janadhvani

Kannada Online News Paper

ಕ್ಯಾಂಪಸ್ ಕೊಲೊಕಿಯಮ್ ಹಾಗೂ ಓರ್ಬಿಟ್ ಕ್ಯಾಂಪ್ ಯಶಸ್ವಿ

ಈ ವರದಿಯ ಧ್ವನಿಯನ್ನು ಆಲಿಸಿ


ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ನ ವತಿಯಿಂದ ಕ್ಯಾಂಪಸ್ ಕೊಲೊಕಿಯಮ್ ಹಾಗೂ ಓರ್ಬಿಟ್ ಕಾರ್ಯಾಗಾರ ಕಾರ್ಯಕ್ರಮ ಎಪ್ರಿಲ್ 27 ರಂದು ಮರ್ಕಝುಲ್ ಹಿದಾಯ ಕ್ಯಾಂಪಸ್ ಕೊಟೇಕಾರ್ ನಲ್ಲಿ ಮಧ್ಯಾಹ್ನ 2ರಿಂದ ಸಂಜೆ 5ರ ತನಕ ಡಿವಿಶನ್ ಅಧ್ಯಕ್ಷರಾದ ಖುಬೈಬ್ ತಂಙಳ್ ಉಳ್ಳಾಲರ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಉದ್ಘಾಟಿಸಿದರು.ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಕಾರ್ಯದರ್ಶಿ ಮುಸ್ತಫಾ ಮಾಸ್ಟರ್ ಹಾಗೂ ನಾಸಿರ್ ಮಾಸ್ಟರ್ ಬಜ್ಪೆ ಯವರು ತರಗತಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಡಿವಿಶನ್ ವಿಸ್ಡಂ ಕಾರ್ಯದರ್ಶಿ ಶಿಹಾಬುದ್ದೀನ್ ಹಾಗೂ ರೀಡ್ ಪ್ಲಸ್ ಕನ್ವಿನರ್ ಮೊಹಮ್ಮದ್ ಅಲ್ತಾಫ್ ಕಲ್ಪಾದೆ, ಮಾಧ್ಯಮ ಕಾರ್ಯದರ್ಶಿ ಮೊಹಮ್ಮದ್ ಆಶಿಕ್ ಉಪಸ್ಥಿತರಿದ್ದರು.

ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ನಾಸಿರ್ ಮಾಸ್ಟರ್ ಅಜ್ಜಿನಡ್ಕ ಸ್ವಾಗತಿಸಿದರು.
ಡಿವಿಶನ್ ಪ್ರ ಕಾರ್ಯದರ್ಶಿ ಹಮೀದ್ ತಲಪಾಡಿ ವಂದಿಸಿದರು.

Ⓜedia Wi🆖
SSF ULLALA DIVISION

error: Content is protected !! Not allowed copy content from janadhvani.com