janadhvani

Kannada Online News Paper

ಹಿಂದೂ ಧರ್ಮ ರಕ್ಷಕರು ಪ್ರಧಾನಿಯಾಗಲಿ – ಪೇಜಾವರ ಶ್ರೀ

ಗಂಗಾವತಿ: ದೇಶದ ರಕ್ಷಣೆ, ಅಭಿವೃದ್ಧಿಯ ಜತೆಗೆ ಹಿಂದೂಧರ್ಮಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಹೇಳಿದರು.

ತಾಲೂಕಿನ ಆನೆಗೊಂದಿ ಬಳಿಯ ನವಬೃಂದಾವನ ಗಡ್ಡೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ಅಥವಾ ಬೇರೆ ರಾಜ್ಯ ಆಯ್ಕೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟ ತೀರ್ಮಾನ. ನಾವು ಯಾವುದೇ ಪಕ್ಷ ಕ್ಕೆ ಸೀಮಿತವಲ್ಲ. ಮಠದ ಭಕ್ತರು, ನಮ್ಮ ಶಿಷ್ಯ ವೃಂದ ಎಲ್ಲ ಪಕ್ಷದಲ್ಲೂ ಇದ್ದಾರೆ. ಸಲಹೆ-ಸೂಚನೆ ಕೇಳಿದ ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತೇವೆ. ಪ್ರಧಾನಮಂತ್ರಿ ಆಯ್ಕೆ ವಿಚಾರದಲ್ಲಿ ಜನರು ದೇಶದ ಅಭಿವೃದ್ಧಿ ದೃಷ್ಟಿಯನ್ನಿಟ್ಟುಕೊಂಡು ಸೂಕ್ತ ನಾಯಕರನ್ನು ಆಯ್ಕೆ ಮಾಡಬೇಕು. ರಾಜಕೀಯ ಮಾಡುವುದು ನನಗೆ ಇಷ್ಟವಿಲ್ಲ. ಚುನಾವಣೆಯಿಂದ ನಾವು ದೂರ. ಸದ್ಯ ಹಿಂದೂ ಧರ್ಮದ ಬಗ್ಗೆ ಪ್ರಚಾರ ಮಾಡುವುದಷ್ಟೇ ನನ್ನ ಕೆಲಸ ಎಂದರು.

ವ್ಯಾಸರಾಜ ಮಠದ ಪೀಠಾಧಿಪತಿ ವಿದ್ಯಾಶ್ರೀಶ ತೀರ್ಥರು, ಪೇಜಾವರ ಮಠದ ಕಿರಿಯ ಸ್ವಾಮಿ ವಿದ್ಯಾಪ್ರಸನ್ನ ತೀರ್ಥರು ಸೇರಿ ಇತರರು ಇದ್ದರು. 

error: Content is protected !! Not allowed copy content from janadhvani.com