ಕೆಸಿಎಫ್ ಒಮಾನ್ ಇದರ ಹಿರಿಯ ನೇತಾರ, ಪಬ್ಲಿಷಿಂಗ್ ವಿಭಾಗದ ಅಧ್ಯಕ್ಷರು, ರುವಿ ಸೆಕ್ಟರಿನ ಅಧ್ಯಕ್ಷರಾಗಿಯೂ ತನ್ನ ಪ್ರವಾಸಿ ಜೀವನದ ಬಿಡುವು ಸಮಯವನ್ನು ಕೆಸಿಎಫ್ ಗೆ ಬೇಕಾಗಿ
ಮುಡಿಪಾಗಿಟ್ಟ ಅಕ್ಬರ್ ಉಪ್ಪಳ್ಳಿ ಯವರಿಗೆ ನಿನ್ನೆ ನಡೆದ ಸ್ವಲಾತ್ ಕಾರ್ಯಕ್ರಮದಲ್ಲಿ ಆತ್ಮೀಯ ವಾಗಿ ಬೀಳ್ಕೊಡಲಾಯಿತು. ಪ್ರಸ್ತುತ ಅವರು ಪ್ರವಾಸಿ ಜೀವನಕ್ಕೆ ವಿರಾಮ ಹೇಳಿ ತಾಯ್ನಾಡಿನಲ್ಲಿಯೇ ನೆಲೆಸಲು ಉದ್ದೇಶಿಸಿದ್ದಾರೆ. ಪ್ರಸ್ತುತ ಕಾರ್ಯಕ್ರಮ ದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಅಧ್ಯಕ್ಷರಾದ ಸಯ್ಯಿದ್ ಆಬಿದ್ ತಂಗಳ್, ಪ್ರ.ಕಾರ್ಯದರ್ಶಿ ಹನೀಫ್ ಸ ಅದಿ, ಸಂಘಟನಾ ಅಧ್ಯಕ್ಷರಾದ ಹಂಝ ಕನ್ನಂಗಾರ್, ಮೀಡಿಯಾ ಅಧ್ಯಕ್ಷ ಆರಿಫ್ ಕೊಡಿ, ಇಹ್ಸಾನ್ ಅಧ್ಯಕ್ಷ ಶಮೀರ್ ಉಸ್ತಾದ್, ಎಜುಕೇಶನ್ ಅಧ್ಯಕ್ಷ ಅಯ್ಯೂಬ್ ಕೊಡಿ, ಕಾರ್ಯದರ್ಶಿ ಉಬೈದುಲ್ಲಾ ಸಖಾಫಿ ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ನಾಯಕರುಗಳು, ಝೋನ್ ನೇತಾರರು ಭಾಗವಹಿಸಿದರು.