ಎಲಿಮಲೆಯಲ್ಲಿ ಸಂಭ್ರಮದ ಈದ್ ಮೀಲಾದ್

ನುಸ್ರತುಲ್ ಇಸ್ಲಾಮ್ ಎಸೋಸಿಯೇಶನ್ ರಿ ಎಲಿಮಲೆ ಇದರ ಆಶ್ರಯದಲ್ಲಿ ಶಾಂತಿ ದೂತ ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿವ ಸಲ್ಲಮರ ಜನ್ಮ ದಿನಾಚರಣೆಯ ಪ್ರಯುಕ್ತ ಇಲಲ್ ಹಬೀಬ್ 2019 ಎಲಿಮಲೆ ಸಾಹುಕಾರ್ ವೇದಿಕೆಯಲ್ಲಿ ಜರುಗಿತು.. ಅಲ್ ಬದ್ರಿಯಾ
ಜಮಾಅತ್ ಕಮಿಟಿ ಅಧ್ಯಕ್ಷರಾದ ಇಕ್ಬಾಲ್ ಎಲಿಮಲೆಯವರು ಧ್ವಜಾರೋಹಣಗೈದರು ..
ನೂರುಲ್ ಹುದಾ ಮದ್ರಸ ಎಲಿಮಲೆ , ನೂರುಲ್ ಹುದಾ ಮದ್ರಸ ಮೆತ್ತಡ್ಕ ಹಾಗೂ ಹಯಾತುಲ್ ಇಸ್ಲಾಂ ದರ್ಸ್ ವಿಧ್ಯಾರ್ಥಿಗಳು ಪ್ರವಾದಿಯವರ ಸಂದೇಶಗಳನ್ನೊಳಗೊಂಡ ವಿವಿಧ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎಲಿಮಲೆ ಮುದರ್ರಿಸರಾದ ತೌಸೀಫ್ ಸಅದಿ ಹರೇಕಳ ಮೀಲಾದ್ ಸಂದೇಶ ನೀಡಿ ಪ್ರವಾದಿಯವರು ಜೀವನದಲ್ಲಿ ತೋರಿದ ಹೃದಯ ವಿಶಾಲತೆಯು ಅವರ ಮಹತ್ವಕ್ಕೆ ಸಾಕ್ಷಿಯಾಗಿದೆ ..ಅವರ ಜೀವನ ಶೈಲಿಯು ಇಡೀ ವಿಶ್ವದಲ್ಲೇ ಬದಲಾವಣೆಯನ್ನು ತಂದಿದೆ ..ಅವರ ಜೀವನ ಹಾದಿಯನ್ನನುಸರಿಸಿ ಸ್ವಾರ್ಥ, ಮತ್ಸರ ಗಳನ್ನು ತೊರೆದು ಶುದ್ದ ಹೃದಯವಂತರಾಗಿ ಜೀವನ ಪಾವನಗೊಳಿಸಲು ಕರೆ ನೀಡಿದರು.

ಎಲಿಮಲೆ ಮದರಸ ಮುಖ್ಯೋಪಾಧ್ಯಾಯ ಮಹಮೂದ್ ಸಖಾಫಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು .ವಿವಿಧ ಸ್ಪರ್ಧೆ ಯಲ್ಲಿ ವಿಜೇತರಿಗೆ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಅಧ್ಯಕ್ಷ ಲತೀಫ್ ಹರ್ಲಡ್ಕ ಬಹುಮಾನ ವಿತರಿಸಿದರು..

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಜಮಾ ಅತ್ ಕಮಿಟಿಯ ಅಧ್ಯಕ್ಷ ಇಕ್ಬಾಲ್ ಎಲಿಮಲೆಯವರು ವಹಿಸಿದ್ದರು..ಮುಖ್ಯ ಅತಿಥಿಗಳಾಗಿ ಜೀರ್ಮಕ್ಕಿ ಮಸೀದಿಯ ಅಧ್ಯಕ್ಷ ಜಿ ಎಸ್ ಅಬ್ದುಲ್ಲ, ತರ್ಬಿಯತುಲ್ ಇಸ್ಲಾಂ ಎಸೋಸಿಯೇಶನ್ ಅಧ್ಯಕ್ಷ ಹಸನ್ ಹರ್ಲಡ್ಕ,ಮೆತ್ತಡ್ಕ ಮದರಸ ಅಧ್ಯಾಪಕರಾದ ಶಫೀಕ್ ಹನೀಫಿ, ಜೀರ್ಮಕ್ಕಿ ಇಮಾಂ ಸೂಫಿ ಮುಸ್ಲಿಯಾರ್,ಮಸೀದಿಯ ಆಡಳಿತ ಕಾರ್ಯದರ್ಶಿ ಟಿ ವೈ ಇಬ್ರಾಹಿಂ, ಜಮಾಅತ್ ಕಮಿಟಿ ಸಲಹೆಗಾರರಾದ ಮೂಸ ಹಾಜಿ, ಜಮಾ ಅತ್ ಮಾಜಿ ಸಲಹೆಗಾರರೂ ಹಿರಿಯರೂ ಆದ ಅಬ್ಬಾಸ್ ಟಿ.ವೈ. ಉಪಸ್ಥಿತರಿದ್ದರು .. ನುಸ್ರತ್ ಉಪಾಧ್ಯಕ್ಷ ಕಲಂದರ್ ಎಲಿಮಲೆ, ಜತೆ ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ, ಜಮಾಅತ್ ಉಪಾಧ್ಯಕ್ಷ ಅಬ್ದುಲ್ ಕಾದರ್ ಪಾಣಾಜೆ .ಕಾರ್ಯದರ್ಶಿ ಹನೀಫ್ ಮೆತ್ತಡ್ಕ, ಕೋಶಾಧಿಕಾರಿ ಮಹಮದ್ ಕುಂಞ ಮೇಲೆಬೈಲು ಸಹಕರಿಸಿದರು.

ಇದೇ ಸಂಧರ್ಭದಲ್ಲಿ ಕಲಂದರ್ ಎಲಿಮಲೆ ಮತ್ತುರಶೀದ್ ಎಲಿಮಲೆ, ಫೈಝಲ್ ಜೀರ್ಮಕ್ಕಿಯವರ ನೇತ್ರತ್ವದಲ್ಲಿ ಯುವಕರ ತಂಡವು ಹೊಸದಾಗಿ ಖರೀದಿಸಿದ ಮಯ್ಯತ್ ಸ್ನಾನದ ಟೆಂಟನ್ನು ಸಮಿತಿಗೆ ಹಸ್ತಾಂತರಿಸಲಾಯಿತು .

ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ವಂದಿಸಿದರು,ನಂತರ ಮಸೀದಿಯಲ್ಲಿ ನಡೆದ ಮೌಲೀದ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಅತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!