ಖಿದ್ಮತುಲ್ ಇಸ್ಲಾಂ ಹೆಲ್ಪ್ ಲೈನ್ ಗ್ರೂಪ್ ಜಾರಿಗೆಬೈಲ್: ನೆರೆ ಸಂತ್ರಸ್ತರಿಗೆ ಪಂಪ್ ಸೆಟ್ ವಿತರಣೆ

ಬೆಳ್ತಂಗಡಿ: ಇತ್ತೀಚೆಗೆ ಸಂಭವಿಸಿದ ಭಾರೀ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ನೆರೆ ಪೀಡಿತ ಪ್ರದೇಶಗಳಲ್ಲೊಂದಾದ ಪೆರ್ದಾಡಿ ಗ್ರಾಮದಲ್ಲಿ ಬದ್ರಿಯಾ ಖಿದ್ಮತುಲ್ ಇಸ್ಲಾಂ ಹೆಲ್ಪ್ ಲೈನ್ ಗ್ರೂಪ್ ಜಾರಿಗೆಬೈಲ್ ವತಿಯಿಂದ ನೆರೆ ಸಂತ್ರಸ್ತ 5 ಕುಟುಂಬಗಳಿಗೆ ಪಂಪ್ ಸೆಟ್ ವಿತರಣೆ ಕಾರ್ಯ ಇತ್ತೀಚೆಗೆ ನಡೆಯಿತು.

ಹೆಲ್ಪ್ ಲೈನ್ ಗ್ರೂಪಿನ ಸದಸ್ಯರಾದ ಇಲ್ಯಾಸ್ ಎಂ ಪಿ , ಹಾರಿಸ್ ಕುಕ್ಕುಡಿ , ನಾಸಿರ್ ಎನ್, ಹೈದರ್ ಎಂ ಬಿ , ಹಾಗೂ ಪೆರ್ದಾಡಿ ಪರಿಸರದ ಪ್ರಮುಖರಾದ ಇಬ್ರಾಹಿಂ ಸಅದಿ ಕೊಲ್ಲಿಬೆಟ್ಟು, ಮುಹಮ್ಮದ್ ಕೊಲ್ಲಿಬೆಟ್ಟು, ನಝೀರ್ ಪೆರ್ದಾಡಿ , ಸಲೀಂ ಪೆರ್ದಾಡಿ, ಅಬೂಬಕ್ಕರ್ ಕೊಲ್ಲಿಬೆಟ್ಟು ,ಪ್ರದೀಪ್ ತೌಕಿಬೆಟ್ಟು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!