janadhvani

Kannada Online News Paper

ಉಳ್ಳಾಲ: ಏ.27 ರಂದು ಕ್ಯಾಂಪಸ್ ಕೊಲೊಕಿಯಮ್ ಮತ್ತು ಒರ್ಬಿಟ್ ಕೆರಿಯರ್ ಗೈಡೆನ್ಸ್ ಕಾರ್ಯಾಗಾರ

ಉಳ್ಳಾಲ:SSF ಉಳ್ಳಾಲ ಡಿವಿಶನ್ ಕ್ಯಾಂಪಸ್ ಹಾಗೂ ವಿಸ್ಡಂ ವತಿಯಿಂದ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಕೊಲೊಕಿಯಮ್ ಹಾಗೂ SSLC 2nd PUC ವಿದ್ಯಾರ್ಥಿಗಳಿಗೆ ಓರ್ಬಿಟ್ ಕೆರಿಯರ್ ಗೈಡೆನ್ಸ್ ಕಾರ್ಯಗಾರವು ಎ 27 ರಂದು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಮರ್ಕಝುಲ್ ಹಿದಾಯ ಕ್ಯಾಂಪಸ್ ಕೊಟೇಕಾರ್ ನಲ್ಲಿ ನಡೆಯಲಿದೆ.

SSF ದ ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮೊಹಮ್ಮದ್ ಅಲಿ ತುರ್ಕಳಿಕೆ ಉದ್ಘಾಟಿಸಲಿರುವರು.

SSF ಉಳ್ಳಾಲ ಡಿವಿಶನ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಙಳ್ ಅಧ್ಯಕ್ಷತೆ ವಹಿಸಲಿರುವರು.

ನಾಸಿರ್ ಮಾಸ್ಟರ್ ಬಜ್ಪೆ ಹಾಗೂ ಮುಸ್ತಫಾ ಮಾಸ್ಟರ್ ರವರು ತರಗತಿ ನಡೆಸಲಿದ್ದಾರೆ.

SSF ದ ಕ ಜಿಲ್ಲಾ ಉಪಾಧ್ಯಕ್ಷರು ಮನೀರ್ ಅಹ್ಮದ್ ಕಾಮಿಲ್ ಸಖಾಫಿ , SSF ಉಳ್ಳಾಲ ಡಿವಿಶನ್ ಕ್ಯಾಂಪಸ್ ಚಯರ್ಮೆನ್ ಅಬ್ದುಲ್ ರಝ್ಝಾಕ್ ಸಅದಿ, ಡಿವಿಶನ್ ಕಾರ್ಯದರ್ಶಿ ಹಮೀದ್ ತಲಪಾಡಿ, ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ನಾಸಿರ್ ಮಾಸ್ಟರ್ ಅಜಿನಡ್ಕ ಹಾಗೂ ಇನ್ನಿತರ ನಾಯಕರು ಬಾಗವಹಿಸಲಿದ್ದಾರೆ.
ಎಂದು ಮಾಧ್ಯಮ ಕಾರ್ಯದರ್ಶಿ ಮೊಹಮ್ಮದ್ ಆಶಿಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com