SSF ಕುದುರೆಗುಂಡಿ ಶಾಖೆ: ನೆರೆ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ

ಕೊಪ್ಪಳ: ಕಳೆದ ಕೆಲವು ದಿನಗಳಿಂದ ಸುರಿದ ನಿರಂತರ ಮಳೆಯಿಂದಾಗಿ ಭಾಗಶಃ ನಮ್ಮ ಕರ್ನಾಟಕ ರಾಜ್ಯ ನಲುಗಿ ಹೋಗಿದೆ. ಭೀಕರ ಪ್ರವಾಹ ಉಂಟಾಗಿ ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.ತಿನ್ನಲು ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಈ ನಿಟ್ಟಿನಲ್ಲಿ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿಯ ಕರೆಗೆ ಓಗೊಟ್ಟು ಎಸ್ ಎಸ್ ಎಫ್ ಕುದುರೆಗುಂಡಿ ಯೂನಿಟ್ ಕಾರ್ಯಕರ್ತರು ಬಕ್ರೀದ್ ಹಬ್ಬದ ದಿನದಂದು ಈದ್ ನಮಾಜಿನ ಬಳಿಕ ನೆರೆ ಸಂತ್ರಸ್ತರಿಗೆ ಪರಿಹಾರ ನಿಧಿ ಸಹಾಯ ಹಸ್ತವನ್ನು ಕೈಗೊಂಡು ಮಸೀದಿಯಲ್ಲಿ ಪರಿಹಾರ ನಿಧಿಯನ್ನು ಸಂಗ್ರಹಿಸಿ, ಕುದುರೆಗುಂಡಿ ಪಟ್ಟಣದಲ್ಲಿ ಎಲ್ಲಾ ಅಂಗಡಿಗಳಿಗೆ,ಮನೆಗಳಿಗೆ ತೆರಲಿ ಸಹಾಯ ಧನವನ್ನು ಸಂಗ್ರಹಿಸಿದರು.ಹಳ್ಳಿಗಳ ಬೀದಿ-ಬೀದಿಗಳಲ್ಲಿ, ಮನೆಗಳಿಗೆ ತೆರಲಿ ಸರಿಸುಮಾರು ಸಂಜೆಯ ತನಕ ಹಣವನ್ನು ಸಂಗ್ರಹಣೆ ಮಾಡಿದರು.

ಎಸ್ ಎಸ್ ಎಫ್ ಕುದುರೆಗುಂಡಿ ಯೂನಿಟ್ ಕಾರ್ಯಕರ್ತರು ಕೈಗೊಂಡ ಈ ಪರಿಹಾರ ನಿಧಿ ಸಂಗ್ರಹಣೆಗೆ ಕುದುರೆಗುಂಡಿ ಊರಿನ ಗ್ರಾಮಸ್ಥರು, ವ್ಯಾಪಾರಿಗಳು, ಆಟೋ ಚಾಲಕರು ಮತ್ತು ಮಾಲೀಕರ ಸಂಘ ಹಿರಿಯರು, ಕಿರಿಯರು, ವೃದ್ಧರು ಉತ್ತಮ ರೀತಿಯಲ್ಲಿ ಸ್ಪಂದನೆಯನ್ನು ನೀಡಿ ತಮ್ಮ ತಮ್ಮ ಕೈಲಾದ ಸಹಾಯ ಧನವನ್ನು ನೀಡಿದರು.

ಈ ಸಂಧರ್ಭದಲ್ಲಿ ಎಸ್ ಎಸ್ ಎಫ್ ಚಿಕ್ಕಮಗಳೂರು ಜಿಲ್ಲಾ ನಾಯಕರಾದ ಸಲೀಮ್,ಶಮೀಮ್, ಶರೀಫ್ ಹಾಗೂ ಎಸ್ ಎಸ್ ಎಫ್ ಕುದುರೆಗುಂಡಿ ಯೂನಿಟ್ ಕಾರ್ಯಕರ್ತರಿಗೂ ಹಾಜರಿದ್ದರು.

ಸಂಗ್ರಹಣೆಯಾದ ಹಣವನ್ನು ರಾಜ್ಯ ಸಮಿತಿಯ ಮುಖಾಂತರ ನಿರಾಶ್ರಿತರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ ಎಸ್ ಎಫ್ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರ್ಫುದ್ದೀನ್ ರವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!