janadhvani

Kannada Online News Paper

ಮುಸ್ಲಿಮರು ಸರಕಾರದ‌ ಕೆಲಸ ಮಾಡಬಾರದೇ? ಹಿಂದೂ ರಾಷ್ಟ್ರವಾಯಿತೇ ಭಾರತ!

ಮದರಾಸ ನಡೆಸುತ್ತಿದ್ದೀರಾ? ಸಂಸದನ ಪ್ರಶ್ನೆ! ಹಾಗಾದರೆ, ಭಾರತದ ಪ್ರಜೆಗಳಾದ ಮುಸ್ಲಿಮರು ಮನುವಾದಿಗಳ ಸರಕಾರದ ಕೆಲಸ ಮಾಡಬಾರದೇ? ಅದನ್ನು ಕೇಳಲು ಇಲ್ಲಿನ ಪತ್ರಕರ್ತರು ವೃತ್ತಿಪರತೆ ಕಳಕೊಂಡರೇ? ಇಲ್ಲಿನ ರಾಷ್ಟ್ರಪತಿ, ರಾಜ್ಯಪಾಲರು ಸೇರಿದಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ಕೋರ್ಟ್ ನ್ಯಾಯಾಧಿಶರೆಲ್ಲಾ ಏನು ಮಾಡುತ್ತಿದ್ದಾರೆ? ಇದು ಹಿಂದೂ ರಾಷ್ಟ್ರ ಆದರೆ, ಹೇಗಿರುತ್ತದೆ ಅನ್ನುವದರ ಸ್ಯಾಂಪಲ್ ಇರಬೇಕು. ಬಾಕಿ, ಕೊರೋನಾದ ಮೂರನೇ ಅಲೆಗೆ ಕೊಚ್ಚಿಹೋಗದೇ ಬಾಕಿ ಉಳಿದರೆ ನೋಡೋಣ ಏನಂತೀರಿ ಪ್ರಜೆಗಳೇ?

(ಜನಧ್ವನಿ ವಿಶೇಷ ಲೇಖನ) ಬೆಂಗಳೂರಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಎಂಬಾತ ಬಿಜೆಪಿಯ ಆಡಳಿತವನ್ನೇ ಹೊಂದಿರುವ ಬೆಂಗಳೂರಿನ‌ ಮಹಾನಗರ ಪಾಲಿಕೆಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ‌ ಭರದಲ್ಲಿ ತಾನು ಬಿಜೆಪಿ ಸೀಟಿನಿಂದಲೇ ಸಂಸದನಾಗಿರುವುದನ್ನು ಮರೆತು, ಮುಖ್ಯ ಮಂತ್ರಿ ಯುಡಿಯೂರಪ್ಪ ಮತ್ತು ಉಪ ಮುಖ್ಯಮಂತ್ರಿ ಆರ್. ಆಶೋಕ್ ಉಸ್ತುವಾರಿ ಹೊಂದಿರುವ ಕ್ಷೇತ್ರದಲ್ಲೇ ನಡೆದ ಹಗರಣದಲ್ಲಿ ತಮ್ಮ ಪಾಲೇನು ಇಲ್ಲ ಎಂಬಂತೆ ನಟಿಸಿದ್ದು ಜನರಿಗೆ ಗೊತ್ತಾಗಿದೆ.

ಕೊರೋನಾ ಎರಡನೇ ಅಲೆ ಭಾರತವನ್ನು ಮತ್ತು ಇಲ್ಲಿನ ಸರಕಾರವನ್ನು ಬೆಂಡೆತ್ತಿದಂತೆ ಬೇರೆ ಯಾವ ರಾಷ್ಟ್ರವನ್ನೋ, ಸರಕಾರವನ್ನೋ ಕಾಡಲಿಲ್ಲ ಅನ್ನುವುದು ಸತ್ಯ. ಭಾರತವನ್ನೇಕೆ ಈ ರೀತಿ ಕಾಡಿತು ಅನ್ನುವುದಕ್ಕೆ ಹಲವು ಕಾರಣ.

