ಜಿದ್ದಾ: ಈ ವರ್ಷದ ಪವಿತ್ರ ಹಜ್ ಯಾತ್ರೆಯಲ್ಲಿರುವ ಕರ್ನಾಟಕ ರಾಜ್ಯ ಹಜ್ಜ್ ಕಮಿಟಿ ಸಧಸ್ಯರಾದ ಕೆ.ಎಮ್ ಅಬೂಬಕ್ಕರ್ ಸಿದ್ದೀಕ್ ಮೊಂಟುಗೋಳಿ ರವರನ್ನು ಕೆ.ಸಿ.ಎಫ್ ಜಿದ್ದಾ ಝೋನ್ ವತಿಯಿಂದ ಪವಿತ್ರ ಮಕ್ಕಾದಲ್ಲಿ ಅಭಿನಂದಿಸಲಾಯಿತು.

ಬಹು: ಹಾಶಿಂ ಸಖಾಫಿ ಶಿವಮೊಗ್ಗ (ಖತೀಬರು ಮುಡಿಪ್ಪು ಕೇಂದ್ರ ಜುಮಾ ಮಸ್ಜಿದ್ ) ರವರ ಪ್ರಾರ್ಥನೆಯಲ್ಲಿ ಪ್ರಾರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿದ್ದಾ ಝೋನ್ ಕೋಶಾಧಿಕಾರಿ ಸಿದ್ದೀಕ್ ಬಾಳೆಹೊನ್ನೂರು ವಹಿಸಿಕೊಂಡರು. ಜಿದ್ದಾ ಝೋನಲ್ ಪ್ರ.ಕಾರ್ಯದರ್ಶಿ ಇಬ್ರಾಹೀಂ ಕಿನ್ಯ ಅತಿಥಿಗಳನ್ನು ಸ್ವಾಗತಿಸಿದರು.

ಕೆ.ಎಮ್ ಮುಸ್ತಫಾ ನಈಮಿ ಮೊಂಟುಗೋಳಿ (ಪ್ರ.ಕಾರ್ಯದರ್ಶಿ ಮುಈನುಸುನ್ನಾ ಮೋರಲ್ ಆಕಾಡಮಿ ಹಾವೇರಿ) ಕಾರ್ಯಕ್ರಮವನ್ನು ಉದ್ಗಾಟಿಸಿದರು.ಕೆ.ಎಮ್ ಅಬೂಬಕ್ಕರ್ ಸಿದ್ದೀಕ್ ಮೊಂಟುಗೋಳಿ ರವರು ಮುಖ್ಯ ಪ್ರಭಾಷಣ ನಿರ್ವಹಿಸಿದರು.

ಕೆ.ಸಿ.ಎಫ್ ಹಜ್ಜ್ ಸ್ವಯಂ ಸೇವಕರ ಕಾರ್ಯ ಚಟುವಟಿಕೆಗಳನ್ನು ಉಮ್ಮರ್ ಸಖಾಫಿ ಪರಪ್ಪು ರವರು ವಿವರಿಸಿದರು. ಅಶ್ರಫ್ ಹಾಜಿ ಕನ್ನೂರ್, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ವೇದಿಕೆಯಲ್ಲಿ HVC ಕಪ್ತಾನ ಮೂಸಾ ಹಾಜಿ ಕಿನ್ಯ , ಮಕ್ಕಾ ಸೆಕ್ಟರ್ ಅಧ್ಯಕ್ಷರಾದ ನವಾಝ್ ಇಮ್ದಾದಿ ಬಜಾಲ್ , ಬಶೀರ್ ಕೆಜಕ್ಕಾರ್, ಅಬ್ದುಲ್ಲ ಕಿನ್ಯ, ಮುಹಮ್ಮದ್ ಘಂಟಲ್ಕಟ್ಟೆ, ಅಶ್ರಫ್ ಸಹದಿ ಮೊಂಟೆಪದವು ಹಾಗೂ ಹಜ್ಜಾಜಿಗಳು ಉಪಸ್ಥಿತರಿದ್ದರು.ಮಕ್ಕಾ ಸೆಕ್ಟರ್ ಶಿಕ್ಷಣ ಇಲಾಖೆ ಯ ಕಾರ್ಯದರ್ಶಿ ಕಲಂದರ್ ಶಾಫಿ ಕಾರ್ಯಕ್ರಮ ನಿರೂಪಿಸಿದರು.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