janadhvani

Kannada Online News Paper

ಎಸ್ಸೆಸ್ಸೆಫ್ ಜಾಲ್ಸೂರು-ಅಡ್ಕಾರು ಶಾಖಾ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಣೆ

ಈ ವರದಿಯ ಧ್ವನಿಯನ್ನು ಆಲಿಸಿ


ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ಜಾಲ್ಸೂರು-ಅಡ್ಕಾರು ಶಾಖಾ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಜೂನ್ 2ರಂದು ಆದಿತ್ಯವಾರ ಅಸರ್ ನಮಾಝಿನ ಬಳಿಕ ಜರಗಿತು.

ಮುಹಿಯ್ಯದ್ದೀನ್ ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಫೈಝಿ ಕುಂಬಡಾಜೆ ಕಾರ್ಯಕ್ರಮಕ್ಕೆ ದುಆ ನೆರವೇರಿಸಿದರು. ಜುಮಾ ಮಸೀದಿ ಅಧ್ಯಕ್ಷರಾದ ಜಿ.ಎಂ ಹಸನ್ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಜಾಲ್ಸೂರು ಜಮಾಅತಿಗೆ ಒಳಪಟ್ಟ ಆಯ್ದ 10 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಈ ಒಂದು ಉತ್ತಮ ಪದ್ಧತಿಯನ್ನು ಮನಗಂಡು ವಿದ್ಯಾರ್ಥಿಗಳಿಗೆ ಬೇಕಾದ ಬ್ಯಾಗ್ ಹಾಗೂ ಧನ ಸಹಾಯ ಮಾಡಿ ನಮ್ಮೊಂದಿಗೆ ಸಹಕರಿಸಿದ ನಮ್ಮ ಎಲ್ಲಾ ಕಾರ್ಯಕರ್ತರಿಗೂ, ಹಿತೈಷಿಗಳಿಗೂ ಎಸ್ಸೆಸ್ಸೆಫ್ ಜಾಲ್ಸೂರು-ಅಡ್ಕಾರು ಶಾಖೆ ಅಭಾರಿಯಾಗಿದ್ದೇವೆ.
ಅಲ್ಲಾಹನು ನಮಗೆಲ್ಲರಿಗೂ ಖೈರ್ ಬರ್ಕತ್ ನೀಡಿ ಅನುಗ್ರಹಿಸಲಿ ಆಮೀನ್.

SSF ಜಾಲ್ಸೂರು-ಅಡ್ಕಾರು ಶಾಖೆ

error: Content is protected !! Not allowed copy content from janadhvani.com