ಮೊತ್ತ ಮೊದಲನೆಯದ್ದು, ಕೋಮುವಾದ. ಅದುವೇ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ದಿನದಿಂದ ಮುಸ್ಲಿಮರನ್ನು ಪ್ರತ್ಯೇಕಿಸಿ, ರಾಷ್ಟ್ರವೊಂದರ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಆ ಹೆಸರಲ್ಲಿ ಹಲವಾರು ಹಿಂಸೆಗಳಿಗೆ, ಅನಾಚಾರಗಳಿಗೆ, ಅತ್ಯಾಚಾರಗಳಿಗೆ ಮುಸ್ಲಿಮರನ್ನು ಗುರಿ ಮಾಡಲಾಯಿತು. ಮುಸ್ಲಿಮರು ಇಲ್ಲದ ಭಾರತವೊಂದರ ಸಾಕ್ಷಾತ್ಕಾರದ ಕನಸು ಕಂಡು, NRC, CAA, ಕಾಶ್ಮೀರ, ದೆಹಲಿ ಗಲಭೆಗಳಿಗೆ ಭಾರತದ ಜಾತ್ಯಾತೀತ ವ್ಯವಸ್ಥೆ ಜೀವಂತ ಸಾಕ್ಷಿಯಾಯಿತು.

ಭಗವಂತ ಮಳೆ ಸುರಿಸುವುದು, ಈ ಲೋಕದ ಎಲ್ಲಾ ಸುಖಾಡಂಬರಗಳನ್ನು ನೀಡುವುದು ಧರ್ಮವನ್ನು ನೋಡಿಯೋ ಜಾತಿಯನ್ನ ನೋಡಿಯೋ ಅಲ್ಲವಾದ್ದರಿಂದ, ಆ ಭಗವಂತನಿಗೆ ಮುಸ್ಲಿಮರನ್ನು ಭಾರತದಂತ ಜಾತ್ಯಾತೀತ ದೇಶದಲ್ಲಿ ಪ್ರತ್ಯೇಕವಾಗಿ ಕಾಣುವುದು ಇಷ್ಟವಾಗಲಿಲ್ಲ ಎಂದು ತೋರುತ್ತೆ. ಜಗತ್ತೇ ತಲ್ಲಣಿಸುತ್ತಾ ಕೊರೋನಾ ಎಂಬ ಕ್ರಿಮಿ ಭಾರತವನ್ನು ಆಕ್ರಮಿಸಲು ತೊಡಗುತ್ತೆ. ಆರಂಭದಲ್ಲಿ, ಅದನ್ನು ಮುಸ್ಲಿಮ್ ವೈರಸನ್ನಾಗಿಸುವ ಯತ್ನಗಳೂ ನಡೆಯಿತು. ರೋಗ ಮಾತ್ರ ಜಾತಿಭೇದವಿಲ್ಲದೇ ಎಲ್ಲರನ್ನೂ ಬಲಿ ತೆಗೆಯಿತು.

ಅಷ್ಟರಲ್ಲಿ, NRCಯನ್ನು NPR ಮೂಲಕ ಸಾಧಿಸಬೇಕೆಂಬ ಹಠದೊಂದಿಗೆ ಯೋಜನೆ ತಯಾರಾಗಿತ್ತು. ಕೊರೋನಾ ಅದನ್ನೆಲ್ಲಾ ಬುಡಮೇಲಾಗಿಸಿ, ಸರಕಾರವನ್ನೇ ಸ್ಥಗಿತಗೊಳಿಸಿ, GDP, GST, ನಿರುದ್ಯೋಗ ಮುಂತಾದ ಅನೇಕ ರೀತಿಯ ಸಮಸ್ಯೆಗಳನ್ನು ಜಟಿಲವಾಗಿಸಿತು.

ಪಾಠ ಕಲಿಯದ ಸರಕಾರ ಮತ್ತೆ ಮುಸ್ಲಿಂ ವಿರೋಧ ಮಾತ್ರವಲ್ಲದೇ, ಬಡವರ ವಿರೋಧ ನೀತಿಯನ್ನೂ ರೈತ ವಿರೋಧಿ ಕಾಯ್ದೆಗಳ ಮೂಲಕ ಹೇರಲ್ಪಟ್ಟಾಗ, ಭಗವಂತ ಬಡವರ ಕಣ್ಣೀರನ್ನು ಕೊರೋನಾದ ಎರಡನೇ ಅಲೆಯಾಗಿಸಿದಂತೆ ತೋರುತ್ತಿದೆ.

