ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉತ್ಸಾಹಿ ಸಮಾಜ ಸೇವಕ ಗೌರವಾನ್ವಿತ ಆಲಿಕುಂಞಿ ಹಾಜಿ ಪಾರೆ ಗೆ ಕಿನ್ಯ ಪ್ರದೇಶದ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ ಯು ಸುನ್ನೀ ಕೋ ಆರ್ಡಿನೇಶನ್ ಸಮಿತಿ ಅಧ್ಯಕ್ಷ ವಿ.ಎ ಮುಹಮ್ಮದ್ ಮುಸ್ಲಿಯಾರ್ ಕೂಡಾರ ರವರ ಅಧ್ಯಕ್ಷತೆಯಲ್ಲಿ ಕಿನ್ಯ ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ನಡೆಯಿತು.
SჄS ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ನಮ್ಮನ್ನಗಲಿದ ನಾಯಕ ಹಾಜಿ ಮುಮ್ತಾಝ್ ಅಲಿ ಕೃಷ್ಣಾಪುರ ರವರ ಅನುಸ್ಮರಣಾ ಮಜ್ಲಿಸ್ ನಲ್ಲಿ ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್ ಕಿನ್ಯ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಬಿ.ಎಂ ಇಸ್ಮಾಈಲ್ ಹಾಜಿ ಪರಮಾಂಡ,ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಹಾಜಿ ಸಾಗ್,ಪತ್ರಕರ್ತ ಪಿ.ಕೆ ಬಷೀರ್ ಅಹ್ಮದ್ ಕಿನ್ಯ,SჄS ಕಿನ್ಯ ಸರ್ಕಲ್ ಉಪಾಧ್ಯಕ್ಷ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಸಮಾರಂಭದಲ್ಲಿ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ನಾಯಕ ಅಬ್ಬಾಸ್ ಖುತುಬಿನಗರ,ಕೆ.ಎಚ್ ಮೂಸಕುಂಞಿ ಬದ್ರಿಯಾ ನಗರ,ಹಸನ್ ಉಕ್ಕುಡ,ಆಲಿಕುಂಞಿ ಮೀಂಪ್ರಿ,ಮಹ್ಮೂದ್ ಉಳ್ಳಾಲ,ಆಲಿಕುಂಞಿ ಬಾಕಿಮಾರ್, SჄS ಕಿನ್ಯ ಸರ್ಕಲ್ ಇಸಾಬ ಕಾರ್ಯದರ್ಶಿ ಬಷೀರ್ ಲತೀಫಿ ಕುರಿಯ, ಸಾಂತ್ವನ ಕಾರ್ಯದರ್ಶಿ ಅಯ್ಯೂಬ್ ಖುತುಬಿನಗರ,ಉಮರ್ ಝುಹ್ರಿ ಬದ್ರಿಯಾ ನಗರ, ಕೆಸಿಎಫ್ ಕಾರ್ಯಕರ್ತ ಇಬ್ರಾಹೀಂ ಖಲೀಲ್, ಎಸ್ಸೆಸ್ಸೆಫ್ ನಾಯಕ ಹಸೈನಾರ್ ಮೀಂಪ್ರಿ ಮುಂತಾದವರು ಉಪಸ್ಥಿತರಿದ್ದರು.
ಸುನ್ನೀ ಕೋ ಆರ್ಡಿನೇಶನ್ ಸಮಿತಿ ಕೋಶಾಧಿಕಾರಿ ನೌಫಲ್ ಅಹ್ಸನಿ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮೀಂಪ್ರಿ ಧನ್ಯವಾದ ಅರ್ಪಿಸಿದರು.