janadhvani

Kannada Online News Paper

ಮುಡಿಪು ಡಿವಿಶನ್ : ಮುತ‌ಅಲ್ಲಿಂ ಸಂಗಮ ಹಾಗೂ ದ‌ಅ್‌ವಾ ಕಾನ್ಫರೆನ್ಸ್

ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ವತಿಯಿಂದ ಮುತಅಲ್ಲಿಂ ಸಂಗಮ ಹಾಗೂ ದ‌ಅ‌್‌ವಾ ಕಾನ್ಫರೆನ್ಸ್ ಅಲ್ ಮದೀನ ಮಂಜನಾಡಿಯಲ್ಲಿ ಮುಡಿಪು ಡಿವಿಶನ್ ಅಧ್ಯಕ್ಷರಾದ ತೌಸೀಫ್ ಸಅದಿ ಹರೇಕಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅಲ್‌-ಮದೀನ ಮುದರ್ರಿಸ್ ಅಬ್ದುಲ್ ಸಲಾಂ ಅಹ್ಸನಿಯವರು ಉದ್ಘಾಟಿಸಿದರು.
ಮಲಪ್ಪುರಂ,ಒದುಕ್ಕುಂಙಳ್ ಅಹ್ಸನಿ ಕಾಲೇಜ್ ಪ್ರೊಫೆಸರ್ ಅಬ್ದುಲ್ಲ ಅಹ್ಸನಿ ಉಸ್ತಾದ್ ಹಾಗೂ ದ. ಕ ಜಿಲ್ಲಾ ದ‌ಅ್‌ವಾ ಕನ್ವೀನರ್ ಮುನೀರ್ ಸಖಾಫಿ ಉಳ್ಳಾಲ ತರಗತಿ ನಡೆಸಿದರು. ಅಬ್ದುರ್ರಹ್ಮಾನ್ ಅಹ್ಸನಿ, ಬುಖಾರಿ ಉಸ್ತಾದ್ ಸಹಿತ ಇನ್ನಿತರ ನಾಯಕರು ಉಪಸ್ಥಿತರಿದ್ದರು.

ಮುಡಿಪು ಡಿವಿಶನ್ ದಅ್ ವ ಕನ್ವೀನರ್ ಇಬ್ರಾಹಿಂ ಅಹ್ಸನಿ ಸ್ವಾಗತಿಸಿ ಡಿವಿಶನ್ ಪ್ರಧಾನ ಕಾಯ೯ದಶಿ೯ ಇಲ್ಯಾಸ್ ಪೊಟ್ಟೋಳಿಕೆ ವಂದಿಸಿದರು

error: Content is protected !! Not allowed copy content from janadhvani.com