ನವದಹೆಲಿ: ಕಳೆದ ನಾಲ್ಕು ದಿನಗಳಿಂದಲೂ ಏರಿಕೆ ಕಾಣುತ್ತಲೇ ಸಾಗಿರುವ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಲೀಟರ್ಗೆ 9 ರಿಂದ 10 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆಯಲ್ಲೂ ಕೂಡ 8 ರಿಂದ 9 ಪೈಸೆ ಏರಿಕೆಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರು ಕೂಡ ಇಂಧನ ಬೆಲೆ ಏರಿಕೆಗೆ ಸಾಕ್ಷಿಯಾಗಿದ್ದು, ಲೀ. ಪೆಟ್ರೋಲ್ಗೆ 09 ಪೈಸೆ ಮತ್ತು ಲೀ. ಡೀಸೆಲ್ಗೆ 08 ಪೈಸೆ ಏರಿಕೆಯಾಗಿದೆ. ಏರಿಕೆ ಬಳಿಕ ಪೆಟ್ರೋಲ್ ಲೀ. 72.74 ರೂ.ಗಳಿಗೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಲೀ.ಗೆ 66.35 ರೂ.ಗಳಿಗೆ ಬಿಕರಿಯಾಗುತ್ತಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಲೀ. ಪೆಟ್ರೋಲ್ಗೆ 09 ಪೈಸೆ ಏರಿಕೆಯಾಗಿದ್ದು, 70.37ರೂ.ಗಳಷ್ಟಿದೆ. ಡೀಸೆಲ್ ಬೆಲೆಯಲ್ಲಿ 08 ಪೈಸೆ ಜಾಸ್ತಿಯಾಗಿದ್ದು, 64.19 ರೂ.ಗಳಿಗೆ ಮಾರಾಟವಾಗುತ್ತಿದೆ. ಇತ್ತ ಕೋಲ್ಕತದಲ್ಲೂ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಲೀ.ಗೆ 09 ಪೈಸೆ ಏರಿಕೆಯಾಗಿ 72.63 ರೂ.ಗೆ ದೊರಕುತ್ತಿದೆ. ಡೀಸೆಲ್ ಲೀ.ಗೆ 08 ಪೈಸೆ ಏರಿಕೆಯಾಗಿ 66.11 ರೂ.ಗಳಷ್ಟಿದೆ.
ಮುಂಬೈನಲ್ಲಿ 76.06 ರೂ.ಗೆ ಮಾರಾಟವಾಗುತ್ತಿರುವ ಪೆಟ್ರೋಲ್ 09 ಪೈಸೆ ಏರಿಕೆಯಾಗಿದೆ. ಡೀಸೆಲ್ ಲೀ.ಗೆ 08 ಪೈಸೆ ಏರಿಕೆಯಾಗಿ 66.11 ರೂ.ಗಳಷ್ಟಿದೆ. ಚೆನ್ನೈನಲ್ಲಿ 73.10 ರೂ.ಗಳಷ್ಟಿರುವ ಪೆಟ್ರೋಲ್ ಲೀ.ಗೆ 09 ಪೈಸೆ ಹೆಚ್ಚಾಗಿದೆ. ಇನ್ನು ಡೀಸೆಲ್ 08 ಪೈಸೆ ಜಾಸ್ತಿಯಾಗುವುದರೊಂದಿಗೆ 67.90 ರೂ.ಗಳಿಗೆ ಮಾರಾಟವಾಗುತ್ತಿದೆ.















ಇನ್ನಷ್ಟು ಸುದ್ದಿಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಗ್ಯಾಸ್ ಸಿಲಿಂಡರ್ ಒಂದಕ್ಕೆ 266₹ ಹೆಚ್ಚಳ
ಭಾರತದಿಂದ ಸೌದಿ ಅರೇಬಿಯಾಕ್ಕೆ ನೇರವಾಗಿ ಪ್ರಯಾಣಿಸಲು ಅವಕಾಶ
ಮುಸ್ಲಿಮರು ಸರಕಾರದ ಕೆಲಸ ಮಾಡಬಾರದೇ? ಹಿಂದೂ ರಾಷ್ಟ್ರವಾಯಿತೇ ಭಾರತ!
ಆನ್ಲೈನ್ ಪರೀಕ್ಷೆ: ನಮ್ಮ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ- ಉನ್ನತ ಶಿಕ್ಷಣ ಸಚಿವ
ಕೊರೋನಾ ಅಬ್ಬರ: ಲಾಕ್ ಡೌನ್ ಬಗ್ಗೆ ಸಿಎಂ ಮಹತ್ವದ ಸಭೆ
ರಮೇಶ್ ಜಾರಕಿಹೊಳಿ ರಾಸಲೀಲೆ- ಸಂತ್ರಸ್ತೆಯಿಂದ ದೂರು ದಾಖಲು
ಬೆಳಗ್ಗಿನ ಅಝಾನ್ ಕರೆಗೂ ಧ್ವನಿವರ್ಧಕಗಳನ್ನು ಬಳಸಬಹುದು- ವಖ್ಫ್ ಬೋರ್ಡ್