ಅಮಾಯಕರಿಗೆ ಉಗ್ರ ಪಟ್ಟ ಕಟ್ಟುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ: ದಾವಣಗೆರೆ ಜಿಲ್ಲಾ SSF

ದಾವಣಗೆರೆ: ಆಗಸ್ಟ್ 23: ಅಮಾಯಕರಿಗೆ ಉಗ್ರ ಪಟ್ಟವನ್ನು ಕಟ್ಟಿ ಅವರ ಜೀವನದಲ್ಲಿ ಚೆಲ್ಲಾಟವಾಡುವ ಕೆಲ ಮಾಧ್ಯಮಗಳ ವಿರುದ್ಧ SSF ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಖಂಡನಾ ಸಭೆ ನಡೆಯಿತು.

ಸಭೆಯಲ್ಲಿ SSF ಚಿತ್ರದುರ್ಗ ಜಿಲ್ಲಾಧ್ಯಕ್ಷ ಎಮ್ಮೆಸ್ಸೆಂ ಜುನೈದ್ ಸಖಾಫಿ ವಿಷಯ ಮಂಡಿಸಿದರು. ಇಸ್ಲಾಂ ಒಮ್ಮೆಯೂ ಭಯೋತ್ಪಾದನೆಗೆ ಪ್ರೋತ್ಸಾಹ ಕೊಡುವುದಿಲ್ಲ. ಇಸ್ಲಾಂ ಶಾಂತಿಯ ಧರ್ಮ. ಸಮಾಜದಲ್ಲಿ ಅಭದ್ರತೆಯನ್ನು ಸೃಷ್ಟಿಸಲು ಕೆಲ ಮಾಧ್ಯಮಗಳು ಪ್ರಯತ್ನಿಸುತ್ತಿದೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ದಾವಣಗೆರೆ ಜಿಲ್ಲಾ SSF ಅಧ್ಯಕ್ಷ ಕೆಕೆ ಅಶ್ರಫ್ ಸಖಾಫಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ಖಾದರ್ ಭಾಷಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹಾವೇರಿ ಜಿಲ್ಲಾ SSF ಅಧ್ಯಕ್ಷ ಯಾಸಿನ್ ಸಖಾಫಿ, ಗದಗ ಜಿಲ್ಲಾ SSF ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಸಖಾಫಿ, ದಾವಣಗೆರೆ ಜಿಲ್ಲಾ SSF ಉಪಾಧ್ಯಕ್ಷರಾದ ಅಬೂಬಕ್ಕರ್ ಉಸ್ತಾದ್ ಜಗಳೂರು, ಶರೀಫ್ ಸಖಾಫಿ ಹರಿಹರ ಇಕ್ಬಾಲ್ ದಾವಣಗೆರೆ,ಅಬ್ದುಲ್ ಹಮೀದ್ ದಾವಣಗೆರೆ ರಫೀಕ್ ಮನ್ನಾನಿ ಜೊತೆ ಕಾರ್ಯದರ್ಶಿ ಉಸ್ಮಾನ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುವ ಮಾಧ್ಯಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಸಿಸ್ಟೆಂಟ್ ಜಿಲ್ಲಾ ಕಲೆಕ್ಟರ್ ಗೆ ಸಭೆಯಲ್ಲಿ ಮನವಿ ನೀಡಲಾಯಿತು.

SSF ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ರಾನ್ ರಝಾ ಸಭೆಯಲ್ಲಿ ಸ್ವಾಗತ ಕೋರಿದರು ಮತ್ತು ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!