ಮರಿಕ್ಕಳದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಮೊಂಟೆಪದವು: ಮರಿಕ್ಕಳ ಜಮಾತರು ಹಾಗೂ ಮಹದನುಲ್ ಉಲೂಮ್ ಮದ್ರಸ ಮರಿಕ್ಕಳ ವಿದ್ಯಾರ್ಥಿಗಳು,ಜಮಾಅತರು,ಎಸ್.ವೈ.ಎಸ್ ಹಾಗೂ ಎಸ್ಸೆಸ್ಸೆಫ್ ನ ನಾಯಕರು ಹಾಗೂ ಕಾರ್ಯಕರ್ತರಿಂದ ಮೀಲಾದ್ ರ್ಯಾಲಿ ಮರಿಕ್ಕಳ ಜಮಾಅತ್ ಅಧ್ಯಕ್ಷರು ಖಾಝಿಯು ಆದ ಶೈಖುನಾ ಖಾಝಿ ಬೇಕಲ್ ಉಸ್ತಾದರ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಮರಿಕ್ಕಳ ಜಮಾಅತ್ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ,ಸದರ್ ಉಸ್ತಾದ್ ಝೈನುಲ್ ಆಬಿದೀನ್ ಸಖಾಫಿ ಮುಲಾರ್ ಪಟ್ಣ,ಮುಅಲ್ಲಿರಾದ ರಮಳಾನ್ ಮದನಿ ಕಂಬಳಬೆಟ್ಟು,ಅಬ್ದುಲ್ ಜಬ್ಬಾರ್ ಸ ಅದಿ ಪೆರ್ನೆ,ಜಮಾಅತ್ ಉಪಾಧ್ಯಕ್ಚ ಅಬ್ಬಾಸ್ ಕೊಡಂಚಲ್,ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ತಿಲು,ಕೋಶಾಧಿಕಾರಿ ಹನೀಫ್ ಎನ್.ಎಚ್,ಎಸ್.ವೈ.ಎಸ್ ಮರಿಕ್ಕಳ ಬ್ರಾಂಚ್ ಅಧ್ಯಕ್ಷ ಆಲಿಕುಂಞಿ,ಎಸ್ಸೆಸ್ಸೆಫ್ ಮರಿಕ್ಕಳ ಶಾಖಾಧ್ಯಕ್ಷ ಅಝರ್ ಅಗಲ್ತಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!