ಅಕ್ರಮ, ಅನ್ಯಾಯಗಳೊಂದಿಗೆ ಆಡಳಿತ ನಡೆಸುವ ಸರ್ವಾಧಿಕಾರಿಗಳ ಅಟ್ಟಹಾಸಗಳನ್ನು ಮಟ್ಟ ಹಾಕಿದ ಹಲವು ಸಂದರ್ಭಗಳು ಇತಿಹಾಸದಲ್ಲಿ ದಾಖಲಾಗಿದೆ.

ದುರಾಡಳಿತದಿಂದಾಗಿಯೇ ಭಾರತ ಮತ್ತೊಂದು ಭೀಕರ ಕೊರೋನಾ ಸಾಂಕ್ರಾಮಿಕಕ್ಕೆ ಬಲಿಯಾಯಿತು ಎಂದು ಹೇಳುವವರು, ಬಿಜೆಪಿ ಮತ್ತು ಆರೆಸ್ಸಸ್ ವಿರೋಧಿಗಳಲ್ಲ. ಒಂದು ಕಾಲದಲ್ಲಿ, ಅಂಧವಾದ ಮೋದಿ ಭಕ್ತಿಯಿಂದ ನಮಿಸುತ್ತಿದ್ದ ಶೂದ್ರರೆಲ್ಲಾ ಈಗ ತಿರುಗಿ ಬಿದ್ದಿದ್ದಾರೆ. ಒಂದು ವರ್ಷಗಳಲ್ಲಿ ಕೊರೋನಾ ಎದುರಿಸಲು ಅಗತ್ಯವಾದ ಯಾವ ಸಿದ್ಧತೆಗಳನ್ನೂ ಮಾಡದೇ, ಚುನಾವಣೆ ಗೆಲ್ಲುವುದರಲ್ಲೇ ಕಾಲ ಕಳೆದ ಪ್ರಧಾನ ಮಂತ್ರಿ, ಗೃಹಮಂತ್ರಿಯಾದಿ ಸಂಪುಟ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಭಾರೀ ಬೆಲೆ ತೆರಬೇಕಾಯಿತು. ಜನವಿರೋಧವನ್ನು ಬಹಳಷ್ಟು ಕಟ್ಟಿಕೊಳ್ಳಬೇಕಾಯಿತು.

ಕರ್ನಾಟಕವಂತೂ ಮೃತ್ಯು ಕೂಪವಾಗಿ, ರೆಸಾರ್ಟ್ ರಾಜಕಾರಣ, ಸಿಡಿ ಸೆಕ್ಷ್ ಹಗರಣಕ್ಕೆಲ್ಲಾ ಬೆಲೆ ತೆರಬೇಕಾಯಿತು. ಸಿಎಂ ಎರಡು ಬಾರಿ ಕೊರೊನಾಗೆ ತುತ್ತಾಗಿಯೂ ಬದುಕುಳಿದರು. ಆಕ್ಷಿಜನ್ ಜನಸಾಮಾನ್ಯರ ಕೈಗೆ ಸಿಗದಾಯಿತು. ಹಾಸ್ಪಿಟಲ್ ಬೆಡ್ ಪಡೆಯಲೂ ಲಂಚ ತಿನ್ನಿಸಬೇಕಾದ ಗತಿಕೇಡು, ಬಿಜೆಪಿ ಗೆಲ್ಲಿಸಿದ ಜನಕ್ಕೆ ಬಂತು. ಲಂಚ ತಿಂದವರು, ಮಸಣ ಸೇರಿದ ಬಡ ಹೆಣಗಳ ಮಾಂಸ ತಿಂದ ಸಮಾನ ಪಾಪ ಕಟ್ಟಕೊಂಡರು.

ಈ ಎಲ್ಲಾ ಪಾಪಗಳೊಂದಿಗೆ, ಬಿಜೆಪಿ ಮುಂದಿನ ಚುನಾವಣೆ ಎದುರಿಸಲು ಸಜ್ಜಾಗುತ್ತಿರುವುದು ಕಾಣುವಾಗ ಅಚ್ಚರಿಯೊಂದಿಗೆ, ನಗು ಕೂಡಾ ಬರುತ್ತದೆ. ಶಾದಿ ಭಾಗ್ಯ, ಅನ್ನ ಭಾಗ್ಯ ಎಂಬ ಬಡವರ ಭಾಗ್ಯಗಳನ್ನು ಕಿತ್ತೊಗೆದ ಸರಕಾರ ‘ಮಸಣ ಭಾಗ್ಯ’ ಎಂಬ ಹೊಸ ಯೋಜನೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿತು.

