janadhvani

Kannada Online News Paper

ಉಪ್ಪಳ ಮೊಗರ್ ಖಿಳ್ರ್ ಜುಮಾ ಮಸೀದಿಯಲ್ಲಿ ಸುವರ್ಣ ಮಹೋತ್ಸವ

ಉಪ್ಪಳ: ಉಪ್ಪಳ ಮೊಗರ್ ಐತಿಹಾಸಿಕ ಖಿಳ್ರ್ ಜುಮಾ ಮಸೀದಿಯಲ್ಲಿ ರಿಫಾಯಿ ದಫ್ ರಾತಿಬ್ ಇದರ ಸುವರ್ಣ ಮಹೋತ್ಸವ ಸಂಭ್ರಮ ಹಾಗೂ 6 ದಿವಸಗಳ ಮತ ಪ್ರಭಾಷಣೆ ನಡೆಯಲಿದೆ.

ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ರಿಫಾಯಿ ದಫ್ ರಾತಿಬ್ ನೇರ್ಚೆಯ 50 ನೇ ವಾರ್ಷಿಕೋತ್ಸವ ಅಂಗವಾಗಿ 6 ದಿವಸಗಳ ಮತ ಪ್ರವಚನ ಕಾರ್ಯಕ್ರಮ 2019 ಎಪ್ರಿಲ್ 1 ರಿಂದ 6 ರ ತನಕ ರಾತ್ರಿ 8 ಗಂಟೆಗೆ ನಡೆಯಲಿದೆ. ಎಪ್ರಿಲ್ 1 ಸೋಮವಾರ ಬೆಳಿಗ್ಗೆ 8 ಗಂಟೆಗೆ ಸ್ಥಳೀಯ ಖತೀಬ್ ಅಬೂಬಕ್ಕರ್ ಹನೀಫಿ ಇವರ ದುಆದೊಂದಿಗೆ ಕೆಜೆಎಂ ಅಧ್ಯಕ್ಷರು ಮಹಮ್ಮದ್ ಕುಞ್ಞಿ ಹಾಜಿಯವರು ಹಾಗೂ ಕಾರ್ಯದರ್ಶಿ ಸತ್ತಾರ್ ಹಾಜಿ ಮಾಕಾಳಿ ಧ್ವಜಾರೋಹಣ ನಡೆಸಿ ಐತಿಹಾಸಿಕ ಸುವರ್ಣ ಮಹೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಿದ್ದಾರೆ.

ರಾತ್ರಿ 8 ಗಂಟೆಗೆ ಸಯ್ಯಿದ್ ಹನೀಫ್ ತಂಙಳ್ ರವರ ದುಆ ದೊಂದಿಗೆ ಚಾಲನೆಗೊಳ್ಳಲಿರುವ ಸಭಾಕಾರ್ಯಕ್ರಮದಲ್ಲಿ ಸಯ್ಯಿದ್ ಅಲಿ ತಂಙಳ್ ಕುಂಬೋಲ್ 50 ನೇ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಉದ್ಘಾಟನೆಗೆಯ್ಯಲಿದ್ದಾರೆ. ಹಲವಾರು ಸಾದಾತುಗಳು ಉಲಮಾಗಳು ಭಾಗವಹಿಸಿ ಈ ಐತಿಹಾಸಿಕ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಭಾಷಣಗೆಯ್ಯಲಿದ್ದಾರೆ.

ಎಪ್ರಿಲ್ 6 ಶನಿವಾರ ರಾತ್ರಿ 8 ಗಂಟೆಗೆ ಸೈಯದ್ ಅತಾವುಲ್ಲ ತಂಙಳ್ ಉದ್ಯಾವರ ಮತಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ತನ್ನ ದುಆದ ಮೂಲಕ ಮುಕ್ತಾಯಗೊಳಿಸಿಲಿದ್ದಾರೆ. ಆದಿತ್ಯವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಬಹು ಮೂಸಾ ದಫ್ ಉಸ್ತಾದರ ನೇತೃತ್ವದಲ್ಲಿ ದಫ್ ರಾತಿಬ್ ನೊಂದಿಗೆ ಸುವರ್ಣ ಮಹೋತ್ಸವವು ಸಮಾಪ್ತಿಗೊಳ್ಳಲಿದೆ.

ವರದಿ : ಹಫೀಝ್ ಇಸ್ಮಾಯಿಲ್ ಕೆ.ಸಿ ರೋಡ್
ಮೀಡಿಯಾ ಟೀಮ್ ಖಿದ್ಮತುಲ್ ಇಸ್ಲಾಮ್ ಫೌಂಢೇಷನ್

error: Content is protected !! Not allowed copy content from janadhvani.com