ಸೌದಿ ಅರೇಬಿಯಾ: ಉಮ್ರಾ ನಿರ್ವಹಸಲು ಕುಟುಂಬದೊಂದಿಗೆ ಊರಿನಿಂದ ಮಕ್ಕ ಮದೀನಾ ಯಾತ್ರೆ ಮುಗಿಸಿ ಕುಟುಂಬದವರು ಊರಿಗೆ ತಲುಪಿದ್ದರೂ ಉಸ್ತಾದರು ಮಾತ್ರ ಸ್ನೇಹಿತರನ್ನು ಹಾಗು ಇತರ ಸಹಪಾಠಿಗಳನ್ನು ಕಾಣಲು ದಮ್ಮಾಮ್ ಕಡೆ ಬಂದಿದ್ದರು, ಊರಿಗೆ ಹೊರಡಲು ತಯಾರಿಯಲ್ಲಿದ್ದ ಅಬ್ದುಲ್ಲಾ ಮದನಿ ಉಸ್ತಾದರು ಅನಾರೋಗ್ಯದಿಂದ ದಮ್ಮಾಮ್ ನಲ್ಲಿ ಸ್ನೇಹಿತನ ಕೊಠಡಿಯಲ್ಲಿ ನಿಧನರಾಗಿದ್ದರು.ಮರಣೋತ್ತರ ಕ್ರೀಯೆಗೆ ಬೇಕದ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಕೂಡಲೇ ಸ್ಪಂದಿಸಿ ದಾಖಲೆ ಪತ್ರ ಹಾಗೂ ಭಾರತೀಯ ರಾಯಬಾರಿ ಕಛೇರಿ ಹಾಗು ಇನ್ನಿತರ ವ್ಯವಸ್ಥೆಗಳನ್ನು ಸರಿಪಡಿಸಿ ಅಕ್ಟೋಬರ್ 15 ರಂದು ದಮ್ಮಾಮ್ ನಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು.
ಮೃತರು.ತಾಯಿ ಹೆಂಡತಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಈ ಕಾರ್ಯದಲ್ಲಿ ಸಹಕರಿಸಿದ ಕೆ.ಸಿ.ಎಫ್ ದಮ್ಮಾಮ್ ಝೋನ್ ಸಾಂತ್ವನ ತಂಡದ ನಾಯಕರಾದ ಬಾಷಾ ಗಂಗಾವಳಿ, ನಾರ್ತ್ ಸೆಕ್ಟರ್ ನಾಯಕರಾದ ಅಶ್ರಫ್ ಕುತ್ತಾರು, ಅಝೀಝ್ ಮುಸ್ಲಿಯಾರ್ ಕುತ್ತಾರು, ಹಬೀಬ್ ಸಖಾಫಿ ಹಾಗು ಇನ್ನಿತರ ಸಂಘ ಕುಟುಂಬದ ನಾಯಕರ (ICF, ಸಅದಿಯಾ) ಸಹಕಾರದಿಂದ ದಫನ ಕಾರ್ಯ ನೆರೆವೇರಿಸಲಾಯಿತು.ದಮ್ಮಾಮ್ 91 ನಲ್ಲಿ ಅಂತ್ಯಕ್ರೀಯೆ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಕೆ.ಸಿ.ಎಫ್ ಹಾಗು ಸಅದಿಯಾದ ಹಿರಿಯ ನಾಯಕರಾದ ಯೂಸುಫ್ ಸಅದಿ ಅಯ್ಯಂಗೇರಿ, ಕೆ.ಸಿ.ಎಫ್ ದಾಅಿ PC ಅಬೂಬಕರ್ ಸಅದಿ ಹಾಗು ಇನ್ನಿತರ ಹಲವಾರು ಸಂಘ ಕುಟುಂಬದ ನಾಯಕರು ಬಾಗಿಯಾಗಿ ಮೃತರಿಗಾಗಿ ದುಆ ನೆರೆವೇರಿಸಲಾಯಿತು.