janadhvani

Kannada Online News Paper

ಕೆಸಿಎಫ್ ಹಾಯಿಲ್ ಸೆಕ್ಟರ್’ಗೆ ನೂತನ ಸಾರಥ್ಯ

ಕನಾ೯ಟಕ ಕಲ್ಚರಲ್ ಫೌ೦ಡೇಶನ್ ಅಲ್ ಖಸೀಂ ಝೋನ್ ವ್ಯಾಪ್ತಿಯ ಹಾಯಿಲ್ ಸೆಕ್ಟರ್ ಸಮಿತಿ ವಾರ್ಷಿಕ ಮಹಾಸಭೆ ಇತ್ತೀಚೆಗೆ ಹಾಯಿಲ್ ಸಿಟಿಯಲ್ಲಿರುವ ಅಬ್ದುಲ್ ಜಬ್ಬಾರ್ರ ನಿವಾಸದಲ್ಲಿ ಅಮ್ಮುಂಜೆ ಮುಹಿಯುದ್ದೀನ್ ಸಅದಿ’ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿರಿಯ ಮುಂದಾಳು ಸುಲೈಮಾನ್ ಆತ್ರಾಡಿ ಸಭೆಯನ್ನು ಉದ್ಘಾಟಿಸಿದರು. ಅಬ್ದುಲ್ ಕರೀಂರವರು ಗತ ವರ್ಷದ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಸೌದಿ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಅಧ್ಯಕ್ಷರಾದ:- ಸಿದ್ದೀಕ್ ಸಖಾಫಿ ಪೆರುವಾಯಿ ಮಾತನಾಡುತ್ತಾ
ಪೂವಿ೯ಕ ಮಹಾನುಭಾವರುಗಳಾದ ಉಲಮಾಗಳ ತತ್ವಾದಶ೯ದಲ್ಲಿ ಬೆಳೆದು ಬಂದ ಈ ಸಂಘಟನೆಯ ಸದಸ್ಯರುಗಳು ಇಸ್ಲಾಮಿನ ಆಶಯಾದರ್ಶದಲ್ಲಿ ಜೀವಿಸಬೇಕೆಂದು ಕರೆನೀಡಿ ಕೆ.ಸಿ.ಎಫ್ ಗಾಗಿ ಹಗಲಿರುಳೆನ್ನದೆ ಪರಿಶ್ರಮಿಸಿದ ಎಲ್ಲಾ ಸದಸ್ಯರನ್ನು ನೆನಪಿಸಿ ಇಖ್ಲಾಸ್’ನೊಂದಿಗೆ ನಾವೆಲ್ಲರೂ ಮುನ್ನಡೆಯಬೇಕು ಹಾಗೂ ವಹಿಸಿಕೊಂಡ ಯಾವುದೇ ಹುದ್ದೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೆಂದು ಕರೆ ನೀಡಿದರು.

ರೀ ಆರ್ಗನೈಝಿಂಗ್ ಆಫೀಸರ್’ಆಗಿ ಆಗಮಿಸಿದ ರಾಷ್ಟ್ರೀಯ ಸಮಿತಿ ಸದಸ್ಯ ಸ್ವಾಲಿಹ್ ಬೆಳ್ಳಾರೆ
ಯವರು ಹಳೆಯ ಸಮಿತಿಯನ್ನು ಬರ್ಖಾಸ್ತು ಮಾಡಿ 2019- 21 ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಅಧ್ಯಕ್ಷರಾಗಿ ಇಲ್ಯಾಸ್ ಲತ್ವೀಫಿ ಉಜಿರೆ, ಪ್ರದಾನ ಕಾರ್ಯದರ್ಶಿ ಅಬ್ದುಲ್ ಕರೀಂ ಹರೇಕಳ, ಕೋಶಾಧಿಕಾರಿಯಾಗಿ ಮುನೀರ್ ಹರೇಕಳ ಸಂಘಟನಾ ಇಲಾಖೆ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್, ಕಾರ್ಯದರ್ಶಿ ಅಬ್ದುಲ್ ರಝಾಕ್ ಮೂಡಿಗೆರೆ, ಶಿಕ್ಷಣ ಇಲಾಖೆ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಕುಕ್ಕಾಜೆ, ಕಾರ್ಯದರ್ಶಿ ಶಿಹಾಬುದ್ದೀನ್ ಅಮ್ಮುಂಜೆ, ಸಾಂತ್ವನ ಇಲಾಖೆ ಅಧ್ಯಕ್ಷರಾಗಿ ಹನೀಫ್ ಕಿಫ ಬಿಸಿರೋಡ್, ಕಾರ್ಯದರ್ಶಿ ಅಶ್ಫಾಕ್ ಅಮ್ಮುಂಜೆ, ಪ್ರಕಾಶನ ಇಲಾಖೆ ಅಧ್ಯಕ್ಷರಾಗಿ ಅಬ್ಬಾಸ್ ಕೂರ್ನಡ್ಕ, ಕಾರ್ಯದರ್ಶಿ ಇಲ್ಯಾಸ್ ಅಮ್ಮೆಂಬಳ, ಹಾಗೂ ಕಾರ್ಯಕಾರಿ ಸದಸ್ಯರಾಗಿ ಮುಹಿಯುದ್ದೀನ್ ಸಅದಿ, ಮುಹಮ್ಮದ್ ಸಅದಿ, ಮುಖ್ತಾರ್ ಸಖಾಫಿ, ಶಾಫಿ, ಮುಸ್ತಫಾ, ಅಬ್ದುಲ್ ಖಾದರ್, ಸಿದ್ದೀಕ್, ಅಬ್ದುಲ್ ರಹ್ಮಾನ್ ಎಂಎಸ್, ಸುಲೈಮಾನ್ ಆತ್ರಾಡಿ, ಮತ್ತು ಆರು ಮಂದಿಯನ್ನು ಝೋನ್ ಕೌನ್ಸಿಲರ್’ಗಳಾಗಿ ಆಯ್ಕೆ ಮಾಡಲಾಯಿತು.

ಪ್ರಾರಂಭದಲ್ಲಿ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಸ್ವಾಗತಿಸಿ ಕೊನೆಯಲ್ಲಿ ನೂತನ ಕಾರ್ಯದರ್ಶಿ ಅಬ್ದುಲ್ ಕರೀಂ ವಂದಿಸಿದರು.

error: Content is protected !! Not allowed copy content from janadhvani.com