janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ

ಬೆಂಗಳೂರು,ಮಾ. 29; ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಕಳೆದ ನಾಲ್ಕೈದು ತಿಂಗಳಿನಿಂದ ನಿಯಂತ್ರಣದಲ್ಲಿದ್ದ ಕೊರೋನಾ ಸೋಂಕು ಇದೀಗ ದಿಢೀರನೆ ಅಧಿಕವಾಗಿದೆ.

ಮಹಾರಾಷ್ಟ್ರ, ಗುಜರಾತ್, ಕೇರಳ ಸೇರಿದಂತೆ ಅಧಿಕ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರಿದ್ದು, ಈಗಾಗಲೇ ಹಲವಾರು ಪ್ರದೇಶಗಳಲ್ಲಿ ಸೀಲ್ಡೌ ನ್ ಮತ್ತು ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ. ಅಲ್ಲದೆ, ಮಹಾರಾಷ್ಟ್ರ ಸರ್ಕಾರ ಏಪ್ರಿಲ್.1 ರಿಂದ ರಾಜ್ಯಾದ್ಯಂತ 15 ದಿನಗಳ ಲಾಕ್ಡೌನ್ ಜಾರಿ ಮಾಡಲು ಆಲೋಚಿಸಿದೆ.

ರಾಜ್ಯದಲ್ಲೂ ಸೋಂಕಿತರ ಪ್ರಮಾಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮುಂದಿನ ದಿಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಎಂತಹ ಕ್ರಮಗಳನ್ನು ಜರುಗಿಸಬೇಕು ಎಂದು ಆಲೋಚಿಸುವ ಸಲುವಾಗು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಂಜೆ 5 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಕಂದಾಯ ಸಚಿವ ಆರ ಅಶೋಕ್, ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೇರಿದಂತೆ ಮತ್ತು ವಲಯವಾರು ಉಸ್ತುವಾರಿಗಳು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಪ್ರ ಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಸೋಂ ಕಿನ ಪ್ರಮಾಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಏನೆಲ್ಲ ಕ್ರಮ ಕೈಗೊಳ್ಳಬೇಕು? ಎಂಬುರದ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ. ಅಲ್ಲದೆ, ಬೆಂಗಳೂರಿಗೆ ಪ್ರತ್ಯೇಕವಾಗಿ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಲಿದ್ಯಾ ಸರ್ಕಾರ? ಎಂಬ ಬಗ್ಗೆಯೂ ಚಿಂತನೆಗಳು ನಡೆಯುತ್ತಿದೆ. ಆದರೆ, ಸಿಎಂ ಸಭೆಯ ಬಳಿಕವೇ ಸ್ಪಷ್ಟ ಚಿತ್ರಣ ಹೊರಬಿಳಲಿದೆ.

ನಗರದಲ್ಲಿ ಇದೀಗ ಪ್ರತಿದಿನ ಕೊರೋನಾ ಸೋಂಕಿತರ ಸಂಖ್ಯೆ 2 ಸಾವಿರದ ಗಡಿ ದಾಟುತ್ತಿದೆ. ಹೀಗಾಗಿ ಈ ಸಂಖ್ಯೆ ಅಧಿಕವಾದರೆ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ‌ ಹಿನ್ನೆಲೆ ಎಚ್ಚೆತ್ತುಕೊಂಡ ಸರ್ಕಾರದಿಂದ ಇಂದು ಮಹತ್ವದ ‘ಕೊರೋನಾ ಸಭೆ’ ನಡೆಸುತ್ತಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಲಾಕ್ಡೌನ್ ಭವಿಷ್ಯ ನಿರ್ಧರಿಸಲಿದ್ದಾರೆ ಎನ್ನಲಾಗಿದೆ.

ಇಂದಿನ ಸಭೆಯಲ್ಲಿ ನಿರ್ಧಾರ ಆಗಲಿದೆ ಕೆಲವೊಂದು ಮಹತ್ವದ ವಿಚಾರ.!!

 • ಮತ್ತೆ ಬೆಂಗಳೂರಿಗರಿಗೆ ಲಾಕ್ ಡೌನ್.. ಸೆಮಿ ಲಾಕ್ ಡೌನ್ ಅಥವಾ ನೈಟ್ ಕರ್ಫ್ಯೂ ಬಿಸಿ.!?
 • ಸರ್ಕಾರಕ್ಕೆ ಈಗಾಗಲೇ ಚಿತ್ರ ಮಂದಿರಕ್ಕೆ ಶೇ.50 ರಷ್ಟು ಫಿಲ್ಲಿಂಗ್ ಆದೇಶ ಮಾಡಿ ಎಂದು‌ ಕೋರಿಕೊಂಡಿದ್ದ ಬಿಬಿಎಂಪಿ.
 • ಆದರೆ ಬಿಬಿಎಂಪಿ ಪ್ರಸ್ತಾವನೆ ತಿರಸ್ಕಿರಿಸಿರುವ ಸಿಎಂ ಯಡಿಯೂರಪ್ಪ.

