ಸರಿ ಸುಮಾರು ಎಪ್ಪತ್ತೈದಕ್ಕಿಂತಲೂ ಅಧಿಕ ಸ್ಪರ್ಧೆ ಗಳು. ಎಲ್ಲಾ ಸ್ಪರ್ಧೆ ಗಳಲ್ಲಿ ಹೆಸರು ನೊಂದಣಿ ಮಾಡಿದ ಘಟಾನುಘಟಿ ಮದ್ರಸಗಳು. ಇವುಗಳ ನಡುವೆ 21 ಮಕ್ಕಳನ್ನಿಟ್ಟು ರನ್ನರ್ ಪ್ರಶಸ್ತಿ ಪಡೆದ ಮೈಂದಗುರಿ ಮದ್ರಸ. ಇದು ಸಣ್ಣ ಸಾಧನೆಯಲ್ಲ. ಈ ಮಕ್ಕಳ ಸಾಮರ್ಥ್ಯ ಮೆಚ್ಚಲೇ ಬೇಕು. ಅಭಿನಂದನೆಗಳೊಂದಿಗೆ ಅವರನ್ನು ಗೌರವಿಸಲೇಬೇಕು. ಝೀರೋ ಝೋನ್ ಮತ್ತು ಹೈ ಝೋನ್ ನಲ್ಲಿ ಸ್ಪರ್ಧೆ ಮಾಡಿದ ಮಕ್ಕಳು ಕೇವಲ ಮೂರು.ಈ ಎರಡು ವಿಭಾಗದಲ್ಲಿ ಹಲವಾರು ಸ್ಪರ್ಧೆ ಗಳು ಮಕ್ಕಳ ಕೊರತೆಯಿಂದ ಕೈ ತಪ್ಪಿ ಹೋಗಿತ್ತು. ಆದರೂ ರನ್ನರ್ ಪ್ರಶಸ್ತಿ ಯತ್ತ ಮೈಂದಗುರಿ ಮದ್ರಸವನ್ನು ಕೊಂಡೋದದ್ದು ಮಿಡ್ ಝೋನ್ ಮತ್ತು ಗ್ರೌಂಡ್ ಝೋನ್ ವಿಭಾಗದ ಮಕ್ಕಳು.
ಸಾಧಾರಣ ಪ್ರತಿಭೋತ್ಸವದ ಮಾರ್ಕ್ ಲೀಸ್ಟ್ ನಲ್ಲಿ ಮೈಂದಗುರಿ ಮದ್ರಸವು ಕಡಿಮೆ ಮಾರ್ಕ್ ಪಡೆಯುವ ಸಾಲಿನಲ್ಲಿ ತೂಗಾಡುತ್ತಿತ್ತು. ನೂರು ಅಂಕಗಳನ್ನು ದಾಟಿದರೆ ಅದುವೇ ದೊಡ್ಡ ಸಾಹಸ ಎಂದು ಭಾವಿಸಲಾಗುತ್ತಿತ್ತು. ಇದನ್ನು ಬದಲಿಸಬೇಕೆಂಬ ಛಲ ಹೊತ್ತ ಮೈಂದಗುರಿ ಖತೀಬ್ ಉಸ್ತಾದ್ ಸಯ್ಯಿದ್ ಝೈನುಲ್ ಆಬಿದ್ ತಂಙಳ್ ಹಾಗೂ ಇರ್ಫಾನ್ ಬಾಹಸನಿ ರವರು ಸತತ ಪ್ರಯತ್ನ ಪಟ್ಟು ಮಕ್ಕಳನ್ನು ಸಜ್ಜುಗೊಳಿಸಿದ್ದರು. ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಪ್ರಯತ್ನ ನಮ್ಮದಾಗಲಿ ಎಂಬ ಗುರಿ ಇಟ್ಟರು. ಆ ಕಾರಣ ಫಲಿತಾಂಶ ಗಳು ಬದಲಾದವು. ಸಮರ್ಥ ಮದ್ರಸ ಗಳನ್ನು ಹಿಂದಿಕ್ಕಿ ರನ್ನರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. 21 ಮಕ್ಕಳು ರನ್ನರ್ ಪ್ರಶಸ್ತಿ ಹೊತ್ತು ಕೊಂಡು ಬರುವಾಗ ಆ ಮಕ್ಕಳಿಗೆ ಅಗತ್ಯ ತರಬೇತಿ ನೀಡಿ ಸಜ್ಜು ಗೊಳಿಸಿದ ತಂಙಳ್ ಉಸ್ತಾದ್ ಹಾಗೂ ಸಹ ಉಸ್ತಾದರಾದ ಇರ್ಫಾನ್ ಬಾಹಸನಿರವರ ಪರಿಶ್ರಮ ವ್ಯರ್ಥವಾಗಲಿಲ್ಲ. ನಿಜಕ್ಕೂ ಈ ಸಾಧನೆ ಅದ್ಭುತ ಮತ್ತು ಪ್ರಶಂಸನೀಯವಾಗಿದೆ. ಕಳೆದ ವರ್ಷ ಮಂಗಳಪೇಟೆ ಯಲ್ಲಿ ನಡೆದ ಬುರ್ದಾ ಸ್ಪರ್ಧೆ ಯಲ್ಲಿಯೂ ಮೈಂದಗುರಿ ಮದ್ರಸ ಮಕ್ಕಳು ರನ್ನರ್ ಪ್ರಶಸ್ತಿ ಪಡೆದದ್ದು ಇಲ್ಲಿ ಸ್ಮರಣೀಯ ವಾಗಿದೆ.
ಝುಹ್ರಿ, ಮಂಗಳಪೇಟೆ
















ಇನ್ನಷ್ಟು ಸುದ್ದಿಗಳು
ಕಾಟಿಪಳ್ಳ ನೂರಿಯ್ಯ ಮದ್ರಸ ಹ್ಯಾಟ್ರಿಕ್ ಚಾಂಪಿಯನ್
ವಿಟ್ಲ ಟೊಲೆಡೋ ಉಚಿತ ಕರಿಯರ್ ಗೈಡೆನ್ಸ್ ಶಿಬಿರ
ಕೆಸಿಎಫ್ (KCF) ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸೋಣ
ಅಲ್ ಮದೀನ ಸೌದಿ ರಾಷ್ಟ್ರೀಯ ಸಮಿತಿ ಮಹಾಸಭೆ
ಅಕ್ಟೋಬರ್ 6ರಂದು ಸಮಸ್ತ ಸೆಂಟಿನರಿ ಜಿಲ್ಲಾ ಅಸೆಂಬ್ಲಿ
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