janadhvani

Kannada Online News Paper

ಸೌದಿ: ಖಾಸಗಿ ವಲಯದ ಕೆಲಸ ಸ್ಥಳಗಳಲ್ಲಿ ಧೂಮಪಾನ ನಿಷೇಧ

ರಿಯಾದ್:ದೇಶದ ಖಾಸಗಿ ಸಂಸ್ಥೆಗಳ ಅಡಿಯಲ್ಲಿನ ಕೆಲಸ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಿ ಕಾರ್ಮಿಕ, ಸಾಮಾಜಿಕ ಕಲ್ಯಾಣ ಸಚಿವಾಲಯ ಆದೇಶ ಹೊರಡಿಸಿದ್ದು, ಆ ಹಿನ್ನೆಲೆಯಲ್ಲಿ ಸಂಬಂಧಿಸಿದ ಎಲ್ಲಾ ಸಂಸ್ಥೆಗಳಲ್ಲೂ ಧೂಮಪಾನ ನಿಷೇಧಿಸಲಾದ ನಾಮ ಫಲಕವನ್ನು ಸ್ಥಾಪಿಸುವಂತೆ ಕೋರಲಾಗಿದೆ.

ಕಾರ್ಮಿಕರು, ಸಂದರ್ಶಕರ ಸುರಕ್ಷೆ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ವ್ಯಕ್ತಪಡಿಸಿದೆ. ಕಾನೂನು ಉಲ್ಲಂಘನೆ ನಡೆಸುವ ಸಂಸ್ಥೆಗಳ ವಿರುದ್ದ 5000 ರಿಯಾಲ್ ವರೆಗೆ ದಂಡ ವಿಧಿಸಲಾಗುವುದು ಎಂದು ಧೂಮಪಾನ ವಿರುದ್ಧದ ಕಾನೂನಿನಲ್ಲಿ ಉಲ್ಲೇಖವಿದೆ. ಹೊಗೆ ಬತ್ತಿ, ಹುಕ್ಕ ಮುಂತಾದ ಎಲ್ಲಾ ಧೂಮಪಾನಗಳನ್ನೂ ನಿಷೇಧಿಸಲಾಗಿದೆ.

ಕಾರ್ಮಿಕರು, ಸಂದರ್ಶಕರ ಸುರಕ್ಷೆ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶದಿಂದ ಖಾಸಗಿ ಸಂಸ್ಥೆಗಳಲ್ಲಿ ಧೂಮಪಾನ ನಿಷೇಧಿಸುವಂತೆ ಆರೋಗ್ಯ ಸಚಿವಾಲಯವು ಕಾರ್ಮಿಕ ಸಚಿವಾಯಕ್ಕೆ ತಿಳಿಸಿತ್ತು.

ಸರಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಈ ಹಿಂದೆಯೇ ಧೂಮಪಾನ ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು.

error: Content is protected !! Not allowed copy content from janadhvani.com