ಯುಎಇ ಯಲ್ಲಿ ಕೋಮು ವಿಷಬೀಜ ಬಿತ್ತಲು ಯತ್ನಿಸಿದ ಡಾಕ್ಟರ್ ವಿರುದ್ದ ವ್ಯಾಪಕ ಆಕ್ರೋಶ

ದುಬೈ: ಲೋಕಸಭಾ ಚುನಾವಣೆಯ ಪ್ರಚಾರಾರ್ಥ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಡೆಸಿದ ಕೋಮು ಪ್ರಚೋದಕ ಪರಾಮರ್ಶೆಯನ್ನು ಬೆಂಬಲಿಸಿ ದುಬೈನಲ್ಲಿ ವಾಸವಿರುವ ಭಾರತೀಯ ಡಾಕ್ಟರ್ ಒಬ್ಬರು ಟ್ವೀಟ್ ಮಾಡಿದ್ದಾರೆ.ಅವರ ವಿರುದ್ದ ದುಬೈ ಪೋಲೀಸರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಹಿಂದೂ, ಬೌದ್ಧರು ಮತ್ತು ಸಿಖ್ಖರನ್ನು ಹೊರತುಪಡಿಸಿ ಬಾಕಿ ಉಳಿದಿರುವ ಎಲ್ಲಾ ವಲಸಿಗರನ್ನು ದೇಶದಿಂದ ಹೊರಹಾಕಲಾಗುವುದು ಎನ್ನುವ ಪ್ರಸಂಗವನ್ನು ಬೆಂಬಲಿಸಿ, ಡಾ.ನಿಷಿ ಸಿಂಗ್ ಎನ್ನುವ ಖಾತೆಯಿಂದ ಕೋಮು ಪ್ರಚೋದಕ ಸಂದೇಶ ರವಾನೆಯಾಗಿದೆ.

ಬ್ರಾಹ್ಮಣರಲ್ಲದ ಎಲ್ಲಾ ವಿಶ್ವಾಸಿಗಳ ಏಕ ಉದ್ದೇಶ ಮತಾಂತರವಾಗಿದ್ದು, ಸಮಾಜ ಸೇವೆಯ ನೆಪದಲ್ಲಿ ಲೆಕ್ಕವಿಲ್ಲದಷ್ಟು ಅನಧಿಕೃತ ಹಣವು ಇದಕ್ಕಾಗಿ ಹರಿದುಬರುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದರು. ಕೋಮು ಪ್ರಚೋದನೆಗೆ ಪ್ರೋತ್ಸಾಹ ನೀಡುವ ಈ ನಿಲುವಿನ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಬಾರೀ ಪ್ರತಿಭಟನೆ ಕೇಳಿಬಂದಿದೆ.

ಯುಎಇಯಲ್ಲಿ ಕಳೆದ ಇಪ್ಪತ್ತೈದು ವರ್ಚಗಳಿಂದ ವಾಸವಿರುವುದಾಗಿ ಆತ, ಒಂದು ಚಿಕಿತ್ಸಾ ಕೇಂದ್ರದ ವೆಬ್ ಸೈಟ್ ನಲ್ಲಿ ಬರೆಯುತ್ತಾ ಬಂದಿರುವ ಕಾಲಂನಲ್ಲಿ ವ್ಯಕ್ತಪಡಿಸಲಾಗಿದೆ. ಆದರೆ ನೂರಕ್ಕಿಂತಲೂ ಹೆಚ್ಚು ರಾಷ್ಟ್ರಗಳಿಂದ ಬಂದು ಜಾತಿ, ಮತ, ವರ್ಗ,ಭಾಷೆಗಳ ಬೇಧವಿಲ್ಲದೆ ಕೆಲಸಮಾಡುವ, ಜೀವಿಸುವ ಯುಎಇಯ ಪಾವಿತ್ರ್ಯವನ್ನು ಅವರು ಇನ್ನೂ ಅರ್ಥ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿರೋಧ ಕೇಳಿಬಂದ ನಂತರ ಆಸ್ಪತ್ರೆಯ ವೆಬ್‌ಸೈಟ್ ನಿಂದ ಅವರ ಲೇಖನವನ್ನು ಕಿತ್ತು ಹಾಕಲಾಗಿದೆ. ಯಾವುದೇ ಧರ್ಮದವರನ್ನು ನಿಂದನೆ ಮಾಡುವ ಕಾರ್ಯವನ್ನು ನಿಷೇಧಿಸಿರುವ ರಾಷ್ಟ್ರವಾಗಿದೆ ಯುಎಇ.

Leave a Reply

Your email address will not be published. Required fields are marked *

error: Content is protected !!