ಇಡೀ ದಿನ ನೂರಾರು ಪ್ರತಿಭೆಗಳ ಕಲರವ
ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ ” ನಿರೀಕ್ಷೆಗಳ ನೀಲ ನಕ್ಷೆ ” ಎಂಬ ಸ್ಲೋಗನ್ ನೊಂದಿಗೆ ಸಾಹಿತ್ಯೋತ್ಸವ ಕಾರ್ಯಕ್ರಮವು ಅಕ್ಟೋಬರ್ 20 ಇದೇ ಆದಿತ್ಯವಾರ ಸೂರಿಕುಮೇರು ಮಸೀದಿ ಬಳಿಯ ಆಟದ ಮೈದಾನ ನಲ್ಲಿ ನಡೆಯಲಿದೆ. ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ದುಆ ನಡೆಸಿಕೊಡುವರು,ಬಂಡಾಡಿ ಮುಹಮ್ಮದ್ ಹಾಜಿ ಸೂರಿಕುಮೇರು, ಧ್ವಜಾರೋಹಣ ಮಾಡುವರು,ಪತ್ರಕರ್ತ ಅಬ್ದುಲ್ ಲತೀಫ್ ನೇರಳಕಟ್ಟೆ ಸಹಿತ ಆರು ಯುನಿಟ್ ವ್ಯಾಪ್ತಿಯ ಎಲ್ಲಾ ನಾಯಕರುಗಳು ಗಣ್ಯ ಅತಿಥಿಗಳಾಗಿ ಭಾಗವಹಿಸುವರು,ಬಳಿಕ ಮಾಣಿ ಸೆಕ್ಟರ್ ವ್ಯಾಪ್ತಿಯ ಪಾಟ್ರಕೋಡಿ, ಮಿತ್ತೂರು, ಸೂರ್ಯ,ನೇರಳಕಟ್ಟೆ, ಶೇರಾ ಬುಡೋಳಿ,ಸೂರಿಕುಮೇರು ಯುನಿಟ್ ಗಳ ಪ್ರತಿಭೆಗಳ ಮಧ್ಯೆ ಸಾಹಿತ್ಯೋತ್ಸವ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.
ಸಂಜೆ ಸಮರೋಪ ಸಮಾರಂಭ ನಡೆಯಲಿದೆ,ಕಾರ್ಯಕ್ರಮದಲ್ಲಿ ಉಲಮಾ ಉಮರಾ ಸಾಮಾಜಿಕ ನಾಯಕರುಗಳು,ಸೆಕ್ಟರ್, ಯುನಿಟ್, ಪ್ರತಿನಿಧಿಗಳು, ಭಾಗವಹಿಸಲಿರುವರು,ಮರ್‌ಹೂಂ ಸರ್ಫ್ರಾಝ್ ನೆಲ್ಲಿ ನಗರ,ಮರ್‌ಹೂಂ ಅಬ್ಬಾಸ್ ಪಟ್ಲಕೋಡಿ ವೇದಿಕೆ, ಮರ್‌ಹೂಂ ಇರ್ಶಾದ್ ಉಮ್ಮರ್ ವೇದಿಕೆ, ಮರ್‌ಹೂಂ ಬಿನ್ಯಾಮಿನ್ ಝುಹ್ರಿ ವೇದಿಕೆ, ಮರ್‌ಹೂಂ ಅಬ್ದುಲ್ ರಝಾಕ್ ವೇದಿಕೆ ಗಳಲ್ಲಿ ಕಾರ್ಯಕ್ರಮ ಮತ್ತು ಸ್ಪರ್ಧೆಗಳು ನಡೆಯಲಿದೆ ಎಂದು ಸೆಕ್ಟರ್ ಅಧ್ಯಕ್ಷ ಸಾಬಿತ್ ಪಾಟ್ರಕೋಡಿ, ಕಾರ್ಯದರ್ಶಿ ಮುಬಶ್ಶಿರ್ ಸಅದಿ ಸೂರಿಕುಮೇರು, ಕೋಶಾಧಿಕಾರಿ ಇಮ್ರಾನ್ ಮಾಣಿ ಮತ್ತು ಸ್ವಾಗತ ಸಮಿತಿ ಚೇರ್ಮನ್ ಹನೀಫ್ ಸಂಕ,ಕನ್ವೀನರ್ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಫೈನಾನ್ಸ್ ಸೆಕ್ರೆಟರಿ ಯೂಸುಫ್ ಹಾಜಿ,ಮಾಧ್ಯಮ ಕಾರ್ಯದರ್ಶಿ ಸಲೀಂ ಮಾಣಿ ಪ್ರಕಟಣೆಯಲ್ಲಿ ತಿಳಿಸಿದರು.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