ವಡೋದರ: ಗುಜರಾತ್ನ ವಡೋದರ ಸಮೀಪದ ಫರ್ತಿಕ್ವೈ ಎಂಬಲ್ಲಿ ಹೋಟೆಲ್ವೊಂದರ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ಏಳು ಮಂದಿ ವಿಷಾನಿಲ ಸೇವನೆಯಿಂದ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಡೆದಿದೆ.
ಮೃತರ ಪೈಕಿ ಮೂವರು ಹೋಟೆಲ್ ಸಿಬ್ಬಂದಿಯಾಗಿದ್ದು, ಇನ್ನುಳಿದ ನಾಲ್ವರು ಪೌರಕಾರ್ಮಿಕರು ಎನ್ನಲಾಗಿದೆ. ನಿರ್ಲಕ್ಷ್ಯದ ಆರೋಪದ ಮೇಲೆ ಹೋಟೆಲ್ ಮಾಲೀಕನ ಮೇಲೆ ಪ್ರಕರಣ ದಾಖಲಿಸಿಲಾಗಿದೆ. ಮೃತ ಹೋಟೆಲ್ ಸಿಬ್ಬಂದಿಯನ್ನು ಜೈ ವಾಸವ (24), ವಿಜಯ್ ಚೌಹಾಣ್ (22), ಸಹದೇವ ವಾಸವ (22) ಎಂದು ಗುರುತಿಸಲಾಗಿದೆ. ಮೃತ ಪೌರ ಕಾರ್ಮಿಕರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಹೊಟೇಲ್ನ ಟ್ಯಾಂಕ್ ಸ್ವಚ್ಛಗೊಳಿಸಲೆಂದು ಮೊದಲಿಗೆ ಸಿಬ್ಬಂದಿಯೊಬ್ಬರು ಟ್ಯಾಂಕ್ಗೆ ಇಳಿದಿದ್ದಾರೆ. ಕೆಲ ನಿಮಿಷಗಳ ನಂತರ ಅವರು ಪ್ರಜ್ಞಾ ಹೀನರಾಗಿದ್ದಾರೆ. ಅವರನ್ನು ಮೇಲೆತ್ತಲೆಂದು ಮತ್ತೊಬ್ಬರು ಇಳಿದಿದ್ದಾರೆ. ಆವರಿಗೂ ಅದೇ ಪರಿಸ್ಥಿತಿಯುಂಟಾಗಿದೆ. ಹೀಗೆ ಮೂವರೂ ಸಾವಿಗೀಡಾಗಿದ್ದರು. ವಿಷಾನಿಲದ ಪರಿಣಾಮವಾಗಿ ಹೋಟೆಲ್ ಸಿಬ್ಬಂದಿ ಮೃತಪಟ್ಟಿದ್ದರು. ಇದಾದ ನಂತರ ಟಾಂಕ್ ಇಳಿದ ನಾಲ್ವರು ಕಾರ್ಮಿಕರೂ ವಿಷಾನಿಲ ಸೇವನೆಯಿಂದ ಮೃತಪಟ್ಟಿದ್ದಾರೆ.
ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು ದೇಹಗಳನ್ನು ಹೊರತೆಗೆದಿದ್ದಾರೆ.















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