janadhvani

Kannada Online News Paper

ಮೋದಿ ಅಲೆ ಇಲ್ಲ: ವಾರಣಾಸಿಗೇ ಬಾರದ ‘ಅಚ್ಛೆ ದಿನ್’ ಭಾರತಕ್ಕೆ ಬಂದೀತೆ?-ಡಿ.ಕೆ.ಶಿ

ರಾಮನಗರ: ‘ಈ‌ ಬಾರಿ ದೇಶದಲ್ಲಿ‌ ಎಲ್ಲೂ‌ ಮೋದಿ ಅಲೆ ಇಲ್ಲ. ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದವರನ್ನು ಜನ ನಂಬುವುದಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿಯಲ್ಲಿ ಕುಟುಂಬದೊಂದಿಗೆ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.‘ಅಚ್ಛೆ ದಿನ್ ಎಂದಿದ್ದರು. ಒಳ್ಳೆಯ ದಿನ ಬರಲಿಲ್ಲ. ಸ್ವಚ್ಛ ಭಾರತ್ ಎನ್ನುತ್ತಾರೆ. ವಾರಾಣಸಿಯಲ್ಲಿಯೇ ಸ್ವಚ್ಛತೆ ಇಲ್ಲ’
ಇನ್ನೂ ವಾರಣಾಸಿಗೆ ಬಾರದ ಅಚ್ಚೆದಿನ ಭಾರತಕ್ಕೆ ಬಂದೀತೆ? ಎಂದು ಪ್ರಶ್ನೆ ಮಾಡುವ ಮೂಲಕ ಸಚಿವ ಡಿ.ಕೆ ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಅಪಹಾಸ್ಯ ಮಾಡಿದ್ದಾರೆ.

“ನರೇಂದ್ರ ಮೋದಿ ಸ್ವಚ್ಚ ಭಾರತದ ಅಡಿಯಲ್ಲಿ ವಾರಣಾಸಿಯ ಗಂಗೆಯನ್ನು ಶುದ್ಧ ಮಾಡುವ ಭರವಸೆ ನೀಡಿದ್ದರು. ಆದರೆ, 5 ವರ್ಷದ ಆಡಳಿತ ಅವಧಿ ಮುಗಿದರು ವಾರಣಾಸಿಯ ಗಂಗೆ ಮಾತ್ರ ಶುದ್ಧವಾಗಿಲ್ಲ. ಇನ್ನೂ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡುವ ಭರವಸೆ ನೀಡಿದ್ದರು. ಆದರೆ, ಉದ್ಯೋಗ ಎಲ್ಲಿ ಸೃಷ್ಟಿಯಾಗಿದೆ? ಜನ ಇನ್ನು ಎಷ್ಟು ದಿನ ಅಂತ ಸುಳ್ಳು ಹೇಳುವವರನ್ನು ನಂಬುತ್ತಾರೆ?” ಎಂದು ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹಾಗೂ ಮೈತ್ರಿ ಸರ್ಕಾರದ ಕುರಿತು ಮಾತನಾಡಿದ ಅವರು, “ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಮತ್ತೊಮ್ಮೆ ಗೆಲುವು ಸಾಧಿಸಲಿದ್ದಾರೆ. ಜನರ ಆಶೀರ್ವಾದ ಅವರ ಮೇಲಿದೆ. ಅಲ್ಲದೆ ಈ ಬಾರಿ ಮೈತ್ರಿ ಪಕ್ಷಗಳು ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಈ ಬಾರಿ ರಾಜ್ಯದ ಇಪ್ಪತ್ತಕ್ಕೂ ಹೆಚ್ಚು  ಕ್ಷೇತ್ರಗಳಲ್ಲಿ ಮೈತ್ರಿ‌ ಅಭ್ಯರ್ಥಿಗಳು ಗೆಲ್ಲುತ್ತಾರೆ. ಬೆ.ಗ್ರಾ. ಕ್ಷೇತ್ರದಲ್ಲಿ‌ ಜನರು ಸುರೇಶ್‌ರನ್ನು ಮತ್ತೊಮ್ಮೆ ಆಶೀರ್ವದಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

error: Content is protected !! Not allowed copy content from janadhvani.com