janadhvani

Kannada Online News Paper

ಕೃಷ್ಣಾಪುರಕ್ಕೆ ಜಮಲುಲ್ಲಯ್ಲಿ ತಂಙಳ್, ಸಿ. ಫೈಝಿ ಉಸ್ತಾದ್

ಇತ್ತೀಚೆಗೆ ನಮ್ಮನ್ನು ಅಗಲಿದ ಹಾಜಿ ಬಿ ಎಂ ಮುಂತಾಝ್ ಅಲಿ ಅವರಿಗೆ ಸಂತಾಪ ಸೂಚಿಸಲು ಮತ್ತು ಪ್ರಾರ್ಥನೆ ನಡೆಸಲು ಕೋಝಿಕ್ಕೋಡ್ ಮರ್ಕಝ್ ಸಖಾಫತಿ ಸ್ಸುನ್ನಿಯ್ಯಾ ಉಪಾಧ್ಯಕ್ಷ ಸಯ್ಯಿದ್ ಶರಫುದ್ದೀನ್ ಜಮಲುಲ್ಲಯ್ಲಿ ತಂಙಳ್ ಚೇಲಾರಿ, ಕೇರಳ ಹಜ್ ಕಮಿಟಿ ಚೇರ್ಮ್ಯಾನ್ ಉಸ್ತಾದ್ ಸಿ ಮುಹಮ್ಮದ್ ಫೈಝಿ, ಮರ್ಕಝ್ ಸೆಕ್ರೆಟರಿ ಅಕ್ಬರ್ ಬಾದುಷಾ ಸಖಾಫಿ ತ್ರಿಶೂರ್,ಮರ್ಕಝ್ ಕೋ ಆರ್ಡಿನೇಟರ್ ಸಿ ಪಿ ಸಿರಾಜುದ್ದೀನ್ ಸಖಾಫಿ ಕಾಂತಪುರಂ ಮುಂತಾದವರು ಶುಕ್ರವಾರ (ಅಕ್ಟೋಬರ್ 11) ಕೃಷ್ಣಾಪುರಕ್ಕೆ ಆಗಮಿಸಲಿದ್ದಾರೆ.

ಕೃಷ್ಣಾಪುರ ಏಳನೇ ಬ್ಲಾಕ್ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಜುಮಾ ಪ್ರಾರ್ಥನೆಯಲ್ಲಿ ಪಾಲ್ಗೊಂಲ್ಲುವ ಇವರು ಬಳಿಕ ಮುಂತಾಝ್ ಅಲಿ ಅವರ ಮನೆಗೆ ಭೇಟಿ ನೀಡಿ ಸಂದರ್ಶನ ನಡೆಸಲಿದ್ದಾರೆ.