janadhvani

Kannada Online News Paper

ಕುವೈತ್ ಪ್ರವೇಶಕ್ಕೆ ಅಡ್ಡಿಯುಂಟಾಗುವ ರೋಗಗಳ ಪಟ್ಟಿ ಪರಿಷ್ಕರಣೆ

ಕುವೈತ್ ಸಿಟಿ: ಕುವೈತ್ ಪ್ರವೇಶಕ್ಕೆ ತಡೆಯುಂಟಾಗಬಲ್ಲ ರೋಗಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಹರಡುವ ಹಾಗೂ ಇನ್ನಿತರ ರೋಗಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದ್ದು, ಉದ್ಯೋಗ ವಿಸಾದಲ್ಲಿ ಆಗಮಿಸುವ ಗರ್ಭಿಣಿ ಮಹಿಳೆಯರಿಗೂ ಅನ್ವಯವಾಗಲಿದೆ.

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಮತ್ತು ಅದಕ್ಕಾಗಿ ಬಜೆಟ್‌ನಲ್ಲಿ ಕಾಯ್ದಿರಿಸಲಾಗುವ ಖರ್ಚು ವೆಚ್ಚವನ್ನು ಕಡಿಮೆ ಮಾಡುವುದು ಈ ನಡೆಯ ಉದ್ದೇಶವಾಗಿದೆ. ಮಾರ್ಪಡಿಸಿದ ಪಟ್ಟಿಯಲ್ಲಿ 21 ವೈದ್ಯಕೀಯ ಪರಿಸ್ಥಿತಿಗಳು ಸೇರಿವೆ. ನವೀನ ಪಟ್ಟಿಗಳಲ್ಲಿ ಸಾಂಕ್ರಾಮಿಕ ರೋಗಗಳು ಮತ್ತು ದೃಷ್ಟಿವೈಕಲ್ಯಗಳು ಮುಂತಾದ ದೈಹಿಕ ಅಸಮರ್ಥತೆಗಳು ಒಳಗೊಂಡಿದೆ.

ಎಚ್ಐವಿ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ, ಶ್ವಾಸಕೋಶದ ಸಂಬಂಧಿಸಿದ ಖಾಯಿಲೆ, ಕ್ಷಯ, ಕುಷ್ಠರೋಗ, ಮಲೇರಿಯಾ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಕಿಡ್ನಿ ಸಂಭಂದಿತ ರೋಗಗಳು ಮಧುಮೇಹ ಮತ್ತಿತರ 21 ರೋಗಗಳನ್ನು ಪಟ್ಟಿಮಾಡಲಾಗಿದೆ. ಸಾಂಕ್ರಾಮಿಕ ರೋಗಗಳೊಂದಿಗೆ ಕಣ್ಣು ವೈಕಲ್ಯಗಳು ಪ್ರವೇಶ ತಡೆಗೆ ಕಾರಣವಾಗಲಿದೆ.

ಆದರೆ ಆಶ್ರಿತ ವಿಸಾದಲ್ಲಿ ಆಗಮಿಸುವ ಗರ್ಭಿಣಿ ಮಹಿಳೆಯರ ಪ್ರವೇಶಕ್ಕೆ ಅಡ್ಡಿ ಉಂಟಾಗದು.
ಊರಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ರೋಗ ಸಾಬೀತಾದರೆ ತಕ್ಷಣ ಕುವೈತ್ ಪ್ರವೇಶವನ್ನು ತೆಡೆಯಲಾಗುವುದು. ಕುವೈತ್ ತಲುಪಿದ ನಂತರ ರೋಗದ ಬಗ್ಗೆ ತಿಳಿದು ಬಂದರೆ ಇಖಾಮಾ ನೀಡದೆ ರೋಗಿಯನ್ನು ಹಿಂದಕ್ಕೆ ಕಳುಹಿಸಲಾಗುವುದು.

ಪ್ರಸಕ್ತ ವಾಸ ಪರವಾನಗಿ ಇರುವವರ ಪೈಕಿ ಕ್ಷಯರೋಗ ಎಯ್ಡ್ಸ್, ಹೆಪಟೈಟಿಸ್ ಬಿ., ಹೆಪಟೈಟಿಸ್ ಸಿ., ಮುಂತಾದವುಗಳನ್ನು ಬಿಟ್ಟು ಪಟ್ಟಿಯಲ್ಲಿರುವ ಇನ್ನಿತರ ರೋಗಗಳಿಗಾಗಿ ಗಡಿಪಾರು ಮಾಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com