ಉಚಿತವಾಗಿ ಸಿಗೋ ಆಕ್ಷಿಜನ್ ಅನ್ನು ಜನ ಬೆಲೆ ತೆತ್ತು ಉಸಿರಾಡುವ ಗತಿಕೇಡು ಬಂದು ಬಿಟ್ಟಿತು. ಮುಸ್ಲಿಮ್ ರಾಷ್ಟ್ರಗಳೂ ಸೇರಿದಂತೆ, ಹಲವು ದೇಶಗಳು ಆಕ್ಷಿಜನ್ ರವಾನಿಸಿದ್ದೇ, ರವಾನಿಸಿದ್ದು ಭಾರತ ತಲುಪಿ ಅದು ಯಾರ ಬಗಲಿಗೆ ಸೇರಿದೆ ಅನ್ನುವುದರ ಮಾಹಿತಿಯ ಕೊರತೆ. ಸರಕಾರದ ಬಳಿಯೂ ಆ ಲೆಕ್ಕವಿಲ್ಲ ಅನ್ನುವುದೇ ಅಂದಾಜು. ಅಂಬಾನಿ, ಅದಾನಿಯಾದಿಗಳು ತಮ್ಮ ಸಂಪತ್ತು ಹೆಚ್ಚಾಗಿಸಿದ್ದೇ ಬಂತು. ಬಡ ಭಾರತೀಯ ಆಕ್ಷಿಜನ್ ಇಲ್ಲದೇ ಸತ್ತು ಮಸಣ ಸೇರಿದಾಗಲೂ, ಅಂತ್ಯ ಸಂಸ್ಕಾರಕ್ಕೂ ಗತಿ ಇಲ್ಲದಾಯಿತು. ಕೊರೋನಾದಿಂದ ಸತ್ತವರನ್ನೆಲ್ಲಾ ಹೊತ್ತಿಸಬೇಕೆಂದು ಪ್ರಾರಂಭದಲ್ಲಿ ಹೇಳಿದ್ದರು. ಅದು ಕಾರ್ಯರೂಪಕ್ಕೆ ಬಂದಿರುತ್ತಿದ್ದರೆ, ಆಸ್ಪತ್ರೆಗಳಿಗೆ ಬೆಂಕಿ ಹಚ್ಚಬೇಕಾದ ಪರಿಸ್ಥಿತಿ ನಮ್ಮ ನಾಡಿಗೆ ಬರುತ್ತಿತ್ತೇನೋ?

ಲಂಚ, ಭೃಷ್ಟಚಾರದಲ್ಲಿ ಕಾಂಗ್ರೆಸ್ ಸರಕಾರಕ್ಕಿಂತ ಬಿಜೆಪಿ ಒಂದು ಹೆಜ್ಜೆ ಮುಂದು. ಬಿಜೆಪಿಯು ತನ್ನ ಪಕ್ಷದ ಫಂಡ್ ತುಂಬಲು ಬಹಳಷ್ಟು ಹಣ ಮಾಡಬೇಕಾಗುತ್ತದೆ. ಶಾಸಕರ ಖರೀದಿ ಮಾಡಲು, ರೆಸಾರ್ಟ್ ರಾಜಕಾರಣಕ್ಕೆ ಎಂಬಿತ್ಯಾದಿ ಖರ್ಚುಗಳನ್ನೆಲ್ಲಾ ಸರಕಾರದ ಖಜಾನೆಯೇ ಭರಿಸಬೇಕಾಯಿತು.

