ಏಕರೂಪದ ನಿಖಾಹ್ ನೊಂದಾವಣೆ- ದ.ಕ.ಜಿಲ್ಲಾ ವಕ್ಫ್ ನೇತೃತ್ವದ ಸಭೆಯಲ್ಲಿ ತೀರ್ಮಾನ

ಮಂಗಳೂರು: ದಕ್ಷಿಣ ಕನ್ನಡ ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಏಕರೂಪದ ನಿಖಾಹ್ ರಿಜಿಸ್ಟ್ರಿ ಯನ್ನು ಜಾರಿಗೆ ತರಲು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧ್ಯಕ್ಷರಾದ ಕಣಚೂರು ಮೋನು ಹಾಜಿ ಅವರ ನೇತೃತ್ವದಲ್ಲಿ ನಡೆದ ಉಲಮಾ ಉಮಾರಗಳ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸಮುದಾಯದ ಸಬಲೀಕರಣ ಹಾಗೂ ಹಲವಾರು ವಿಚಾರಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಸೈಯದ್ ಫಝಲ್ ಸಕೋಯಮ್ಮ ತಂಙಳ್ ಕೂರತ್, ಉಡುಪಿ ಚಿಕ್ಕಮಗಳೂರು ಹಾಸನ ಜಿಲ್ಲಾ ಸಂಯುಕ್ತ ಖಾಝಿ ತಾಜುಲ್ ಫುಖಹಾಅ್ ಪಿ.ಎಂ.ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಪ್ರಾಂಶುಪಾಲರಾದ ಬಂಬ್ರಾಣ ಅಬ್ದುಲ್ ಖಾದರ್ ಮುಸ್ಲಿಯಾರ್, ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನಿರ್ದೇಶಕರಾದ NKM ಶಾಫಿ ಸಅದಿ ಬೆಂಗಳೂರು,ಹುಸೈನ್ ದಾರಿಮಿ ರೆಂಜಲಾಡಿ,ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ ನೇತಾರ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ, ಕರ್ನಾಟಕ ರಾಜ್ಯ ಹಜ್ಜ್ ಕಮಿಟಿಯ ಸದಸ್ಯರಾದ ಜನಾಬ್ KM ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಮಂಗಳೂರು ಇಸ್ಲಾಮಿಕ್ ಕಲ್ಚರಲ್ ಸೆಂಟರ್ ನಿರ್ದೇಶಕರಾದ ಮಮ್ತಾಜ್ ಅಲಿ ಕೃಷ್ಣಾಪುರ,ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಮೊದಲಾದವರು ಭಾಗವಹಿಸಿದ್ದರು.

ವರದಿ: ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

2 thoughts on “ಏಕರೂಪದ ನಿಖಾಹ್ ನೊಂದಾವಣೆ- ದ.ಕ.ಜಿಲ್ಲಾ ವಕ್ಫ್ ನೇತೃತ್ವದ ಸಭೆಯಲ್ಲಿ ತೀರ್ಮಾನ

  1. ಈ ಸಭೆಯಲ್ಲಿ ಎಲ್ಲಾ ಮುಸ್ಲಿಂ ಮುಖಂಡರ ಸಾನಿಧ್ಯ ಕಂಡುಬಂದ ಹಾಗೆ ಇಲ್ಲವಲ್ಲ. ಇದೊಂದು
    ಒಳ್ಳೆಯ ಕಾರ್ಯವೇ ಸರಿ ಆದರೆ ಈ ವಿಚಾರದಲ್ಲಿ ಎಲ್ಲ ವಿಭಾಗದ ಮುಸ್ಲಿಂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಮೂಲಕ ಸಾಮೂಹಿಕ ಏಕತೆಯನ್ನೂ ಪ್ರಕಟಿಸುವುದು ಕಾಲದ ಬೇಡಿಕೆಯೂ ಕೂಡ!

    1. ಈ ತೀರ್ಮಾನ ಶ್ಲಾಘನೀಯ ಇಂತಹ ತೀರ್ಮಾನಗಳು ಮುಂದಿನ ದಿನಗಳಲ್ಲಿ ಒಕ್ಕೊರಳದಿಂದ ಮೂಡಿ ಬರಲ

Leave a Reply

Your email address will not be published. Required fields are marked *

error: Content is protected !!