ಪ್ರವಾಹಕ್ಕೆ ತತ್ತರಿಸಿದ ಕೊಡಗು: ಪುತ್ತೂರು ಎಸ್ಸೆಸ್ಸೆಫ್ , ಎಸ್‌ವೈ‌ಎಸ್ ಹಾಗೂ ಟೀಂ ಹಿಸಾಬದಿಂದ ನೆರವು

ಪುತ್ತೂರು: ರಾಜ್ಯದಾದ್ಯಂತ ಭೀಕರ ಪ್ರವಾಹಕ್ಕೆ ಹಲವು ಜಿಲ್ಲೆಗಳು ತತ್ತರಿಸಿ ಹೋಗಿದ್ದು, ಕೊಡಗು ಜಿಲ್ಲೆಯ ಹಲವು ಪ್ರದೇಶಗಳು ಪ್ರವಾಹಕ್ಕೆ ತತ್ತರಿಸಿ ಹಲವು ಮನೆಗಳು ಜಲಾವೃತಗೊಂಡಿದೆ.

ಪ್ರವಾಹದಿಂದ ತೀವ್ರವಾಗಿ ನಷ್ಟಕ್ಕೊಳಗಾದ ಜಿಲ್ಲೆಯ ನೆಲ್ಯ ಹುದಿಕೇರಿ, ಕೊಂಡಂಗೇರಿ, ಕೊಟ್ಟಮುಡಿ ಸಹಿತ ಹಲವು ಪ್ರದೇಶಗಳ ಹಲವಾರು ಮನೆಗಳು ಜಲಾವೃತಗೊಂಡಿದ್ದು, ನೂರಾರು ಮನೆಗಳು ಸಂಪೂರ್ಣ ನಾಶವಾಗಿದೆ.
ಹಲವಾರು ನಷ್ಟಗಳು ಸಂಭವಿಸಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿರುವುದನ್ನು ಗಮನಿಸಿದ ಪುತ್ತೂರಿನ ಸುನ್ನೀ ಸಂಘಟನೆಗಳಾದ ಎಸ್ಸೆಸ್ಸೆಫ್, ಎಸ್‌ವೈ‌ಎಸ್ ಹಾಗೂ ಟೀಂ ಇಸಾಬದ ಕಾರ್ಯಕರ್ತರು ಕೊಡಗು ಜಿಲ್ಲೆಯ ಪ್ರವಾಹ ಪೀಡಿತದಿಂದ ಸಂಕಷ್ಟಕ್ಕೆ ಒಳದಾಗವರಿಗಾಗಿ ಆ.10 ರಂದು ನಿಧಿ ಸಂಗ್ರಹ, ಹೊಸ ವಸ್ತ್ರಗಳು ಹಾಗೂ ಅಗತ್ಯ ಸಾಮಾಗ್ರಿಗಳನ್ನು ಪುತ್ತೂರು ಸುನ್ನೀ ಸೆಂಟರ್‌ನಲ್ಲಿ ಸಂಗ್ರಹಿಸಿ, ಕೊಡಗು ಜಿಲ್ಲಾ ಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ಸಂಘಟನಾ ನಾಯಕರ ಸಮ್ಮುಖದಲ್ಲಿ ಎಸ್ಸೆಸ್ಸೆಫ್ ರಾಜಾಧ್ಯಕ್ಷ ಅಸ್ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್ ಹಾಗೂ ಉಮರ್ ಸಖಾಫಿ ಎಡಪ್ಪಾಲ ಅವರ ನೇತೃತ್ವದೊಂದಿಗೆ ನೆಲ್ಯ ಹುದಿಕೇರಿಯ ಎಸ್‌ವೈ‌ಎಸ್ ಸುನ್ನೀ ಸೆಂಟರ್ ಕಂಟ್ರೋಲ್ ರೋ‌ಮ್‌‌ಗೆ ಆ.11 ರಂದು ಹಸ್ತಾಂತರಿಸಲಾಯಿತು.

ಕೊಡಗಿನ ನೆರೆಯ ಸಂಕಷ್ಟರಿಗೆ ನೆರವಿನ ಆಗತ್ಯವಿದೆ – ಎಸ್ಸೆಸ್ಸೆಫ್ ರಾಜ್ಯಧ್ಯಕ್ಷರ ಮನವಿ

ಧಾರಾಕಾರವಾಗಿ ಸುರಿಯುವ ಭಾರಿ ಮಳೆಗೆ ಕೊಡಗು ಜಿಲ್ಲೆಯ ನಾನಾ ಭಾಗದ ನೆರೆ ಪೀಡಿತರಿಗೆ ಮೂಲಸೌಕರ್ಯದ ಆವಶ್ಯಕತೆಯಿದ್ದು, ನಮ್ಮೆಲ್ಲರ ಸಹಾಯ ಆಗತ್ಯವಿದ್ದು, ಎಲ್ಲರೂ ಸಹಕರಿಸಬೇಕೆಂದು ಎಸ್ಸೆಸ್ಸೆಫ್ ರಾಜ್ಯಧ್ಯಕ್ಷ ಅಸ್ಸಯ್ಯದ್ ಉಮ್ಮರ್ ಅಸ್ಸಖಾಫ್ ತಂಙಳ್ ಮನ್ಶರ್ ವಿನಂತಿಸಿದರು.

ಈ ಸಂಧರ್ಭದಲ್ಲಿ ಟೀಂ ಇಸಾಬ ಪುತ್ತೂರು ಅಮೀರ್ ಇಕ್ಬಾಲ್ ಬಪ್ಪಳಿಗೆ, ಅಬ್ಬುಲ್ ರಝಾಕ್ ಖಾಸಿಮಿ ಕೂರ್ನಡ್ಕ , ಎಸ್ಸೆಸ್ಸೆಫ್ ಡಿವಿಷನ್ ಅಧ್ಯಕ್ಷ ಝುಬೈರ್ ಸಖಾಫಿ ಸಹಿತ ಸುನ್ನೀ ಸಂಘಟನೆಯ ಹಲವು ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಇಬ್ರಾಹಿಂ ಖಲೀಲ್ ಬನ್ನೂರು

Leave a Reply

Your email address will not be published. Required fields are marked *

error: Content is protected !!