ಪಿಎಂ ನೋ ಕೇರ್ಸ್ ಫಂಡ್‌ಗೆ ಕೋಟಿ ಕೋಟಿ ಕೊಟ್ಟದ್ದೇ ಬಂತು, ಪಂ ಬಂಗಾಳದ ಒಬ್ಬೊಬ್ಬ ಶಾಸಕನಿಗೂ ಬಹಳ ಬೆಲೆ ಬಂತು. ಕೋವಿಡ್ ಎದುರಿಸಲು ಸರಕಾರ ಸಂಪೂರ್ಣ ವಿಫಲವಾಯಿತು. ಬಡವ ಬಲ್ಲಿದ ಸೇರಿದಂತೆ ಒಂದಷ್ಟು ಶ್ರೀಮಂತರಿಗೂ ಮಸಣ ಸೇರಬೇಕಾಯಿತು. ಯುಪಿಯಂತೂ ನರಕ ಸದೃಶವಾಯಿತು. ಅಲ್ಲಿನ ಜನಗಳ ಅವಸ್ಥೆ ಶೋಚನೀಯ. ಸರಕಾರದ ವಿರುದ್ಧ ಮಾತನಾಡಲೂ ಸಾಧ್ಯವಿಲ್ಲ ಎಂಬಂತಾಗಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬೇಕಾಯಿತು. ಮೋದಿಯ ಬಕೆಟ್ ಮೀಡಿಯಾಗಳಿಗೂ ಬಿಸಿ ತಟ್ಟಿತು. ಸರಕಾರದ ವಿರುದ್ಧ ಸೊಲ್ಲೆತ್ತಲಾಗದೇ, ತಮ್ಮ ಟಿ‌ಆರ್‌ಪಿ ಉಳಿಸಿಕೊಳ್ಳಲಾಗದೇ ನರಳಾಡಬೇಕಾಯಿತು. ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಬಳಿಕವಂತೂ, ನಮೋ ಮತ್ತು ಅಮಿಶಾ ಮುಜುಗರ ಅನುಭವಿಸಬೇಕಾಯಿತು. ಬಿಜೆಪಿಯ ಅಜೆಂಡಾಗಳು ಕೆಲಸ ಮಾಡುತ್ತಿಲ್ಲ, ಜನ ವಿರೋಧ ಜಾಸ್ತಿಯಾಗುತ್ತಿರುವುದು ಇನ್ನೊಂದು ತಲೆನೋವಾಗಿ ಪರಿಣಮಿಸಿತು.

ಅಷ್ಟರಲ್ಲಿ, ಪಂಕ್ಚರ್ ಹಾಕುವವರ ಹೆಸರುಗಳನ್ನು ಬೆಂಗಳೂರು ಮಹಾನಗರ ಪಾಲಿಕೆಯ ಕೋವಿಡ್ ವಾರ್ ರೂಮ್ ಅಧಿಕಾರಗಳೆಂದು 17ಮಂದಿಯ ಹೆಸರನ್ನೂ ಅದೇ ಬಾಯಿಯಿಂದ ಹೇಳಿಸಿದ್ದು ಭಗವಂತನ ಮಹಿಮೆ. ಎದೆ ಸೀಳಿದರೂ ಒಂದಕ್ಷರ ಬರಲ್ಲ, ಅಂದವರು, ಬರೋಬ್ಬರಿ 17ಮಂದಿಯ ಮುಸ್ಲಿಮರ ಹೆಸರನ್ನು ಹೇಳಬೇಕಾಗಿ ಬಂತು. ಆತನ ಮುಸ್ಲಿಂ ವಿರೋಧ ಎಷ್ಟರಮಟ್ಟಿಗೆ ಇತ್ತು ಅಂದರೆ, ಮುಸ್ಲಿಮ್ ರಾಷ್ಟ್ರಗಳಿಂದ ಬಂದ ಆಕ್ಷಿಜನ್‌ಗಳೆಲ್ಲಾ ಅಷ್ಟರಲ್ಲೇ ವಾಪಾಸು ಹೋಗಬೇಕಿತ್ತು. ಆದರೆ, ಆ ಧೈರ್ಯ ಈ ಬಾಲಕನಿಗೆ ಇದ್ದಿಲ್ಲವೋ, ಅಲ್ಲ ಪ್ರಧಾನ ಮಂತ್ರಿ ಕ್ಯಾರೇ ಅನ್ನಲಿಲ್ಲವೋ ನಮಗೆ ತಿಳಿದಿಲ್ಲ.

