ದೋಹಾ: ಸೌಹಾರ್ದ ಸಂದರ್ಶನ ಮತ್ತು ವಿನೋದ ಸಂಚಾರಕ್ಕಾಗಿ ಆಗಮಿಸುವವರನ್ನು ಖತರ್ ಬರಮಾಡಿಕೊಂಡಿದೆ. ಬೇಸಿಗೆ ಕಾಲದಲ್ಲಿ ಉಲ್ಲಾಸ ಮತ್ತು ಶಾಪಿಂಗ್ ನಡೆಸಲು, ಹಬ್ಬ ಹರಿದಿನಗಳಲ್ಲಿ ಸಂದರ್ಶನ ನಡೆಸಲು ಇಚ್ಛಿಸುವವರಿಗೆ ಸಚಿವಾಲಯವು ಇ- ನೋಟಿಫಿಕೇಷನ್ ವ್ಯವಸ್ಥೆಯನ್ನು ಸಜ್ಜುಗೊಳಿಸಿದೆ.
ಆಗಸ್ಟ್ 16ರ ವರೆಗೆ ಉಲ್ಲಾಸ ಯಾತ್ರಿಕರು, ಅನಿವಾಸಿಗಳ ಬಂಧುಗಳು, ಮಿತ್ರರಿಗೆ ಖತರ್ ಸಂದರ್ಶನಗೈಯ್ಯಲು ಹಾದಿ ಸುಗಮಗೊಳಿಸುವುದು ಇ-ನೋಟಿಫಿಕೇಷನ್ನ ಉದ್ದೇಶವಾಗಿದ್ದು, ಸಂಚಾರಿಗಳೊಂದಿಗೆ ಖತರ್ಗೆ ಇರುವ ತೆರೆದ ಮನಸ್ಸು ಮತ್ತು ಸಂದರ್ಶಕರ ಅನುಭವಗಳನ್ನು ಉತ್ತಮಗೊಳಿಸಲು ‘ಸಮ್ಮರ್ ಇನ್ ಖತರ್’ ಮೂಲಕ ಸಾಧ್ಯವಿದೆ ಎಂದು ಅಲ್ಲಿನ ಗೃಹಸಚಿವಾಲಯ ನಿರೀಕ್ಷಿಸಿದೆ.
ರಾಷ್ಟ್ರೀಯ ಟೂರೀಸಂ ಕೌನ್ಸಿಲ್ ನ ಸಹಭಾಗಿತ್ವದೊಂದಿಗೆ ಈ ಯೋಜನೆ ರೂಪೀಕರಿಸಲಾಗಿದ್ದು, ಈ ಮೂಲಕ ಎಲ್ಲಾ ರಾಷ್ಟ್ರಗಳಿಂದ ಬರಲಿಚ್ಛಿಸುವವರಿಗೂ ಉಚಿತ ಆನ್ ಅರೈವಲ್ ವಿಸಾ ಲಭಿಸಲಿದೆ. ಅಗಸ್ಟ್ 16ರವರೆಗೆ ಆನ್ ಅರೈವಲ್ ಸೌಕರ್ಯಕ್ಕಾಗಿ http://qatarvisaservices.com ಎಂಬ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, 24 ಗಂಟೆ ಒಳಗಾಗಿ ಸಮ್ಮತಿ ಪತ್ರದ ಕುರಿತು ಮಾಹಿತಿ ಲಭಿಸಲಿದೆ.
ಈ ಹಿಂದೆ ಭಾರತ ಸಹಿತ 83 ರಾಷ್ಟ್ರಗಳಿಗೆ ಉಚಿತ ಆನ್ ಅರೈವಲ್ ವಿಸಾ ಸೌಕರ್ಯಗಳನ್ನು ಏರ್ಪಡಿಸಲಾಗಿತ್ತು. ಈ ಮೂಲಕ ಇತರ ರಾಷ್ಟ್ರಗಳಿಗೂ ವಿಸ್ತರಿಸಲಾಗಿದೆ. ಅನಿವಾಸಿಗಳ ಬಂಧುಗಳು, ಗೆಳೆಯರು ಆಗಿದ್ದಲ್ಲಿ ಮರಳುವ ಟಿಕೆಟ್, ಕಾಲಾವಧಿ ಇರುವ ಇಖಾಮಾ, ಬಂಧುತ್ವದ ಬಗ್ಗೆ ಮಾಹಿತಿ ಹೊಂದಿರಬೇಕು. ಈ ಹಿಂದೆ ಖತರ್ನಲ್ಲಿ ಅನಿವಾಸಿ ಜೀವನ ನಡೆಸಿದವರಿಗೂ ಈ ಸೌಕರ್ಯ ಲಭಿಸಲಿದೆ. ವಿನೋದ ಸಂಚಾರಕ್ಕೆ ಖತರ್ ದೇಶವನ್ನು ಆಯ್ಕೆ ಮಾಡುವವರಿಗೆ ಈ ಯೋಜನೆ ಉಪಯುಕ್ತವಾಗಲಿದೆ ಎಂಬುದು ಅಧಿಕಾರಿಗಳ ನಿರೀಕ್ಷೆಯಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