janadhvani

Kannada Online News Paper

ಅವನ್ ಮೋಟಾರ್ಸ್ ನಿಂದ ‘ಟ್ರೆಂಡ್ ಇ’ ಎಲೆಕ್ಟ್ರಿಕ್ ಸ್ಕೂಟರ್- ಬುಕಿಂಗ್ ಆರಂಭ

ಈ ವರದಿಯ ಧ್ವನಿಯನ್ನು ಆಲಿಸಿ

ಬೆಂಗಳೂರು(ಮಾ.22): ಅವನ್ ಮೋಟಾರ್ಸ್ ನೂತನ ಟ್ರೆಂಡ್ ಇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಅವನ್ ಮೋಟಾರ್ಸ್ ಈಗಾಗಲೇ Xero ಹಾಗೂ Xero+ ಸ್ಕೂಟರ್ ಬಿಡುಗಡೆ ಮಾಡಿದೆ. ಇದೀಗ ಟ್ರೆಂಡ್ ಸ್ಕೂಟರ್ ಲಾಂಚ್ ಮಾಡಿದೆ. ನೂತನ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 56,900 ರೂಪಾಯಿ.

ಬೇಸ್ ವೆರಿಯೆಂಟ್ ಬೆಲೆ 56,900 ರೂಪಾಯಿ. ಇನ್ನು ಟಾಪ್ ಮಾಡೆಲ್ ಬೆಲೆ 81,269 ರೂಪಾಯಿ. 16 ಇಂಚಿನ ಅಲೋಯ್ ವೀಲ್ಹ್, ಫ್ರಂಟ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಟ್ರೆಂಡ್ ಸ್ಕೂಟರ್‌ನಲ್ಲಿ ಎರಡು ಬ್ಯಾಟರಿ ಬಳಲಸಾಗಿದೆ. ಮೊದಲ ಬ್ಯಾಟರಿಯಿಂದ 60 ಕಿ.ಮೀ ಹಾಗೂ ಎರಡನೇ ಬ್ಯಾಟರಿ ಸೇರಿ ಒಟ್ಟು 110 ಕಿ.ಮೀ ರೇಂಜ್ ಪ್ರಯಾಣ ಮಾಡಬಹುದು. ಗರಿಷ್ಠ ವೇಗ 45KMPH.

ಪುಣೆ ಮೂಲದ ಅವನ್ ಮೋಟಾರ್ಸ್ ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಅವನ್ ಮೋಟಾರ್ಸ್  ಡೀಲರ್‌ಶಿಪ್ ಹೊಂದಿದೆ. ಮಹಾರಾಷ್ಟ್ರದಲ್ಲೇ 30 ಡೀಲರ್‌ಶಿಪ್ ಹೊಂದಿದೆ. ಪ್ರತಿ ತಿಂಗಳು 1,000 ಸ್ಕೂಟರ್ ಮಾರಾಟ ಮಾಡುವ ಗುರಿ ಇಟ್ಟುಕೊಂಡಿದೆ.

error: Content is protected !! Not allowed copy content from janadhvani.com