janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ದುಬೈ: ದುಬೈ ವಿಮಾನ ನಿಲ್ದಾಣ ರಸ್ತೆ ಸಮಾನಾಂತರವಾದ ಟ್ರೊಪೋಳಿ ಸ್ಟ್ರೀಟ್ ಅಭಿವೃದ್ಧಿ ಯೋಜನೆಯು ಶೇ 90 ರಷ್ಟು ಪೂರ್ಣಗೊಂಡಿರುವುದಾಗಿ ದುಬೈ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರವು ತಿಳಿಸಿದೆ.

ಎರಡು ಪ್ರಮುಖ ಹೈವೇಗಳನ್ನು ಬಂಧಿಸುವ ರಸ್ತೆಯಾಗಿದೆ ಇದು. ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆ ಮತ್ತು ಎಮಿರೇಟ್ಸ್ ರಸ್ತೆಯನ್ನು ಬಂಧಿಸುವ 12 ಕಿ.ಮೀ. ದೈರ್ಘ್ಯವಿರುವ ಈ ಯೋಜನೆಯು ಜೂನ್ ಕೊನೆಯಲ್ಲಿ ಉದ್ಘಾಟನೆ ಗೊಳ್ಳಲಿದೆ. ಈ ಮೂಲಕ ದುಬೈ – ಶಾರ್ಜಾ ರಹದಾರಿಯ ಓಡಾಟ ಸುಗಮವಾಗಲಿದೆ. ಅದೇ ರೀತಿ ವರ್ಖ, ಮಿರ್ದಿಫ್ ಕಡೆಗೂ ಪ್ರವೇಶ ಸುಲಭವಾಗಲಿದೆ.

ಯೋಜನೆ ಪೂರ್ಣಗೊಂಡರೆ ಘಂಟೆಗೆ 12,000 ವಾಹನಗಳಿಗೆ ಹಾದು ಹೋಗಲು ಸಾಧ್ಯವಾಗಲಿದೆ ಎಂದು ಆರ್ಟಿಎ ಚೇರ್ಮನ್ ಮಾತರ್ ಅಲ್ ತಾಯರ್ ತಿಳಿಸಿದ್ದಾರೆ.

ಅಲ್ ಅಮರ್ದಿ- ಅಲ್ ಖವನೀಜ್ ಅಲ್ ಅವೀರ್- ರ‌ಅಸ್ ಅಲ್ ಖೋರ್ ರಸ್ತೆ ಗಳಿಗೂ ಸಮಾಂತರ ವಾಗಿರುವ ಕಾರಣ ಪ್ರದೇಶದ ಎಲ್ಲಾ ರಸ್ತೆಗಳ ಸಾಂದ್ರತೆಯನ್ನು ಈ ಯೋಜನೆಯು ಶೇ. ಮೂವತ್ತರಷ್ಟು ಕಡಿಮೆಗೊಳಿಸಲಿದೆ.

ಮಿರ್ದಿಫ್ ಸಿಟಿ ಸೆಂಟರ್ ನಿಂದ ಶೈಖ್ ಝಾಯಿದ್ ಬಿನ್ ಹಂದಾನ್ ಅಲ್ ನಹ್ಯಾನ್ ಸ್ಟ್ರೀಟ್ ವರೆಗಿನ ಆರುವರೆ ಕಿ.ಮೀ. ರಸ್ತೆಯ ಅಗಲೀಕರಣ ಮಾಡಲಾಗುವುದು. ಇಲ್ಲಿಂದ ಎಮಿರೇಟ್ಸ್ ರಸ್ತೆವರೆಗೆ ಎರಡೂ ಬದಿಗಳಲ್ಲಿ ಮೂರು ಪಥಗಳ ಹೊಸ ರಸ್ತೆ ನಿರ್ಮಾಣವಾಗಲಿದೆ.

ಟ್ರಿಪೊಳಿ- ಅಲ್ಜೀರಿಯಾ ಸ್ಟ್ರೀಟ್‌ನ ಇಂಟರ್ಚೇಂಜನ್ನೂ ನವೀಕರಿಸಲಾಗುವುದು. ಮೂರು ಪಥಗಳ ಸುರಂಗ ಇಲ್ಲಿ ನಿರ್ಮಾಣ ವಾಗುವುದರೊಂದಿಗೆ ಇಂಟರ್ಸೆಕ್ಷನಿನ ಕಾಯ್ದಿರಿಸುವಿಕೆಯು ಒಂದು ನಿಮಿಷವಾಗಿ ಕಡಿಮೆಯಾಗಲಿದೆ.

ಯೋಜನೆಯ ಭಾಗವಾಗಿ ಎಮಿರೇಟ್ಸ್ ರಸ್ತೆಯಲ್ಲಿ ಒಂಟೆಗಳಿಗೆ ರಸ್ತೆ ದಾಟುವುದಕ್ಕಾಗಿ ಎರಡು ಸುರಂಗ ಹಾದಿಯನ್ನು ನಿರ್ಮಿಸಲಾಗುವುದು. ಎಮಿರೇಟ್ಸ್ ರಸ್ತೆಗೆ ಶಾರ್ಜಾ ಕಡೆಯಿಂದ ಮೂರು ಪಥಗಳ ಸಂಕವು ನಿರಮಾಣಗೊಳ್ಳಲಿದ್ದು, ಈ ಮೂಲಕ ಶಾರ್ಜಾ ಕಡೆಗೆ ಯಾತ್ರೆಹೊರಡುವ ಯಾತ್ರಿಕರಿಗೆ ಸುಗಮವಾಗಲಿದೆ.

error: Content is protected !! Not allowed copy content from janadhvani.com