ಗಾಂಧಿನಗರ ಮದ್ರಸ ಪುಟಾಣಿ ಮಕ್ಕಳ ಅಕ್ಷರ ಅಭ್ಯಾಸಕ್ಕೆ ಚಾಲನೆ

ಸುಳ್ಯ: ತರ್ಭಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ಗಾಂಧಿನಗರ ಸುಳ್ಯ ಇದರ ಅಧೀನದ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸದಲ್ಲಿ ನೂತನವಾಗಿ ಪ್ರಸಕ್ತ ಸಾಲಿನ ಒಂದನೇ ತರಗತಿಯ ದಾಖಲಾತಿ ಪಡೆದ ಪುಟಾಣಿ ಮಕ್ಕಳ ಅಕ್ಷರ ಅಭ್ಯಾಸಕ್ಕೆ ಚಾಲನೆ ನೀಡಲಾಯಿತು.

ಅಸ್ಸಯ್ಯಿದ್ ಉಮರ್ ಜಿಫ್ರಿ ಅಲ್ ಹನೀಫಿ ತಂಙಳ್ ಕುಂಭಕ್ಕೋಡು ನೇತೃತ್ವ ವಹಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಮದ್ರಸ ಸಮಿತಿ ಚೇರ್ಮಾನ್ ಅಬ್ದುಲ್ ಹಮೀದ್ ಬೀಜಕೊಚ್ಚಿ ಅಧ್ಯಕ್ಷತೆ ವಹಿಸಿ, ಮುಖ್ಯೋಪಾಧ್ಯಯ ಇಬ್ರಾಹಿಂ ಸಖಾಫಿ ಪುಂಡೂರ್ ಉದ್ಘಾಟಿಸಿದರು.

ಈ ಸಂಧರ್ಭ ಜಮಾಅತ್ ಕಮಿಟಿ ಸದಸ್ಯ ಹಾಜಿ ಮುಹಮ್ಮದ್ ಕೆ.ಬಿ, ಅಧ್ಯಾಪಕರುಗಳಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಎಡಪ್ಪಲಂ,ಶೌಖತ್ತಲಿ ಅಲ್ ಅಮಾನಿ ವಯನಾಡ್,ಅಬ್ದುಲ್ ಹಮೀದ್ ಮುಸ್ಲಿಯಾರ್ ಕುಂಬ್ರ,ಹುಸೈನಾರ್ ಮದನಿ ಕುಂಜಿಲ,ಅಬ್ದುಲ್ ಖಾದರ್ ಮದನಿ ಅಜ್ಜಾವರ, ಅಬ್ದುರ್ರಹ್ಮಾನ್ ಸಅದಿ ಕರ್ನೂರ್,ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ ಉಪಸ್ಥಿತರಿದ್ದರು. ನಿಝಾರ್ ಸಖಾಫಿ ಮುಡೂರು ಸ್ವಾಗತಿಸಿ,ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!