janadhvani

Kannada Online News Paper

ಮಂಗಳೂರು: ರಾಜಕೀಯ ಪಕ್ಷವೊಂದರ ಮುಖಂಡರೊಬ್ಬರು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಬಹಿರಂಗವಾಗಿ ಧಾರ್ಮಿಕ ಉಲಮಾಗಳನ್ನು ಹಾಗೂ  ಶರೀಅತ್ ನ್ನು ನಿಂದಿಸಿ ಮಾತನಾಡಿರುವುದನ್ನು ಎಸ್ಸೆಸ್ಸೆಪ್ ದ.ಕ.ಜಿಲ್ಲಾ ಸಮಿತಿ ಖಂಡಿಸಿದೆ.

ಭಾಷಣವು ವಿವಾದವಾದ ಬಳಿಕ ಧ್ವನಿಸಂದೇಶದ ಮೂಲಕ ಕೊಟ್ಟ ಸ್ಪಷ್ಟೀಕರಣವು ಅಸ್ಪಷ್ಟ ಹಾಗೂ ದ್ವಂದ್ವದಿಂದ ಕೂಡಿದೆ. ಬಹಿರಂಗ ಸಭೆಯಲ್ಲಿ ಮಾಡಿದ ತಪ್ಪಿಗೆ ಬರೀ ಧ್ವನಿಸಂದೇಶದ ಕ್ಷಮೆ ಕೇಳುವ ಮೂಲಕ ತೇಪೆ ಹಚ್ಚಿರುವುದನ್ನು ಸಮುದಾಯ ಒಪ್ಪುವುದಿಲ್ಲ ಎಂದು ಎಸ್ಸೆಸ್ಸೆಫ್ ಅಭಿಪ್ರಾಯಿಸಿದೆ.

ಉಲಮಾಗಳು ಮುಸ್ಲಿಂ‌ ಸಮುದಾಯವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದಾರೆ. ಉಲಮಾಗಳಿಗೆ ಸವಾಲೆಸೆಯುವ ನೈತಿಕ ಹಕ್ಕು ಯಾವುದೇ ರಾಜಕಾರಣಿಗಳಿಗಿಲ್ಲ.
ಎಸ್ಸೆಸ್ಸೆಫ್ ಸಂಘಟನೆಯು ಯಾವುದೇ ರಾಜಕೀಯ ಪಕ್ಷದ ಪರವೂ ಅಲ್ಲ. ವಿರುದ್ಧವೂ ಅಲ್ಲ. ಮತದಾನದಲ್ಲಿ ಎಲ್ಲರೂ ಭಾಗವಹಿಸಿ, ದೇಶದ ಸಂವಿಧಾನವನ್ನು ರಕ್ಷಿಸಬಲ್ಲ ಅಭ್ಯರ್ಥಿಗೆ ಮತಚಲಾಯಿಸುವಂತೆ ದ.ಕ ಜಿಲ್ಲಾ ಎಸ್ಸೆಸ್ಸೆಪ್ ಪತ್ರಿಕಾ ಹೇಳಿಕೆಯಲ್ಲಿ ಕರೆ ‌ನೀಡಿದೆ.

error: Content is protected !! Not allowed copy content from janadhvani.com