ರಾಸಲ್ ಖೈಮ: ಅನೈತಿಕ ಸಂಬಂಧ ಕುರಿತು ತಿಳಿಯಲು ಗಂಡನ ಮೊಬೈಲ್ ಕದ್ದು ನೋಡಿದ ಯುವತಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅನುಮತಿ ಪಡೆಯದೆ ಮೊಬೈಲ್ ಪರಿಶೋಧನೆ ಮೂಲಕ ಆಕೆ ಖಾಸಗಿತನವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಗಂಡ ದೂರು ನೀಡಿದ್ದಾರೆ.
ಫೋನ್ ಪರಿಶೋಧನೆ ಮಾಡಿದ ಬಗ್ಗೆ ಹೆಂಡತಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ ಗಂಡನಿಗೆ ಬೇರೆ ಒಬ್ಬಳು ಮಹಿಳೆಯೊಂದಿಗೆ ಸಂಬಂಧವಿದ್ದು, ಆಕೆಯೊಂದಿಗೆ ಗಂಡ ಯಾವಾಗಲೂ ಮಾತನಾಡುವುದು, ಸಂದೇಶ ಕಳುಹಿಸುವುದು ಮಾಡುತ್ತಾರೆ ಎಂದ ಹೆಂಡತಿ, ಅಜ್ಞಾತಳಾದ ಆ ಮಹಿಳೆಯ ಕುರಿತು ತಿಳಿಯುವ ಸಲುವಾಗಿ ನಾನು ಮೊಬೈಲ್ ತಪಾಸಣೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಆದರೆ, ಖಾಸಗಿತನ ಉಲ್ಲಘಿಸಿದ ತಪ್ಪಿಗೆ ಫೆಡರಲ್ ಕಾನೂನು ಪ್ರಕಾರ ಆಕೆಗೆ ಶಿಕ್ಷೆ ವಿಧಿಸಬೇಕು ಎಂದು ಪ್ರೊಸಿಕ್ಯೂಷನ್ ವಾದಿಸಿದೆ. ಯುಎಇ ಕಾನೂನಿನ ಪ್ರಕಾರ ಖಾಸಗಿತನದ ಉಲ್ಲಂಘನೆಯು ಬಂದನ, ದಂಡ ಲಭಿಸಬಹುದಾದ ಅಪರಾಧವಾಗಿದೆ. ಅದೇ ವೇಳೆ ದಾಂಪತ್ಯವನ್ನು ಉತ್ತಮರೀತಿಯಲ್ಲಿ ಮುಂದಕ್ಕೆ ಕೊಂಡು ಹೋಗಲು ಪರಿಶ್ರಮ ಪಟ್ಟರೂ ಪತಿಯಾದವನು ಆಕೆಯನ್ನು ವಂಚಿಸಿದ್ದಾನೆ ಎಂದು ಯುವತಿಯ ವಕೀಲ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