿದ್ಯಾರ್ಥಿಗಳಿಗೆ ಸನದ್ ನೀಡಲಾಯಿತು.ನಂತರ ಬುರ್ದಾ ಮಜ್ಲಿಸ್ ಹಾಗೂ ಸಮಾರೋಪ ಸಮಾರಂಭ ನಡೆಯಿತು.

ವೇದಿಕೆಯಲ್ಲಿ ಕೂರ್ಗ್ ಜಂಞಯ್ಯತುಲ್ ಉಲಮಾ ಪ್ರ.ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಶಾದುಲಿ ಫೈಝಿ , ಮಜೀದ್ ಮುಸ್ಲಿಯಾರ್ ಕೊಂಡಂಗೇರಿ, ಕರ್ನಾಟಕ ರಾಜ್ಯ ಎಸ್ ವೈ ಎಸ್ ಇಸಾಬ ಅಮೀರ್ ಉಮರ್ ಸಖಾಫಿ , ಎಸ್ ಎಸ್ ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ಅಝೀಝ್ ಸಖಾಫಿ ಕೊಡ್ಲಿಪೇಟೆ, ಸಯ್ಯಿದ್ ಖಾತಿಂ ತಂಙಳ್ ಎರುಮಾಡ್, ಮರ್ಕಝ್ ಹಿದಾಯತ್ ದಅವಾ ಕಾಲೇಜು ಪ್ರಾಂಶುಪಾಲರಾದ ಶಿಹಾಬುದ್ದೀನ್ ನೂರಾನಿ, ಅಬೂಬಕರ್ ಹಾಜಿ ಹಾಕತ್ತೂರು, ಅಹಮದ್ ಹಾಜಿ ಕೊಟ್ಟಮುಡಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಕಾರ್ಯದರ್ಶಿ ಅಹ್ಮದ್ ಹಾಜಿ ಕುಂಜಿಲ, ಹಾರಿಸ್ ಕೊಟ್ಟಮುಡಿ, ಉಮರ್ ಸಖಾಫಿ ಕಂಬಳಬೆಟ್ಟು, ಎರ್ಮು ಹಾಜಿ ಕಾಟ್ರಕೊಲ್ಲಿ, ಯೂಸುಫ್ ಕೊಂಡಂಗೇರಿ, ಇಲ್ಯಾಸ್ ಮಡಿಕೇರಿ ಇನ್ನಿತರ ಧಾರ್ಮಿಕ ಸಾಮಾಜಿಕ ನೇತಾರರು, ಮರ್ಕಝ್ ವಿದ್ಯಾರ್ಥಿಗಳು, SSF SYS ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ:- ಶಿಬಿಲಿ ಕಲ್ಕಂದೂರ್

error: Content is protected !! Not allowed copy content from janadhvani.com