janadhvani

Kannada Online News Paper

ಬೆಂಗಳೂರಿನಲ್ಲಿ ರಾಜ್ಯ ಎಸ್ಸೆಸ್ಸೆಫ್ ನಿಂದ ಸಿಟ್ – ಟುಗೆದರ್

ಬೆಂಗಳೂರು:ಕರ್ನಾಟಕ ರಾಜ್ಯ ಸುನ್ನೀ ಸ್ಟೂಟೆಂಡ್ಸ್ ವತಿಯಿಂದ ಎಸ್ಸೆಸ್ಸೆಫ್ ಜಿಲ್ಲಾ ನಾಯಕರೊಂದಿಗೆ ಸಿಟ್-ಟುಗೆದರ್ ಕಾರ್ಯಕ್ರಮವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಸಯ್ಯದ್ ಉಮ್ಮರ್ ಅಸ್ಸಖಾಫ್ ಮದನಿ ಮನ್ಶರ್ ರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು.

ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಶರೀಫ್ ಮಾಸ್ಟರ್ ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಎಸ್ಸೆಸ್ಸೆಫ್ ನ ವಿವಿಧ ವಿಭಾಗಗಳ ಕಾರ್ಯದರ್ಶಿಗಳು 6 ತಿಂಗಳುಗಳ ಪದ್ದತಿಗಳನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಡೆಪ್ಯುಟಿ ಅಧ್ಯಕ್ಷ ಖಾಝಿ ಗುಲಾಮ್ ಹುಸೈನ್ ನೂರಿ, ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ,ರಾಜ್ಯ ಕಾರ್ಯದರ್ಶಿಗಳಾದ ಹಾಫಿಳ್ ಯಾಕೂಬ್ ಸ ಅದಿ ನಾವೂರು,ಸಿರಾಜುದ್ದೀನ್ ಸಖಾಫಿ ಕನ್ಯಾನ,ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಹುಸೈನ್ ಸ ಅದಿ ಹೊಸ್ಮಾರ್,ಮುಸ್ತಫಾ ನಯೀಮಿ ಮೋಂಟುಗೋಳಿ,ಮೌಲಾನಾ ಅಶ್ರಫ್ ರಝಾ ಅಂಜದಿ,ನವಾಝ್ ಭಟ್ಕಳ ರಾಜ್ಯ ನಾಯಕರಾದ ಶಾಕಿರ್ ಹಾಜಿ ಮಿತ್ತೂರು,ಮುಸ್ತಫಾ ಮಾಸ್ಟರ್ ಉಳ್ಳಾಲ,ಶರೀಫ್ ಮಡಿಕೇರಿ,ಅಶ್ರಫ್ ಮುಸ್ಲಿಯಾರ್ ಕುಂದಾಪುರ,ಸಫ್ವಾನ್ ಚಿಕ್ಕಮಗಳೂರು,ಎನ್.ಸಿ ರಹೀಂ ಉಡುಪಿ, ಮುನೀರ್ ಮದನಿ ಮೈಸೂರು,ಅಬ್ದುಲ್ ಲತೀಫ್ ಸ ಅದಿ ಶಿಮೊಗ್ಗ,ಮುಬಶ್ಶಿರ್ ಅಹ್ಸನಿ ಕೊಂಡಂಗೇರಿ,ಶಾಫಿ ಸ ಅದಿ ಬೆಂಗಳೂರು,ವಾಜಿದ್ ಹಾಸನ,ರಪೀಕ್ ಮಡಿಕೇರಿ,ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಸ್ವಾಗತಿಸಿ,ಕೊನೆಗೆ ವಂದಿಸಿದರು.

error: Content is protected !! Not allowed copy content from janadhvani.com