ನವದೆಹಲಿ, ಜು.15-ಉತ್ತರ ಪ್ರದೇಶದ ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ವಿಶೇಷ ನ್ಯಾಯಾಧಿಇೀಶರು ಸುಪ್ರೀಂಕೋರ್ಟ್ಗೆ ಆರು ತಿಂಗಳ ಕಾಲಾವಕಾಶ ಕೋರಿದ್ದಾರೆ. ಬಿಜೆಪಿ ಧುರೀಣರಾದ ಎಲ್.ಕೆ.ಅಡ್ವಾಣಿ, ಡಾ. ಮುರಳಿ ಮನೋಹರ ಜೋಷಿ ಮತ್ತು ಇತರರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಈ ಸಂಬಂಧ ಇಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವ ವಿಶೇಷ ನ್ಯಾಯಾಧೀಶರು ಇಂದು ಅರ್ಜಿ ಸಲ್ಲಿಸಿ ಬಾಬರಿ ಧ್ವಂಸ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಆರು ತಿಂಗಳ ಸಮಯಾವಕಾಶ ನೀಡಬೇಕೆಂದು ಕೋರಿದ್ದಾರೆ.
ವಿಶೇಷ ನ್ಯಾಯಾಧೀಶರು ಮೇ ತಿಂಗಳಿನಲ್ಲಿ ಈ ಸಂಬಂಧ ಪತ್ರವೊಂದನ್ನು ಬರೆದು, ಈ ವರ್ಷ ಸೆಪ್ಟೆಂಬರ್ 30ರಂದು ತಾವು ನಿವೃತ್ತರಾಗುತ್ತಿರುವುದಾಗಿ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದ್ದರು.
ಇಂದು ಈ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ಪೀಠವು ಈ ಮಹತ್ವದ ಪ್ರಕರಣದಲ್ಲಿ ವಿಚಾರಣೆ ಮುಂದುವರಿಸಿ ತೀರ್ಪು ನೀಡಲು ವಿಶೇಷ ನ್ಯಾಯಾಧೀಶರ ಸೇವಾವಧಿಯನ್ನು ಮುಂದುವರಿಸಲು ಸಾಧ್ಯವಿರಬಹುದಾದ ವ್ಯವಸ್ಥೆ ಬಗ್ಗೆ ಆಲೋಚಿಸುವಂತೆ ಹಾಗೂ ಈ ಬಗ್ಗೆ ಜುಲೈ 19ರಂದು ಪ್ರತ್ಯುತ್ತರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಏಪ್ರಿಲ್ 18, 2017ರಲ್ಲಿ ಈ ಪ್ರಕರಣದ ವಿಚಾರಣೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಪ್ರತಿನಿತ್ಯ ವಿಚಾರಣೆಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.















ಇನ್ನಷ್ಟು ಸುದ್ದಿಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಗ್ಯಾಸ್ ಸಿಲಿಂಡರ್ ಒಂದಕ್ಕೆ 266₹ ಹೆಚ್ಚಳ
ಭಾರತದಿಂದ ಸೌದಿ ಅರೇಬಿಯಾಕ್ಕೆ ನೇರವಾಗಿ ಪ್ರಯಾಣಿಸಲು ಅವಕಾಶ
ಮುಸ್ಲಿಮರು ಸರಕಾರದ ಕೆಲಸ ಮಾಡಬಾರದೇ? ಹಿಂದೂ ರಾಷ್ಟ್ರವಾಯಿತೇ ಭಾರತ!
ಆನ್ಲೈನ್ ಪರೀಕ್ಷೆ: ನಮ್ಮ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ- ಉನ್ನತ ಶಿಕ್ಷಣ ಸಚಿವ
ಕೊರೋನಾ ಅಬ್ಬರ: ಲಾಕ್ ಡೌನ್ ಬಗ್ಗೆ ಸಿಎಂ ಮಹತ್ವದ ಸಭೆ
ರಮೇಶ್ ಜಾರಕಿಹೊಳಿ ರಾಸಲೀಲೆ- ಸಂತ್ರಸ್ತೆಯಿಂದ ದೂರು ದಾಖಲು
ಬೆಳಗ್ಗಿನ ಅಝಾನ್ ಕರೆಗೂ ಧ್ವನಿವರ್ಧಕಗಳನ್ನು ಬಳಸಬಹುದು- ವಖ್ಫ್ ಬೋರ್ಡ್