janadhvani

Kannada Online News Paper

ದಾರುಲ್ ಹುದಾ ತಂಬಿನಮಕ್ಕಿ ಬೆಳ್ಳಾರೆ ಅಬುದಾಬಿ ಸಮಿತಿ ವತಿಯಿಂದ ಬೃಹತ್ ಜಲ್ಸತುಲ್ ಖಾದಿರಿಯಾ ಮಜ್ಲಿಸ್

ದಾರುಲ್ ಹುದಾ ತಂಬಿನಮಕ್ಕಿ ಬೆಳ್ಳಾರೆ ಅಬುದಾಬಿ ಸಮಿತಿ ವತಿಯಿಂದ ಬೃಹತ್ ಜಲ್ಸತುಲ್ ಖಾದಿರಿಯಾ ಮಜ್ಲಿಸ್ ಹಾಗೂ ನೂತನ ಸಮಿತಿ ರಚನೆ ದಿನಾಕ 20-10-2024 ಆದಿತ್ಯವಾರ ರಾತ್ರಿ 8 ಗಂಟೆಗೆ ಕೆ.ಸಿ.ಎಫ್. ಅಬುಧಾಬಿ ಆಡಿಟೋರಿಯಂ ನಲ್ಲಿ ಅತ್ಯಂತ ವಿಜ್ರುಂಭಣೆಯಿಂದ ನಡೆಸಲಾಯಿತು.

ಕೆಸಿಎಫ್ ಅಬುದಾಬಿ ಝೋನ್ ಅಧ್ಯಕ್ಷರಾದ ಹಸೈನಾರ್ ಅಮಾನಿ ಅಜ್ಜಾವರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಬಹು ಮುಸ್ತಫಾ ಸಖಾಫಿ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಹಸೈನಾರ್ ಅಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಸಂಸ್ಥೆಯ ಸಾರಥಿ ಬಹು ಖಲೀಲ್ ಹಿಮಮಿ ಸಖಾಫಿ ಮಾತನಾಡಿ ಸಮುದಾಯದ ಬಡ ನಿರ್ಗತಿಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ದಾರುಲ್ ಹುದಾ ತಂಬಿನಮಕ್ಕಿ ಕಳೆದ ಸುಮಾರು ವರ್ಷಗಳಿಂದ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳನ್ನು ಸವಿವರವಾಗಿ ವಿವರಿಸಿದರು.

ಬೆಂಗಳೂರು ಸರದಿಯ ಫೌಂಡೇಶನ್ ಸಾರಥಿ ಬಹು ಶಾಫಿ ಶಾದಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ 2024-25 ಸಾಲಿನ ನೂತನ ಸಮಿತಿಯನ್ನು ಈ ಕೆಳಗಿನಂತೆ ರಚಿಸಲಾಯಿತು. ಕೊನೆಯಲ್ಲಿ ಮುಸ್ತಫಾ ನಿಂತಿಕ್ಕಲ್ ವಂದಿಸಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಗಿದೆ

ನೂತನ ಸಮಿತಿ 2024-25

ಸಲಹಾ ಮಂಡಳಿ ಅಬ್ದುಲ್ ಹಮೀದ್ ಸಅದಿ, ಹಸೈನಾರ್ ಅಮಾನಿ, ಕೆ.ಹೆಚ್. ಮುಹಮ್ಮದ್ ಕುಂಞಿ ಸಖಾಫಿ, ಪಿ.ಎಂ.ಅಬ್ದುಲ್ ಹಮೀದ್ ,ಇಬ್ರಾಹಿಂ ಬ್ರೈಟ್ ಮಾರ್ಬಲ್, ಹಾಜಿ ಮುಹಮ್ಮದ್ ಅಲಿ ಬ್ರೈಟ್ ಮಾರ್ಬಲ್

ಅಧ್ಯಕ್ಷರು :- ಮುಸ್ತಫಾ ಸಖಾಫಿ ಕಳಂಜ

ಉಪಾಧ್ಯಕ್ಷರು -ಇಸ್ಮಾಯಿಲ್ ಅಹ್ಸನಿ, ಮುನೀರ್ ಅಲೆಕ್ಕಾಡಿ, ಗಫೂರ್ ಸಂಪಾಜೆ

ಪ್ರಧಾನ ಕಾರ್ಯದರ್ಶಿ – ಮುಸ್ತಫಾ ನಿಂತಿಕ್ಕಲ್

ಜೊತೆ ಕಾರ್ಯದರ್ಶಿ – ಅಶ್ರಫ್ ಬೆಳ್ಳಾರೆ, ಇರ್ಷಾದ್ ಪೆರುವಾಜೆ, ಜಲಾಲ್ ಬೆಳ್ಳಾರೆ

ಕೋಶಾಧಿಕಾರಿ :-ಮುಹಮ್ಮದ್ ಶಾಫಿ ಮಾಡಾವು

ಸಂಯೋಜಕರು:- ಮುಕ್ತಾರ್ ಹಿಮಾಮಿ ಸಖಾಫಿ ಮೇನಾಲ.

error: Content is protected !! Not allowed copy content from janadhvani.com