ಕೊಡಂಗಾಯಿ ಅಲ್-ಅಮೀನ್ ಯೂತ್ ಫೆಡರೇಷನ್ ವತಿಯಂದ ಇಫ್ತಾರ್ ಮೀಟ್

ವಿಟ್ಲ: ಸಮಾಜದ ಸರ್ವ ಆಗುಹೋಗುಗಳಿಗೆ ಸದಾ ಸ್ಪಂದಿಸುತ್ತಿರುವ ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಯುವಕರ ಬಳಗ. ಅಲ್-ಅಮೀನ್ ಯೂತ್ ಫೆಡರೇಷನ್ (ರಿ) AYF ಕೊಡಂಗಾಯಿ ಇದರ ಪ್ರಾಯೋಜಕತ್ವದಲ್ಲಿ ಕೊಡಂಗಾಯಿ ಮುಹ್ಯುದ್ದೀನ್ ಜುಮಾ ಮಸೀದಿಯ ಪರಿಸರದಲ್ಲಿ ಸಮಿತಿ ಅಧ್ಯಕ್ಷರಾದ ಎಂ ಕೆ ಅಬ್ದುರ್ರಝಾಕ್ ಕೊಡಂಗಾಯಿ ಅವರ ನೇತೃತ್ವದಲ್ಲಿ ಸರಳ ಇಫ್ತಾರ್ ಕೂಟ ನಡೆಯಿತು.

ಸಮಿತಿ ನಾಯಕರು ಹಾಗೂ ಸದಸ್ಯರ ಸಹಿತ ಊರಿನ ಅನೇಕ ಮಂದಿ ಭಾಗವಹಿಸಿದ ಇಫ್ತಾರ್ ಸಂಗಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ವರದಿ: ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

Leave a Reply

Your email address will not be published. Required fields are marked *

error: Content is protected !!