 • ನಾಳಿನ ಸಭೆಯಲ್ಲಿ ನಗರದ ಶಾಲೆ ಕಾಲೇಜುಗಳನ್ನ ಮತ್ತೆ ಮುಚ್ಚುವ ಕುರಿತು ಚರ್ಚೆ.
 • 1 ರಿಂದ 12ನೇ ತರಗತಿಯವರೆಗೆ ಸದ್ಯಕ್ಕೆ ಮುಚ್ಚುವುದು ಒಳಿತು ಎಂದಿರುವ ತಾಂತ್ರಿಕ ಸಲಹಾ ಸಮಿತಿ.
 • ಜಿಮ್, ಪಾರ್ಕ್, ಫುಡ್ ಸ್ಟ್ರೀಟ್ ಗಳನ್ನು ಮುಚ್ಚುವುದು‌ ಒಳ್ಳೆದು ಎಂದಿರುವ ಬಿಬಿಎಂಪಿ.
 • ಕಮ್ಯೂನಿಟಿ ಸ್ಪ್ರೆಡ್ಡಿಂಗ್ ತಡೆಗಟ್ಟಲು ಯೋಜನೆ ರೂಪಿಸುವ ಬಗ್ಗೆ ವಿಶೇಷ ತಂಡ ರಚನೆ ಸಾಧ್ಯತೆ.
 • ಇಂದಿನ ಸಭೆಯಲ್ಲಿ ನಗರದ ಕೆಲವು ಮಾರ್ಕೆಟ್ ಗಳನ್ನು ಮುಚ್ಚುವ ಬಗ್ಗೆ ಪ್ರಸ್ತಾಪಿಸಲಿರುವ ಬಿಬಿಎಂಪಿ
 • ಇಂದಿನ ಸಭೆಯಲ್ಲಿ ಪ್ರಸ್ತಾಪವಾಗಲಿರುವ ಪ್ರಮುಖ ಅಂಶಗಳು.!!

 • ಬೆಂಗಳೂರಿನಲ್ಲಿ ಕೊರೋನಾ‌ ಪರೀಕ್ಷೆ ಹೆಚ್ಚಳ ಮಾಡುವ ಬಗ್ಗೆ.
 • ಝೋನ್ ಮಟ್ಟದಲ್ಲಿ ಲಸಿಕೆ ಹಂಚಿಕೆ ಪ್ರಮಾಣ ದ್ವಿಗುಣಗೊಳಿಸುವ ಚರ್ಚೆ.
 • ವಾರ್ಡ್ ಮಟ್ಟದಲ್ಲಿ ಲಾಕ್ ಡೌನ್ ಹೇರುವ ವಿಚಾರ ಪ್ರಸ್ತಾಪ ಮಾಡಲಿರುಗ ಬಿಬಿಎಂಪಿ.
 • ಪಾರ್ಕ್, ಚಿತ್ರಮಂದಿರ, ಮಾಲ್, ಜಿಮ್ ಗಳನ್ನು ಭಾಗಶಃ ಮುಚ್ಚುವ ಚಿಂತನೆ.
 • ಬೆಂಗಳೂರಿನಲ್ಲಿ 3 ಸಾವಿರ ಪ್ರಕರಣ ದಾಖಲಾದರೆ‌ ನೈಟ್ ಕರ್ಫ್ಯೂ ಜಾರಿ ಮಾಡಲು ಮನವಿ.
 • ನಗರದಲ್ಲಿ 3 ಸಾವಿರದಿಂದ 5 ಸಾವಿರದ ವರೆಗೆ ಕೇಸ್ ದಾಖಲಾದರೆ ಸೆಮಿ ಲಾಕ್ ಡೌನ್ ಮಾಡುವ ಬಗ್ಗೆ ಚಿಂತನೆ.
 • 5 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾದರೆ‌ ಸಂಪೂರ್ಣ ಲಾಕ್ ಡೌನ್ ಮಾಡುವ ಬಗ್ಗೆ ಪ್ರಸ್ತಾಪ.
 • ಆರೋಗ್ಯ ಸೇತು ಆ್ಯಪ್ ಮೂಲಕ ನಗರಕ್ಕೆ ಹೊರ ಮತ್ತು ಒಳ ಬರುವ ಜನರ ಮೇಲೆ ಕಣ್ಣಿಡುವ ಬಗ್ಗೆ ಚಿಂತನೆ.
 • ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲು ಜನರಿಗೆ ಅರಿವು ಕಾರ್ಯಕ್ರಮ.
 • ವರ್ಕ್ ಫ್ರಂ ಹೋಮ್ ಮುಂದುವರಿಕೆಗೆ ಸಲಹೆ ನೀಡಲಿರುವ ಬಿಬಿಎಂಪಿ.
 • ಜನನಿಬಿಡ ಪ್ರದೇಶದಲ್ಲಿ ಮೊಬೈಲ್ ಟೆಸ್ಟಿಂಗ್ ಸೆಂಟರ್ ಗಳ ಸಂಖ್ಯೆ ಹೆಚ್ಚಿಸಲು‌ ಸಲಹೆ.
 • error: Content is protected !! Not allowed copy content from janadhvani.com