ಈಗ ನೋಡಬೇಕಾದರೆ, 205 ಮಂದಿಯಲ್ಲಿ 17ಮಂದಿ ಮುಸ್ಲಿಮರು ವಾರ್ ರೂಮಲ್ಲಿ ಇರೋದೇ ಈತನ ಸಿಟ್ಟು ನೆತ್ತಿಗೇರಲು ಕಾರಣ. ಪಂಕ್ಚರ್ ಹಾಕೋರು, ಬಿಜೆಪಿ ಸರಕಾರದಲ್ಲಿ ಸಂಬಳ ಪಡೆಯಬೇಕಾದರೆ, ಅದು ಆತನ ಸಿಟ್ಟು ಭರಿಸದೇ ಇರುತ್ತಾ! ಈತ ಮತ್ತೊಂದು ನ್ಯೂಸ್ ನೋಡಿಲ್ಲವೋ ಏನು? ಚಿತೆಗೆ ಬೆಂಕಿ ಇಡಲು ಜನ ಇಲ್ಲದೇ ಇದ್ದಾಗ, ಒಂದಷ್ಟು ಮುಸ್ಲಿಂ ಯುವಕರು ಆ ಕಾರ್ಯ ನೆರವೇರಿಸಿದ್ದು ಗೊತ್ತಾದರೆ, ಈತನ ಕರುಳು ಹೊತ್ತಿ ಉರಿಯ ಬೇಕಿತ್ತಲ್ಲವೇ? ಆ ಹೆಣಗಳು ಸಂಸ್ಕಾರ ಭಾಗ್ಯ ಹೀನವಾಗಿ, ಕೊಳೆಯಬೇಕಾಗಿತ್ತು ಈತನ ಅವಧಿಯಲ್ಲಿ. ಇದನ್ನು ಭಗವಂತ ಕ್ಷಮಿಸಲ್ಲ. ಈ ಎಲ್ಲಾ ಪಾಪಗಳನ್ನು ಕಟ್ಟಿಕೊಂಡು ಸರಕಾರ ನಡೆಸಿ, ಮುಂದಿನ ಚುನಾವಣೆ ಎದುರಿಸಿ. ಕನ್ನಡ ನಾಡಿನ ಜನತೆ ಕನಿಷ್ಠ ಬುದ್ಧಿವಂತರಾಗಿರೋದಾರೆ, ನಿಮ್ಮ ಪಕ್ಷಕ್ಕೆ ಚಟ್ಟ ಕಟ್ಟೋರಂತೆ.

ಮದರಾಸ ನಡೆಸುತ್ತಿದ್ದೀರಾ? ಸಂಸದನ ಪ್ರಶ್ನೆ! ಹಾಗಾದರೆ, ಭಾರತದ ಪ್ರಜೆಗಳಾದ ಮುಸ್ಲಿಮರು ಮನುವಾದಿಗಳ ಸರಕಾರದ ಕೆಲಸ ಮಾಡಬಾರದೇ? ಅದನ್ನು ಕೇಳಲು ಇಲ್ಲಿನ ಪತ್ರಕರ್ತರು ವೃತ್ತಿಪರತೆ ಕಳಕೊಂಡರೇ? ಇಲ್ಲಿನ ರಾಷ್ಟ್ರಪತಿ, ರಾಜ್ಯಪಾಲರು ಸೇರಿದಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ಕೋರ್ಟ್ ನ್ಯಾಯಾಧಿಶರೆಲ್ಲಾ ಏನು ಮಾಡುತ್ತಿದ್ದಾರೆ? ಇದು ಹಿಂದೂ ರಾಷ್ಟ್ರ ಆದರೆ, ಹೇಗಿರುತ್ತದೆ ಅನ್ನುವದರ ಸ್ಯಾಂಪಲ್ ಇರಬೇಕು. ಬಾಕಿ, ಕೊರೋನಾದ ಮೂರನೇ ಅಲೆಗೆ ಕೊಚ್ಚಿಹೋಗದೇ ಬಾಕಿ ಉಳಿದರೆ ನೋಡೋಣ ಏನಂತೀರಿ ಪ್ರಜೆಗಳೇ?

ಒಂದು ಧರ್ಮಕ್ಕೆ ನೆಲೆ ನಿಲ್ಲಬೇಕಾದರೆ, ಇನ್ನೊಂದು ಧರ್ಮೀಯರು ಇಲ್ಲದೇ ಆಗಬೇಕೆಂದು ಬಯಸುವುದಾಗಿದ್ದರೆ, ಅದರ ಹೆಸರು ಧರ್ಮ ಅಲ್ಲ, ಅದು ಅಧರ್ಮ. ಶತ್ರುಗಳನ್ನು ಕೊನೆಗಾಣಿಸಿ, ಶತ್ರು ಇಲ್ಲದ ರಾಜ್ಯದಲ್ಲಿ, ಹಾಯಾಗಿರಲು ಹಪಹಪಿಸುತ್ತಿರುವ ಶಂಡರಿವರು.

error: Content is protected !! Not allowed copy content from janadhvani.com